ಈ ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ರೆ ಅಂಥವರಿಗೆ ಸಿಗಲ್ಲ ಅನ್ನಭಾಗ್ಯ ಯೋಜನೆ ಹಣ!

Story Highlights

ಆಹಾರ ಇಲಾಖೆ ಹೊಸ ನಿಯಮ! ಈ ಪಟ್ಟಿಯಲ್ಲಿ ಹೆಸರು ಇಲ್ಲದೇ ಹೋದ್ರೆ ಅಂಥವರಿಗೆ ಸಿಗಲ್ಲ ಅನ್ನ ಭಾಗ್ಯ ಯೋಜನೆ ಹಣ!

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಆಹಾರ ಇಲಾಖೆ ಬಿಡುಗಡೆ ಮಾಡಿದೆ. ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾದ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದರೆ ಮೇ ತಿಂಗಳಿನ ಅನ್ನಭಾಗ್ಯ (AnnaBhagya scheme) ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ಪಡಿತರ ಚೀಟಿ (Ration Card) ಹೊಂದಿರುವವರಿಗೆ ನೇರವಾಗಿ ಅವರ ಖಾತೆಗೆ (Bank Account) ಅನ್ನಭಾಗ್ಯ ಯೋಜನೆಯ ಹಣವನ್ನು ಜಮಾ ಮಾಡಲಾಗುವುದು, ನೀವು ಅರ್ಹತಾ ಪಟ್ಟಿಯನ್ನು ಚೆಕ್ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಮುಂದಿನ ತಿಂಗಳು ಹಣ ಬರುತ್ತದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.

ಗೃಹಜ್ಯೋತಿ ಉಚಿತ ವಿದ್ಯುತ್ 200 ಯೂನಿಟ್ ದಾಟದಂತೆ ಮಾಡಿಕೊಳ್ಳಿ! ಇಲ್ಲಿದೆ ಟ್ರಿಕ್ಸ್

ಮೊಬೈಲ್ ನಲ್ಲಿ ಚೆಕ್ ಮಾಡಿ ಅರ್ಹತಾ ಲಿಸ್ಟ್!

ಹೌದು, ನೀವು ಸುಲಭವಾಗಿ ಮೊಬೈಲ್ ನಲ್ಲಿ ನಿಮ್ಮ ಹೆಸರು ಏಪ್ರಿಲ್ 2024ರ ಹೊಸ ಲಿಸ್ಟ್ ನಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. Annabhagya beneficiary list ಚೆಕ್ ಮಾಡಲು ಈ ಸರ್ವಿಸ್ ಎನ್ನುವ ವಿಭಾಗಕ್ಕೆ ಹೋಗಿ.

ನಂತರ ಬಲಭಾಗದಲ್ಲಿ ಇ – ಪಡಿತರ ಚೀಟಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ. ನಂತರ ಹಳ್ಳಿಪಟ್ಟಿ ಎನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಜಿಲ್ಲೆ ಗ್ರಾಮ ಹೋಬಳಿ ಮೊದಲಾದ ಮಾಹಿತಿಗಳನ್ನು ನೀಡಬೇಕು.

ನಂತರ GO ಎಂದು ಕ್ಲಿಕ್ ಮಾಡಿ. ಈಗ ಫಲಾನುಭವಿಗಳ ಲಿಸ್ಟ್ ಕಾಣಿಸುತ್ತದೆ. ಆಧಾರ್ ಕಾರ್ಡ್ ಸಂಖ್ಯೆ ಸದಸ್ಯರ ಸಂಖ್ಯೆ ಮೊದಲಾದ ವಿವರಗಳನ್ನು ಇಲ್ಲಿ ಕಾಣಬಹುದು. ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದ್ರೆ ನಿಮಗೆ ಮುಂದಿನ ತಿಂಗಳಿನ ಅನ್ನ ಭಾಗ್ಯ ಯೋಜನೆ ಹಣ ಖಾತೆಗೆ ಬರುತ್ತೆ ಎಂದು ಅರ್ಥ.

ಗೃಹಲಕ್ಷ್ಮಿ ಹಣ ಒಂದೇ ತಿಂಗಳಿನಲ್ಲಿ 4 ಸಾವಿರ ಜಮಾ; ನಿಮ್ಮ ಖಾತೆಗೂ ಬಂದಿದ್ಯ ಚೆಕ್ ಮಾಡಿ!

Annabhagya Schemeಮೊಬೈಲ್ ನಲ್ಲಿ ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಇನ್ನು ಮೊಬೈಲ್ ನಲ್ಲಿಯೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಯಾವುದೇ ಹಣ ಜಮಾ ಆಗಿದ್ದರು ಅದರ ವಿವರಗಳನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್ ಫೋನ್ನಲ್ಲಿ DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.

ಬಿಪಿಎಲ್ ರೇಷನ್ ಕಾರ್ಡ್ ನಿಯಮ ಬದಲಾವಣೆ; ಮೇ 1ರಿಂದ ಹೊಸ ರೂಲ್ಸ್ ಜಾರಿ

ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ 4 ಅಂಕಿಗಳ ಪಾಸ್ವರ್ಡ್ ರಚಿಸಬೇಕು. ಬಳಿಕ ಲಾಗಿನ್ ಆಗಿ. ಈಗ ನಿಮಗೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ಪಾವತಿ ಸ್ಥಿತಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ಸರ್ಕಾರದಿಂದ ಡಿ ಬಿ ಟಿ ಆಗಿರುವ ಎಲ್ಲಾ ಯೋಜನೆಯ ಹಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ.

If there is no name in this list, those people will not get Annabhagya Yojana money

Related Stories