ಹೊಸ ರೇಷನ್ ಕಾರ್ಡ್ ಬಗ್ಗೆ ಅಪ್ಡೇಟ್; ಮೇ ತಿಂಗಳಿನ ಹೊಸ ಲಿಸ್ಟ್ ಬಿಡುಗಡೆ ಆಗಿದೆ
3 ಲಕ್ಷದಷ್ಟು ಬಿಪಿಎಲ್ ಕಾರ್ಡ್ (BPL Card) ಅರ್ಜಿ ಸಲ್ಲಿಕೆ ಆಗಿದೆ, ಇವುಗಳಲ್ಲಿ 57 ಸಾವಿರದಷ್ಟು ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ರೇಷನ್ ಕಾರ್ಡ್ (ration card) ಹೊಸ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ಬಿಪಿಎಲ್ ಕಾರ್ಡ್ (BPL Card) ಇಲ್ಲದೆ ಯಾರು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದರೋ ಅಂತವರಿಗೆ ಹೊಸ ರೇಷನ್ ಕಾರ್ಡ್ ಸಿಗಲಿದ್ದು, ಇನ್ನು ಮುಂದೆ ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲಾ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ (Krishna bairagowda) ತಿಳಿಸಿದ್ದಾರೆ.
ಈ ಹಿಂದೆ ಸರ್ಕಾರಕ್ಕೆ ಸುಮಾರು 3 ಲಕ್ಷದಷ್ಟು ಬಿಪಿಎಲ್ ಕಾರ್ಡ್ (BPL Card) ಅರ್ಜಿ ಸಲ್ಲಿಕೆ ಆಗಿದೆ, ಇವುಗಳಲ್ಲಿ 57 ಸಾವಿರದಷ್ಟು ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇನ್ಮುಂದೆ ಇಂಥವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಆಗೋಲ್ಲ! ಇಲ್ಲಿದೆ ಕಾರಣ
ಇದರ ಜೊತೆಯಲ್ಲಿ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ, ಸರ್ಕಾರದಿಂದ ಉಚಿತ ಟ್ರೀಟ್ಮೆಂಟ್ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಕೂಡ ಅಗತ್ಯವಾಗಿದ್ದು, ಅಂತವರು ಅರ್ಜಿ ಸಲ್ಲಿಸಿದಲ್ಲಿ ತಕ್ಷಣ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ.
ಬಿಪಿಎಲ್ ಕಾರ್ಡ್ ಹೊಸ ಲಿಸ್ಟ್ ಬಿಡುಗಡೆ!
ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇರುವವರು ಸರ್ಕಾರದ ಎಲ್ಲಾ ಯೋಜನೆಯ ಪ್ರಯೋಜನ ಪಡೆಯಬಹುದು,ಅನ್ನಭಾಗ್ಯ ಯೋಜನೆಯ ಹಣ (Annabhagya Scheme Money), ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಹಣ ನೇರವಾಗಿ ಖಾತೆಗೆ (Bank Account) ಜಮಾ ಆಗಲಿದೆ. ಇದೀಗ ಆನ್ಲೈನ್ ನಲ್ಲಿ ಹೊಸ ಲಿಸ್ಟ್ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಹೊಸ ರೇಷನ್ ಕಾರ್ಡ್ ಗ್ರಾಮೀಣ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ನೋಡಿಕೊಳ್ಳಿ
ರೇಷನ್ ಕಾರ್ಡ್ ಮಾಹಿತಿ ಪಡೆಯುವುದು ಹೇಗೆ?
ಇದಕ್ಕಾಗಿ, ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಹೋಗಿ, ನಂತರ ರೇಷನ್ ಕಾರ್ಡ್ ಸ್ಥಿತಿ ಕ್ಲಿಕ್ ಮಾಡಿ. ಇಲ್ಲಿ ಹೊಸ ಲಿಸ್ಟ್ ಚೆಕ್ ಮಾಡಬಹುದು. ನಿಮ್ಮ ಕಾರ್ಡ್ ಸ್ಥಿತಿ, ಒಂದು ವೇಳೆ ಕಾರ್ಡ್ ರದ್ದಾಗಿದ್ದರೆ ಆ ಬಗ್ಗೆ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು.
ಈ ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ರೆ ಅಂಥವರಿಗೆ ಸಿಗಲ್ಲ ಅನ್ನಭಾಗ್ಯ ಯೋಜನೆ ಹಣ!
Update on New Ration Card, The new list for the month of May has been released