Karnataka NewsBangalore News

ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಜಮಾ ಆಗಿದೆ, ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ರಾಜ್ಯ ಸರ್ಕಾರ ತನ್ನ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯನ್ನು ಕೂಡ ಜಾರಿಗೆ ತಂದು ಎಂಟು ತಿಂಗಳು ಕಳೆದಿವೆ. ಇಲ್ಲಿಯವರೆಗೂ ಫಲಾನುಭವಿಗಳಿಗೆ ಕೊಡಬಹುದಾದಷ್ಟು ಅಕ್ಕಿ ದಾಸ್ತಾನು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುತ್ತಾ ಬಂದಿದೆ.

ಹೌದು, ಕಳೆದ 8 ತಿಂಗಳಿನಿಂದ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಫಲಾನುಭವಿಗಳ ಖಾತೆಗೆ ಸರ್ಕಾರದ ಕಡೆಯಿಂದ ನೇರವಾಗಿ ಡಿಬಿಟಿ (DBT) ಆಗುತ್ತಿದೆ.

Do this if Annabhagya Yojana money not reached your Bank account yet

ಆದ್ರೆ ಸರ್ಕಾರ ಈಗಾಗಲೇ ಸಾಕಷ್ಟು ಜನರ ಬಿಪಿಎಲ್ ರೇಷನ್ ಕಾರ್ಡ್ (BPL Ration card) ರದ್ದುಪಡಿ ಮಾಡಿದ್ದು, ಅಂತವರಿಗೆ ಮೇ ತಿಂಗಳ ಅನ್ನಭಾಗ್ಯ ಹಣ (Annabhagya scheme) ಖಾತೆಗೆ ಜಮಾ ಆಗುವುದಿಲ್ಲ.

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್! ಇಂತವರಿಗೆ ಇನ್ಮುಂದೆ ಹಣ ಬರೋಲ್ಲ

ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಬಿಪಿಎಲ್ ಕಾರ್ಡ್ ವಿತರಣೆ ಮಾಡುವುದು ಬಡತನ ರೇಖೆಗಿಂತ ಕೆಳಗಿರುವವರಿಗೆ ಆದರೆ ಉತ್ತಮ ಆದಾಯ ಹೊಂದಿರುವವರು ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ.

ಮಾತ್ರವಲ್ಲದೆ ಕಳೆದ ಆರು ತಿಂಗಳಿನಿಂದ ಒಂದು ಬಾರಿಯೂ ರೇಷನ್ ವಸ್ತುಗಳನ್ನು ಪಡೆದುಕೊಂಡಿಲ್ಲ, ಬದಲಿಗೆ ಸರಕಾರದ ಉಚಿತ ಯೋಜನೆಗಳ ಪ್ರಯೋಜನವನ್ನು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿರುವ ಸರ್ಕಾರ ಅಂಥವರ ಬಿಪಿಎಲ್ ಕಾರ್ಡ್ ಅನ್ನು ಬಹಳ ಸ್ಟ್ರಿಕ್ಟ್ ಆಗಿ ರದ್ದುಪಡಿಸಿದೆ.

ಇನ್ನು ಅನ್ನಭಾಗ್ಯ ಯೋಜನೆಯ ಹಣ ಏಪ್ರಿಲ್ ತಿಂಗಳ 20ನೇ ತಾರೀಕಿನ ಒಳಗಡೆ ಬಿಡುಗಡೆ ಆಗಿದೆ. ಸಾಕಷ್ಟು ಜನರ ಖಾತೆಗೆ 680 ರೂಪಾಯಿಗಳು ಜಮಾ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಣ ಬಂದಿರುವ ಡಿಬಿಟಿ ಸ್ಟೇಟಸ್ ಅನ್ನು ಸಾಕಷ್ಟು ಜನ ಶೇರ್ ಮಾಡಿದ್ದಾರೆ.

ನೀವು ಕೂಡ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದು, ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎನ್ನುವುದನ್ನು ಆನ್ಲೈನ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು.

ಹೊಸ ರೇಷನ್ ಕಾರ್ಡ್ ಬಗ್ಗೆ ಅಪ್ಡೇಟ್; ಮೇ ತಿಂಗಳಿನ ಹೊಸ ಲಿಸ್ಟ್ ಬಿಡುಗಡೆ ಆಗಿದೆ

Annabhagya Schemeಆನ್ಲೈನ್ ನಲ್ಲಿ ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

* DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.

* ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು

* ನಂತರ ಆಧಾರ್ ಗೆ ಕನೆಕ್ಟ್ ಆಗಿರುವ ಮೊಬೈಲ್ ಗೆ ಬಂದು ಒಟಿಪಿ ಕಳುಹಿಸಲಾಗುತ್ತದೆ ಅದನ್ನು ನಮೂದಿಸಿ.

* ನಂತರ ನಾಲ್ಕು ಅಂಕೆಯ ಪಾಸ್ವರ್ಡ್ ರಚಿಸಿಕೊಳ್ಳಬೇಕು

* ನೆನಪಿಟ್ಟುಕೊಳ್ಳುವಂಥ ಪಾಸ್ವರ್ಡ್ ಹಾಕಿ ಯಾಕಂದ್ರೆ ಪ್ರತಿ ಬಾರಿ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಲು ಇದೇ ಪಾಸ್ವರ್ಡ್ ಬಳಸಬೇಕು.

* ಪಾಸ್ವರ್ಡ್ ಹಾಕಿದ ಬಳಿಕ ನಿಮಗೆ ಒಂದು ಪುಟ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಅಲ್ಲಿ ನಾಲ್ಕು ಆಪ್ಷನ್ ಗಳು ಇದ್ದು ಕೊನೆಯದಾಗಿ ಪಾವತಿ ಸ್ಥಿತಿ ಎನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

* ಈಗ ಸರ್ಕಾರದಿಂದ ಯಾವುದೇ ಯೋಜನೆಯ ಹಣ ನಿಮ್ಮ ಖಾತೆಗೆ ಬಂದರೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ.

* ನೀವು ಅನ್ನ ಭಾಗ್ಯ ಯೋಜನೆ ಎಂದು ಸೆಲೆಕ್ಟ್ ಮಾಡಿ ನಿಮ್ಮ ಖಾತೆಗೆ ಯಾವಾಗ ಎಷ್ಟು ಹಣ ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಿ.

ಇನ್ಮುಂದೆ ಇಂಥವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಆಗೋಲ್ಲ! ಇಲ್ಲಿದೆ ಕಾರಣ

ಇನ್ನು DBT ಸ್ಟೇಟಸ್ ಚೆಕ್ ಮಾಡಲು ಎರಡನೇ ಮಾರ್ಗ ಅಂದ್ರೆ,

* ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

* ಈ ಸರ್ವಿಸ್ ವಿಭಾಗಕ್ಕೆ ಹೋಗಿ

* ನಂತರ ಎಡಭಾಗದಲ್ಲಿ ಮೂರು ಲೈನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ

* ಈ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ

* ಡಿ ಬಿ ಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ

* ಬಳಿಕ ಮೂರು ಲಿಂಗಗಳಿರುವ ಬೇರೆ ಬೇರೆ ಜಿಲ್ಲೆಗಳನ್ನು ತೋರಿಸಲಾಗುತ್ತದೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲ್ಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

* ಈಗ ಡಿಬಿಟಿ ಸ್ಥಿತಿ ತಿಳಿದುಕೊಳ್ಳಿ ಎನ್ನುವ ಕೊನೆಯ ಆಯ್ಕೆಯನ್ನು ಕ್ಲಿಕ್ ಮಾಡಿ

* ನಂತರ ವರ್ಷ ತಿಂಗಳು ನಿಮ್ಮ ಆರ್ಸಿ ನಂಬರ್ ಹಾಗೂ ಕ್ಯಾಪ್ಚ ಸಂಖ್ಯೆಯನ್ನು ನಮೂದಿಸಿ ಗೋ ಎಂದು ಕ್ಲಿಕ್ ಮಾಡಿ

* ಅನ್ನ ಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ (Bank Account) ಜಮಾ ಆಗಿರುವ ಬಗ್ಗೆ ಸಂಪೂರ್ಣ ವಿವರ ಇಲ್ಲಿ ಕಾಣಿಸುತ್ತದೆ.

* ಪಾವತಿ ಪ್ರಗತಿಯಲ್ಲಿ ಇದೆ ಎನ್ನುವ ಸಂದೇಶ ಕಾಣಿಸಿದ್ರೆ ನಿಮ್ಮ ಖಾತೆಗೆ ಸದ್ಯದಲ್ಲಿಯೇ ಹಣ ಜಮಾ (Money Deposit) ಆಗಲಿದೆ ಎಂದು ಅರ್ಥ.

ಹೊಸ ರೇಷನ್ ಕಾರ್ಡ್ ಗ್ರಾಮೀಣ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ನೋಡಿಕೊಳ್ಳಿ

Annabhagya money deposited into the account, here is the direct link to check

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories