India News

ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಬಗ್ಗೆ ಹೊಸ ನಿಯಮ! ಮದುವೆ ವಯಸ್ಸು ಎಷ್ಟಿರಬೇಕು ಗೊತ್ತಾ?

ನಮ್ಮ ದೇಶದಲ್ಲಿ ಇದ್ದ ಅತ್ಯಂತ ಹಳೆಯ ಸಂಪ್ರದಾಯ (old ritual) ಹಾಗೂ ಅತ್ಯಂತ ಕೆಟ್ಟ ಸಂಪ್ರದಾಯ ಬಾಲ್ಯ ವಿವಾಹ ಪದ್ಧತಿ. ಸಣ್ಣ ವಯಸ್ಸಿನಲ್ಲಿ ಆಟ ಆಡಿಕೊಂಡು ಇರಬೇಕಾದ ಮಗುವಿಗೆ ಮಂಗಳಸೂತ್ರ ಕಟ್ಟಿ ಮದುವೆ (Marriage) ಎನ್ನುವ ಬಂಧನದಲ್ಲಿ ದೂಡಲಾಗುತ್ತಿತ್ತು.

ಹೆಣ್ಣು ಮಕ್ಕಳಿಗೆ ಯಾವುದೇ ಶಿಕ್ಷಣದ ಸೌಲಭ್ಯವು (education) ಇರಲಿಲ್ಲ. ಈಗ ಕಾಲ ಬದಲಾಗಿದೆ 2006ರಿಂದಲೇ ಬಾಲ್ಯ ವಿವಾಹ ಪದ್ಧತಿ (balya Vivaha paddati) ಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ

Get 60,000 For Your daughter's marriage, Apply for a central government scheme

ಅನುಸರಿಸದೇ ಇದ್ದವರು ಶಿಕ್ಷೆಗೆ ಗುರಿಯಾಗಬೇಕು. ಇನ್ನು ಇದರ ಹೊರತಾಗಿ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು ಕೂಡ ಹೆಚ್ಚಿಸಲಾಗಿದೆ, ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಬೇಕು (independent) ಇನ್ನಷ್ಟು ಕಲಿತು ಸ್ವಾವಲಂಬಿ ಜೀವನ ನಡೆಸಬೇಕು ಎನ್ನುವ ಕಾರಣಕ್ಕೆ ಅವರನ್ನು ಸಣ್ಣ ವಯಸ್ಸಿನಲ್ಲಿ ಮದುವೆ ಎನ್ನುವ ಜಂಜಾಟದಲ್ಲಿ ದೂಡದೆ ಇರಲು ವಯಸ್ಸಿನ ಮಿತಿಯನ್ನು (Marriage Age Limit) ಹೆಚ್ಚಿಸಲಾಗಿದೆ.

ಹಬ್ಬದ ರಜೆ ಜೊತೆಗೆ ದೀಪಾವಳಿ ಬೋನಸ್ ಕೂಡ; ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ಘೋಷಣೆ

ಮದುವೆಯ ವಯಸ್ಸು ಹೆಚ್ಚಿಸಲು ಚಿಂತನೆ

ಈಗಾಗಲೇ ಗಂಡು ಮಕ್ಕಳಿಗೆ ಮದುವೆಯ ವಯಸ್ಸು 18 ಇದ್ದದ್ದನ್ನು 21 ವರ್ಷಕ್ಕೆ ಮಾಡಲಾಗಿದೆ. ಅದೇ ರೀತಿ ಹೆಣ್ಣು ಮಕ್ಕಳು ಸ್ವಾವಲಂಬನೆಯ ಜೀವನ ನಡೆಸಬೇಕು ಮೊದಲು ಕಲಿತು ದುಡಿಮೆ ಮಾಡಿ ನಂತರ ಮದುವೆ (marriage) ಆಗಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಮಿತಿಯನ್ನು ಹೆಚ್ಚಿಸಲು ಮುಂದಾಗಿದೆ.

ಹೌದು, ಹಿಮಾಚಲ ಪ್ರದೇಶದಲ್ಲಿ (Himachal Pradesh) ಈ ಒಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ, ಹೆಣ್ಣು ಮಗುವಿನ ಮದುವೆಯ ವಯಸ್ಸನ್ನು 18ರಿಂದ 21 ವರ್ಷಕ್ಕೆ ಏರಿಸಲು ತೀರ್ಮಾನಿಸಲಾಗಿದೆ.

Girls Marriage Age Limitಹೆಣ್ಣು ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಹಿಮಾಚಲ ಪ್ರದೇಶ ಸರಕಾರ ಈ ಚಿಂತನೆ ನಡೆಸಿದ್ದು 18 ವರ್ಷದ ಬದಲು ತಮ್ಮ 21ನೇ ವರ್ಷದ ನಂತರ ಮದುವೆ ಆಗಲು ಅವಕಾಶ ಮಾಡಿಕೊಡಲಾಗುವುದು. ಮೊದಲು ಮದುವೆಯಾಗಲು ಹೆಣ್ಣು ಮಕ್ಕಳನ್ನು ಯಾರು ಬಲವಂತ (no force for marriage) ಮಾಡುವಂತಿಲ್ಲ.

ಹೆಣ್ಣು ಮಕ್ಕಳನ್ನ ಮದುವೆ ಮಾಡಿಕೊಟ್ಟರೆ, ಅವರು ದೈಹಿಕವಾಗಿ (physically) ಹಾಗೂ ಮಾನಸಿಕವಾಗಿ (mentally) ಆ ವಿವಾಹಕ್ಕೆ ಸಿದ್ದರಾಗಿರುವುದಿಲ್ಲ. ಅದರಲ್ಲೂ ತಾನು ಇನ್ನಷ್ಟು ಓದಬೇಕು ಉನ್ನತ ವಿದ್ಯಾಭ್ಯಾಸ (Education) ಮಾಡಿ ಉತ್ತಮ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದೆಲ್ಲ ಕನಸು ಹೊತ್ತಿರುವ ಹೆಣ್ಣು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಮದುವೆ ಮಾಡಿ ಬಿಟ್ಟರೆ ಅವರ ಕನಸುಗಳೆಲ್ಲವೂ ಕಮರಿ ಹೋಗುತ್ತವೆ.

ಇದೇ ಕಾರಣಕ್ಕೆ ಹಿಮಾಚಲ ಪ್ರದೇಶ ಸರ್ಕಾರ ಈ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಮದುವೆಯಾದ ನಂತರ ಹೆಣ್ಣು ಮಕ್ಕಳ ಆರೋಗ್ಯದ ಸ್ಥಿತಿಯು (health condition) ಹದಗೆಡುವ ಪರಿಸ್ಥಿತಿಯನ್ನು ಅರಿತಿರುವ ರಾಜ್ಯ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.

ಇನ್ನು ಮುಂದೆ ದೇಶಾದ್ಯಂತ ಇದೆ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ. ಹಾಗೇನಾದರೂ 21 ವರ್ಷಗಳ ನಂತರ ಹೆಣ್ಣು ಮಕ್ಕಳಿಗೆ ಮದುವೆ ಎನ್ನುವ ನಿಯಮ ಜಾರಿಗೆ ಬಂದರೆ ಖಂಡಿತವಾಗಿಯೂ ಅದೆಷ್ಟೋ ಹೆಣ್ಣು ಮಕ್ಕಳ ಕನಸು ನನಸಾಗಲು ಸಾಧ್ಯವಿದೆ.

New rule regarding marriage age limit of girls

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories