Karnataka NewsBangalore News

ಗೃಹಜ್ಯೋತಿ ಉಚಿತ ವಿದ್ಯುತ್ 200 ಯೂನಿಟ್ ದಾಟದಂತೆ ಮಾಡಿಕೊಳ್ಳಿ! ಇಲ್ಲಿದೆ ಟ್ರಿಕ್ಸ್

ಗೃಹಜ್ಯೋತಿ ಯೋಜನೆ (Gruha jyothi Yojana) ಅದೆಷ್ಟೋ ಕುಟುಂಬದ ತಿಂಗಳ ಬಜೆಟ್ ನಲ್ಲಿ ಎರಡು ಸಾವಿರ ರೂಪಾಯಿಗಳನ್ನು ಕನಿಷ್ಠ ಉಳಿಸುತ್ತಿದೆ ಎಂದು ಹೇಳಬಹುದು. ಹೌದು 200 ಯೂನಿಟ್ಗಿಂತಲೂ ಕಡಿಮೆ ವಿದ್ಯುತ್ ಖರ್ಚು ಮಾಡುವವರು ಪ್ರತಿ ತಿಂಗಳು ಉಚಿತ ವಿದ್ಯುತ್ (Free Electricity) ಬಳಕೆ ಮಾಡಲು ಸಾಧ್ಯವಾಗಿದೆ, ಕಳೆದ 8 ತಿಂಗಳುಗಳಿಂದ ಉಚಿತ ವಿದ್ಯುತ್ ಸೌಲಭ್ಯ ಜನರಿಗೆ ಸಿಗುತ್ತಿದೆ.

ಆದರೆ ಇತ್ತೀಚಿಗೆ ಬೇಸಿಗೆಯ ಬಿಸಿ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಫ್ಯಾನ್, ಎಸಿ, ಕೂಲರ್ ಮೊದಲಾದ ಅವುಗಳನ್ನು ಬಳಸುವ ಸಂಖ್ಯೆ ಜಾಸ್ತಿಯಾಗಿದೆ ಇದರಿಂದ ಯಾವ ರೀತಿ ಕರೆಂಟ್ ನಿರ್ವಹಣೆ ಮಾಡಬೇಕು ಎನ್ನುವುದು ತಿಳಿಯದೆ 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ.

sudden rise in electricity prices even Gruha Jyothi Yojana

ಇದರಿಂದಾಗಿ ಸಂಪೂರ್ಣ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡುವಂತೆ ಆಗಿದೆ, ಹಾಗಾಗಿ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಆದರೆ ನೀವು ಸ್ವಲ್ಪ ಮುತುವರ್ಜಿಯಿಂದ ಕರೆಂಟ್ ಕರ್ಚು ಮಾಡಿದರೆ ಖಂಡಿತವಾಗಿಯೂ ಮೊದಲಿನಂತೆ ಉಚಿತವಾಗಿ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಿದೆ.

ಗೃಹಲಕ್ಷ್ಮಿ ಹಣ ಒಂದೇ ತಿಂಗಳಿನಲ್ಲಿ 4 ಸಾವಿರ ಜಮಾ; ನಿಮ್ಮ ಖಾತೆಗೂ ಬಂದಿದ್ಯ ಚೆಕ್ ಮಾಡಿ!

ಒಂದು ಯೂನಿಟ್ ವಿದ್ಯುತ್ ಲೆಕ್ಕಾಚಾರ?

ವಿದ್ಯುತ್ ಖರ್ಚಾಗುತ್ತದೆ ಅಂದರೆ ಉದಾಹರಣೆಗೆ ಒಂದು ಯೂನಿಟ್ ವಿದ್ಯುತ್ ಖರ್ಚಾಗುತ್ತದೆ ಎಂದಾದರೆ ಎಷ್ಟು ವಿದ್ಯುತ್ ಬಳಕೆ ಮಾಡಿದಂತೆ ಆಯಿತು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ಒಂದು ಯೂನಿಟ್ ಅಂದರೆ ಒಂದು ಕಿಲೋ ವ್ಯಾಟ್ ಅವರ್ (1 kilowatt hour) ಇಲ್ಲಿ ಒಂದು ಯೂನಿಟ್ ಖರ್ಚಾಗಬೇಕು ಅಂದ್ರೆ ನೀವು 100 ವಾಟ್ 10 ಬಲ್ಪ್ ಅನ್ನು ಒಂದು ಗಂಟೆಯ ಅವಧಿಗೆ ಬಳಸಬೇಕು. ಇದೇ ರೀತಿಯಲ್ಲಿ ಅರ್ಥೈಸಿಕೊಂಡರೆ 200 ಯೂನಿಟ್ ಅಂದರೆ ಎರಡು ಲಕ್ಷ ವ್ಯಾಟ್ ಬಳಕೆ ಆಗಿದೆ ಎನ್ನಬಹುದು.

ಬಿಪಿಎಲ್ ರೇಷನ್ ಕಾರ್ಡ್ ನಿಯಮ ಬದಲಾವಣೆ; ಮೇ 1ರಿಂದ ಹೊಸ ರೂಲ್ಸ್ ಜಾರಿ

Electricity billವಿದ್ಯುತ್ ಉಳಿತಾಯ ಮಾಡುವುದು ಹೇಗೆ?

ನೀವು 200 ಯೂನಿಟ್ ಬಳಕೆ ಮಾಡಿದ್ರೆ ಸಾಮಾನ್ಯವಾಗಿ 1,500 ಗಳಿಂದ 2,000ಗಳ ವರೆಗೆ ವಿದ್ಯುತ್ ಬಿಲ್ ಬರಬಹುದು. ನೀವು ಎಷ್ಟು ವಿದ್ಯುತ್ ಬಳಕೆ ಮಾಡುತ್ತಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲು ಮೀಟರ್ ರೀಡಿಂಗ್ ನೋಡಬೇಕು.

ಕನಿಷ್ಠ ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಮೀಟರ್ ರೀಡಿಂಗ್ ನೋಡಿದರೆ ನಿಮಗೆ ಎಷ್ಟು ವಿದ್ಯುತ್ ಖರ್ಚಾಗಿದೆ ಎನ್ನುವುದರ ಐಡಿಯಾ ಸಿಗುತ್ತದೆ. ಅದನ್ನು ನೋಡಿ ನಂತರ ಸ್ವಲ್ಪ ಮುತುವರ್ಜಿಯಿಂದ ವಿದ್ಯುತ್ ಖರ್ಚು ಮಾಡಿದರೆ ಆಗ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ, ನಿಮ್ಮ ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಇದರ ಜೊತೆಗೆ ತಪ್ಪದೆ ಅನಗತ್ಯ ಸಂದರ್ಭದಲ್ಲಿ ವಿದ್ಯುತ್ ಬಳಕೆ ಮಾಡುವುದನ್ನು ನಿಯಂತ್ರಿಸಿ. ನೀವು ರೂಮ್ನಲ್ಲಿ ಇಲ್ಲದಿದ್ದರೂ ಎಸಿ ಆನ್ ಇಡುವುದು ಅಥವಾ ಫ್ಯಾನ್ ಆನ್ ಇಡುವುದು, ಲೈಟ್ ಆಫ್ ಮಾಡದೆ ಇರುವುದು, ಗೀಸರ್ ಸ್ವಿಚ್ ಆಫ್ ಮಾಡುವುದನ್ನು ಮರೆಯುವುದು ಇಂತಹ ತಪ್ಪುಗಳನ್ನು ಮಾಡದೆ ಇದ್ದರೆ ನೀವು ಸುಲಭವಾಗಿ ಇಂತಹ ಬೇಸಿಗೆ ಕಾಲದಲ್ಲಿಯೂ ಕೂಡ ವಿದ್ಯುತ್ ಬಿಲ್ ಬಾರದಂತೆ 200 ಯೂನಿಟ್ ಒಳಗಡೆನೇ ವಿದ್ಯುತ್ ಬಳಕೆ ಮಾಡಬಹುದು.. ಟ್ರೈ ಮಾಡಿ.

Gruha jyothi free electricity should not exceed 200 units, Here are the tricks

Our Whatsapp Channel is Live Now 👇

Whatsapp Channel

Related Stories