ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ಕೊಟ್ಟ ಬೆನ್ನಲ್ಲೇ ವಿದ್ಯುತ್ ದರದ ಬಗ್ಗೆ ಸ್ಪಷ್ಟನೆ ನೀಡಿದ ಬೆಸ್ಕಾಂ

ಯೂನಿಟ್ ದರ (Unit Price) ಹೆಚ್ಚಳ ಮಾಡಲಾಗಿಲ್ಲ, ವಿದ್ಯುತ್ ಬಿಲ್ (Electricity Bill) ನಲ್ಲಿ ಇಂಧನ ಮತ್ತು ವಿದ್ಯುತ್ ದರ ಹೊಂದಾಣಿಕೆ ವೆಚ್ಚ ದ ಬಗ್ಗೆ ವಿವರಣೆಗಳು ಇರುತ್ತವೆ ಹಾಗೂ ಈ ಶುಲ್ಕವನ್ನು ಜನರಿಂದಲೇ ಸಂಗ್ರಹಿಸಲಾಗುತ್ತದೆ ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.

ವಿದ್ಯುತ್ (electricity) ಇಲ್ಲದೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ, ಕೃಷಿ ಇರಲಿ ಅಥವಾ ಯಾವುದೇ ಚಟುವಟಿಕೆ ಇರಲಿ ಪ್ರತಿದಿನ ವಿದ್ಯುತ್ ಅಂತ ಬೇಕೇ ಬೇಕು. ಆದರೆ ಜನರ ಬೇಡಿಕೆ ಹೆಚ್ಚಾದ ಹಾಗೆ ಅದಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ

ಇದಕ್ಕೆ ಮುಖ್ಯವಾದ ಕಾರಣ ಈ ವರ್ಷ ಕಡಿಮೆ ಆಗಿರುವ ಮಳೆ. ಮಳೆಯ ಅಭಾವದಿಂದಾಗಿ ಜನರ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ, ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸರ್ಕಾರ (government) ಬೇರೆ ಬೇರೆ ಉಪಕ್ರಮ (initiative) ಕೈಗೊಳ್ಳುತ್ತಿದೆ

ಇದರ ನಡುವೆ ಲೋಡ್ ಶೆಡ್ಡಿಂಗ್ (load shedding) ಹಾಗೂ ಯೂನಿಟ್ ದರ ಹೆಚ್ಚಳ ಎನ್ನುವ ಬಿಸಿ ಜನರನ್ನ ತಟ್ಟಿದೆ.

ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ಕೊಟ್ಟ ಬೆನ್ನಲ್ಲೇ ವಿದ್ಯುತ್ ದರದ ಬಗ್ಗೆ ಸ್ಪಷ್ಟನೆ ನೀಡಿದ ಬೆಸ್ಕಾಂ - Kannada News

ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೊಸ ಅಪ್ಡೇಟ್! ಹಬ್ಬಕ್ಕೆ ಮಹಿಳೆಯರಿಗೆ ವಿಶೇಷ ಗಿಫ್ಟ್ ಕೊಡಲಿದೆ ಸರ್ಕಾರ

ವಿದ್ಯುತ್ ದರದಲ್ಲಿ ಹೆಚ್ಚಳ;

ಇಂಧನ ಹಾಗೂ ವಿದ್ಯುತ್ ಖರೀದಿ ಹೊಂದಾಣಿಕೆ ದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಈಗಾಗಲೇ ಸಾಕಷ್ಟು ಸುದ್ದಿಗಳು ಹಬ್ಬಿವೆ. ವಿದ್ಯುತ್ ಯೂನಿಟ್ (unit value) ದರವನ್ನು 1.01 ರೂಪಾಯಿಗಳಿಗೆ ಏರಿಕೆ (Electricity Bill) ಮಾಡಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ, ಇದೀಗ ಬೆಸ್ಕಾಂ ಎಲ್ಲಾ ಗೊಂದಲಗಳಿಗೆ ಉತ್ತರ ನೀಡಿದೆ.

ಬೆಸ್ಕಾಂ ಈಗಾಗಲೇ ನೀಡಿರುವ ಸ್ಪಷ್ಟನೆ ಪ್ರಕಾರ ಸರ್ಕಾರದಿಂದ ಯಾವುದೇ ರೀತಿಯ ಯೂನಿಟ್ ದರ (Unit Price) ಹೆಚ್ಚಳ ಮಾಡಲಾಗಿಲ್ಲ, ವಿದ್ಯುತ್ ಬಿಲ್ (Electricity Bill) ನಲ್ಲಿ ಇಂಧನ ಮತ್ತು ವಿದ್ಯುತ್ ದರ ಹೊಂದಾಣಿಕೆ ವೆಚ್ಚ ದ ಬಗ್ಗೆ ವಿವರಣೆಗಳು ಇರುತ್ತವೆ ಹಾಗೂ ಈ ಶುಲ್ಕವನ್ನು ಜನರಿಂದಲೇ ಸಂಗ್ರಹಿಸಲಾಗುತ್ತದೆ ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.

ದರ ಹೆಚ್ಚಳ ಮಾಡಲಾಗಿಲ್ಲ ಆದರೆ ವಿದ್ಯುತ್ ಪೂರೈಕೆಗಾಗಿ ಸರ್ಕಾರ ಶತಾಯಗತಾಯ ಕಷ್ಟ ಪಡುವಂತಾಗಿದೆ, ಬೇರೆ ರಾಜ್ಯಗಳಿಂದ (Other States) ವಿದ್ಯುತ್ ಖರೀದಿ ಮಾಡಲು ಕೂಡ ಪ್ಲಾನಿಂಗ್ ನಡೆಯುತ್ತಿದೆ ಎನ್ನುವ ಮಾಹಿತಿ ಇದೆ.

ಇಂತಹ ರೇಷನ್ ಕಾರ್ಡ್ ಇರೋರು ದೇಶದ ಯಾವುದೇ ಜಾಗದಲ್ಲಿ ರೇಷನ್ ತಗೋಬಹುದು! ಹೇಗೆ ತಿಳಿಯಿರಿ

ಲೋಡ್ ಶೆಡ್ಡಿಂಗ್ ಸಮಸ್ಯೆ?

Electricity Billವಿದ್ಯುತ್ ಅಭಾವದಿಂದ ಗ್ರಾಮೀಣ ಪ್ರದೇಶದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಗಳು ಆರಂಭವಾಗಿದೆ. ಕೃಷಿ ಚಟುವಟಿಕೆಗಳಿಗೂ ಕೂಡ ವಿದ್ಯುತ್ ಬಹಳ ಮುಖ್ಯವಾಗಿ ಬೇಕು, ಆದರೆ ರೈತರಿಗೆ ಅನುಕೂಲವಾಗುವಷ್ಟು ವಿದ್ಯುತ್ ಪೂರೈಕೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.

ವಿದ್ಯುತ್ ಉತ್ಪಾದನೆಗೆ ಮೂಲ ಸಂಪನ್ಮೂಲ ಅಂದ್ರೆ ಮಳೆ, ಆದರೆ ಈ ಬಾರಿ ಮಳೆ (Rain) ಬಹಳ ಕಡಿಮೆಯಾಗಿದೆ ಇದರಿಂದ ಯಾವ ಜಲಾಶಯದ ಮಟ್ಟವೂ ಪೂರ್ಣಗೊಂಡಿಲ್ಲ. ವಿದ್ಯುತ್ ಉತ್ಪಾದನೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ.

ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವವರಿಗೆ ಸಿಹಿಸುದ್ದಿ! ಹಬ್ಬಕ್ಕೆ ರೈತರಿಗೆ ವಿಶೇಷ ಉಡುಗೊರೆ

ಆದ್ದರಿಂದ ಲೋಡ್ ಶೆಡ್ಡಿಂಗ್ ಭೀತಿ ಜನರನ್ನ ಕಾಡುವಂತಾಗಿದೆ. ಈ ನಡುವೆ ಕೃಷಿ ಚಟುವಟಿಕೆಗಳಿಗೆ (Agriculture) 5 ಗಂಟೆಗಳ ಕಾಲ ಯಾವುದೇ ಅಡಚಣೆ ಇಲ್ಲದೆ ರೈತರಿಗೆ ವಿದ್ಯುತ್ ಒದಗಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಆದರೂ ವಿದ್ಯುತ್ ಉತ್ಪಾದನೆಯ ಅಭಾವದ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯವಿರುವಷ್ಟು ವಿದ್ಯುತ್ ಪೂರೈಕೆ ಮಾಡಲು ಸದ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕು.

Bescom clarification on electricity Unit rates

Follow us On

FaceBook Google News

Bescom clarification on electricity Unit rates