India News

ಇಂತಹ ರೇಷನ್ ಕಾರ್ಡ್ ಇರೋರು ದೇಶದ ಯಾವುದೇ ಜಾಗದಲ್ಲಿ ರೇಷನ್ ತಗೋಬಹುದು! ಹೇಗೆ ತಿಳಿಯಿರಿ

ದೇಶದಲ್ಲಿ ವಾಸಿಸುವ ಬಡತನ ರೇಖೆಗಿಂತ ಕೆಳಗಿನವರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ವಿತರಣೆ ಮಾಡಲಾಗುತ್ತದೆ, ಅದೇ ರೀತಿ ಎಪಿಎಲ್ ಕಾರ್ಡು (APL Card) ಕೂಡ ಜನರಿಗೆ ಲಭ್ಯವಿದೆ.

ಇನ್ನು ರೇಷನ್ ಕಾರ್ಡ್ ಇದ್ದವರು ಸುಲಭವಾಗಿ ತಮಗೆ ಅಗತ್ಯವಿರುವ ಪಡಿತರ ವನ್ನು ಪಡೆದುಕೊಳ್ಳಬಹುದು. ಎಲ್ಲರಿಗೂ ತಿಳಿದಿರುವ ಹಾಗೆ ಕೇಂದ್ರ ಸರ್ಕಾರ ಜನರಿಗೆ ಅಗತ್ಯವಾದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ, ಅದರಲ್ಲಿ ಒಂದು ರಾಷ್ಟ್ರ ಒಂದು ರೇಷನ್ ಎನ್ನುವ ಯೋಜನೆ ಕೂಡ ಒಂದು.

An important Scheme from the center for families with BPL card

ಇಂತಹ ಕುಟುಂಬಕ್ಕೆ ಸಿಗಲಿದೆ ಎರಡು ಉಚಿತ ಗ್ಯಾಸ್ ಸಿಲಿಂಡರ್; ಸರ್ಕಾರದಿಂದ ಹಬ್ಬದ ಗಿಫ್ಟ್

ಒಂದು ರಾಷ್ಟ್ರ ಒಂದು ರೇಷನ್;

ಯಾರಿಗೆ ಪಡಿತರದ ಅಗತ್ಯ ಇದೆಯೋ ಅಂತವರಿಗೆ ರೇಷನ್ ಕಾರ್ಡ್ ಮೂಲಕ ಪಡಿತರ ವಿತರಣೆ ಮಾಡಲಾಗುತ್ತದೆ, ಕೇಂದ್ರ ಸರ್ಕಾರ ಕರೋನ ಸಮಯದಲ್ಲಿ ಉಚಿತವಾಗಿ ದೇಶದ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ (BPL card) ಹೊಂದಿರುವವರಿಗೆ ಐದು ಕೆಜಿ ಉಚಿತ ಅಕ್ಕಿಯನ್ನು ನೀಡುತ್ತಿದೆ. ಹಾಗಾಗಿ ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಜನರು ಇದೊಂದು ಪುಟ್ಟ ಕೆಲಸ ಮಾಡಬೇಕಿದೆ.

ವಲಸಿಗರಿಗೆ ಬೆನಿಫಿಟ್!

ಕೆಲವರು ಒಂದೇ ಜಾಗದಲ್ಲಿ ಸ್ಥಿರವಾಗಿ ನಿಂತು ಕೆಲಸ ಮಾಡಲು ಸಾಧ್ಯವಿಲ್ಲ ಅವರು ಅವರ ಹೊಟ್ಟೆಪಾಡಿಗಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಆಗಲೇಬೇಕು, ಇಂತಹ ಸಂದರ್ಭದಲ್ಲಿ ಒಂದು ಅಡ್ರೆಸ್ ಇದ್ದು ಮತ್ತೊಂದು ಕಡೆ ಹೋಗಿ ಪಡಿತರ ಪಡೆದುಕೊಳ್ಳಲು ಸಾಧ್ಯವಿದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ.

ಯಾಕೆಂದ್ರೆ ಪ್ರತಿ ತಿಂಗಳು ಪಡಿತರ ತೆಗೆದುಕೊಳ್ಳಲು (Ration) ವಾಸಿಸುವ ಸ್ಥಳದಿಂದ ತಮ್ಮ ಅಡ್ರೆಸ್ (Address) ಇರುವ ಸ್ಥಳಕ್ಕೆ ಹಿಂತಿರುಗಲು ಸಾಧ್ಯವಿಲ್ಲ, ಇದಕ್ಕಾಗಿಯೇ ಕೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದು ಒಂದು ರಾಷ್ಟ್ರ ಒಂದು ರೇಷನ್ (one nation one ration) ಎನ್ನುವ ನೀತಿ.

ಪಿಂಚಣಿ ಪಡೆಯುವವರಿಗೆ ಹೊಸ ನಿಯಮ; ಕೂಡಲೇ ಈ ಕೆಲಸ ಮಾಡದೆ ಇದ್ರೆ ಪಿಂಚಣಿ ರದ್ದು

ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್!

Ration Card with Aadhaar Linkಯಾರ ಬಳಿ ರೇಷನ್ ಕಾರ್ಡ್ ಇದೆಯೋ ಅಂತವರು ತಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ (Aadhar Card and ration card link) ಮಾಡಿಕೊಳ್ಳಬೇಕು ಆ ಮೂಲಕ ಯಾವುದೇ ಮೂಲೆಯಲ್ಲಿ ಪಡಿತರ ಪಡೆದುಕೊಳ್ಳಲು ಸಾಧ್ಯವಿದೆ.

ಪಡಿತರ ಚೀಟಿಯಲ್ಲಿ ಯಾವ ವ್ಯತ್ಯಾಸ ಇದ್ದರೂ ಸರಿ ನೀವು ವಾಸಿಸುವ ಸ್ಥಳದಿಂದಲೇ ಅಲ್ಲಿ ಹತ್ತಿರದ ಅನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ತೆಗೆದುಕೊಳ್ಳಬಹುದು. ಇದಕ್ಕೆ ಮುಖ್ಯವಾಗಿ ಮಾಡಬೇಕಾಗಿರುವ ಕೆಲಸ ಆಧಾರ್ ನೊಂದಿಗೆ ರೇಷನ್ ಕಾರ್ಡ್ ಲಿಂಕ್.

ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಬಗ್ಗೆ ಹೊಸ ನಿಯಮ! ಮದುವೆ ವಯಸ್ಸು ಎಷ್ಟಿರಬೇಕು ಗೊತ್ತಾ?

ಆಧಾರ್ ನೊಂದಿಗೆ ಪಡಿತರ ಲಿಂಕ್ ಮಾಡಿಕೊಳ್ಳುವುದು ಹೇಗೆ!

ನೀವು ಆಧಾರ್ ಕೇಂದ್ರಕ್ಕೆ (Aadhar centre) ಹೋಗಿ ಈ ಕೆಲಸ ಮಾಡಿಕೊಳ್ಳಬಹುದು. ಅಥವಾ ಆನ್ಲೈನ್ (online) ನಲ್ಲಿಯೂ ಲಿಂಕ್ ಮಾಡಿಕೊಳ್ಳಲು ಅವಕಾಶವಿದೆ.

*ಇದಕ್ಕಾಗಿ ಮೊದಲು ನೀವು ಸರ್ಕಾರದ ಅಧಿಕೃತ ವೆಬ್ಸೈಟ್ (official website) ಆಗಿರುವ PDS ಗೆ ಭೇಟಿ ನೀಡಿ.

*ಹೊಸಪುಟ ತೆರೆದುಕೊಳ್ಳುತ್ತಿದ್ದ ಹಾಗೆ ಅದರಲ್ಲಿ ನಿಮ್ಮ ಪಡಿತರ ಸಂಖ್ಯೆ ಹಾಗೂ ಆಧಾರ್ ಅಂಕೆಯನ್ನು ಹಾಕಲು ಆಯ್ಕೆಗಳು ಇರುತ್ತವೆ. ಅದನ್ನು ಭರ್ತಿ ಮಾಡಿ.

*ಬಳಿಕ ಆಧಾರ್ ಕಾರ್ಡ್ ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ (Mobile Number)  ಒಂದು ಓಟಿಪಿ (OTP) ಬರುತ್ತದೆ.

*ಈ ಓಟಿಪಿ ಯನ್ನು ಪರದೆಯ ಮೇಲೆ ಕಾಣುವ ಜಾಗದಲ್ಲಿ ಹಾಕಿ. ಈಗ ಆಧಾರ್ನೊಂದಿಗೆ ಪಡಿತರ ಸಂಖ್ಯೆ ಲಿಂಕ್ ಮಾಡುವ ವಿನಂತಿ ಸಲ್ಲಿಕೆಯಾಗುತ್ತದೆ.

ಹಬ್ಬದ ರಜೆ ಜೊತೆಗೆ ದೀಪಾವಳಿ ಬೋನಸ್ ಕೂಡ; ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ಘೋಷಣೆ

ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ ಲಿಂಕ್ ಆಗಿದ್ಯೋ ಇಲ್ಲವೋ ತಿಳಿದುಕೊಳ್ಳಿ!

ನಿಮ್ಮ ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು, ನೀವು ಈ ಸ್ಟೇಟಸ್ ತಿಳಿದುಕೊಳ್ಳಬಹುದು.

*ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಪ್ಲೇ ಸ್ಟೋರ್ (Play Store) ಗೆ ಹೋಗಿ ಮೇರಾ ರೇಷನ್ (Mera ration) ಎನ್ನುವ ಆಪ್ ಡೌನ್ಲೋಡ್ ಮಾಡಿಕೊಳ್ಳಿ.

*ಅಲ್ಲಿ ಆಧಾರ್ ಸಿಡಿಂಗ್ (Aadhar seeding) ಎನ್ನುವ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು ಹಾಕಿ.

*ಬಳಿಕ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಲಿಂಕ್ (Aadhar edition link) ಆಗಿದೆಯೋ ಇಲ್ಲವೋ ಎನ್ನುವ ಮಾಹಿತಿ ಲಭ್ಯವಾಗುತ್ತದೆ.

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories