ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ, ನಿಮ್ಮ ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಕೇಂದ್ರ ಸರ್ಕಾರ ಬಡವರಿಗೆ ಅನುಕೂಲವಾಗುವಂತೆ ಪಡಿತರ ವಸ್ತುಗಳನ್ನು ಉಚಿತವಾಗಿ ನೀಡುತ್ತದೆ, ಅದರಲ್ಲೂ ಐದು ಕೆಜಿ ಅಕ್ಕಿಯನ್ನು ಕಳೆದ ಎರಡು ವರ್ಷಗಳಿಂದ ಉಚಿತವಾಗಿ ನೀಡಲಾಗುತ್ತಿದ್ದು, ಈ ವರ್ಷವೂ ಈ ಯೋಜನೆ ಮುಂದುವರೆದಿದೆ

ಇದರ ಜೊತೆಗೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಬಡವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ ಸರ್ಕಾರ ತಿಳಿಸಿರುವಂತೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುವುದು ಎಂದು ಹೇಳಲಾಗಿತ್ತು.

ಆದರೆ ರಾಜ್ಯ ಸರ್ಕಾರಕ್ಕೆ 5 ಕೆಜಿ ಅಕ್ಕಿ ಕೊಡುವಷ್ಟು ದಾಸ್ತಾನು ಇಲ್ಲದೆ ಇರುವ ಪರಿಣಾಮ ಅಕ್ಕಿಯ ಬದಲು ದುಡ್ಡನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 170 ಫಲಾನುಭವಿ ಖಾತೆಗೆ (Bank Account) ನೇರವಾಗಿ ವರ್ಗಾವಣೆ ಆಗುತ್ತಿದೆ.

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ ಈ ಕೆಲಸ ಮಾಡುವುದು ಕಡ್ಡಾಯ!

ಅಂತ್ಯೋದಯ ಕಾರ್ಡ್ (antyodaya card) ಹೊಂದಿರುವವರಿಗೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ ಮತ್ತು ಬಿಪಿಎಲ್ ಕಾರ್ಡ್ (BPL Ration card) ಹೊಂದಿರುವವರಿಗೆ ಅಕ್ಕಿಯ ಬದಲು ಹಣವನ್ನು ನೆರವಾಗಿ ಬ್ಯಾಂಕ ಖಾತೆಗೆ ಜಮಾ ಮಾಡಲಾಗುತ್ತಿದೆ.

ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಿ (Check your DBT status)

ಹೌದು, ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಬಂದಿದೆಯಾ ಇಲ್ವಾ ಎನ್ನುವುದನ್ನು ನೀವು ಆನ್ಲೈನ್ ಮೂಲಕವೇ ಚೆಕ್ ಮಾಡಬಹುದು. ನಿಮಗೆ ಯೋಜನೆ ಹಣ ಫಲಾನುಭವಿ ಖಾತೆಗೆ ಬಂದರೆ ಬ್ಯಾಂಕ್ನಿಂದ ಕನೆಕ್ಟ್ ಆಗಿರುವ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತದೆ

ಒಂದುವೇಳೆ ಈ ಮೆಸೇಜ್ ಬಾರದೆಯಿದ್ದಲ್ಲಿ ನೀವು ಬ್ಯಾಂಕಿಗೆ ಹೋಗಿ ಪರಿಶೀಲಿಸಬಹುದು. ಅಥವಾ ಆಹಾರ ಇಲಾಖೆ ಯಾವುದೇ ಸ್ಟೇಟಸ್ ಚೆಕ್ ಮಾಡಬಹುದು.

ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್; ಏಪ್ರಿಲ್ ತಿಂಗಳ ಲಿಸ್ಟ್ ಬಿಡುಗಡೆ

Annabhagya Schemeಆನ್ಲೈನ್ನಲ್ಲಿ ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

* ಡಿ ಬಿ ಟಿ ಕರ್ನಾಟಕ (DBT Karnataka mobile application) ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
* ನಂತರ ಆಧಾರ್ ಸಂಖ್ಯೆಯನ್ನು ಹಾಕಿ
* ಓಟಿಪಿಯನ್ನು ನಮೂದಿಸಿ
* ನಾಲ್ಕು ಅಂಕಿಯ mPIN ರಚಿಸಿ.
* ಮತ್ತೆ ಅದೇ ಪಿನ್ ಸಂಖ್ಯೆಯನ್ನು ಹಾಕಿ ಲಾಗಿನ್ ಆಗಿ
* ಈಗ ನಿಮಗೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ಪಾವತಿ ವಿವರ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ
* ನಿಮ್ಮ ಖಾತೆಗೆ ಸರ್ಕಾರದಿಂದ ಯಾವೆಲ್ಲ ಯೋಜನೆಯ ಹಣ ಜಮಾ ಆಗಿದೆಯೋ ಆ ವಿವರಗಳು ಇಲ್ಲಿ ಇರುತ್ತವೆ.
* ನೀವು ಅನ್ನಭಾಗ್ಯ ಯೋಜನೆ ಎನ್ನುವುದನ್ನು ಆಯ್ಕೆ ಮಾಡಿ ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ವೋ ಎನ್ನುವುದನ್ನ ತಿಳಿಯಬಹುದು.

ಗೃಹಲಕ್ಷ್ಮಿ ಮರು ಪರಿಶೀಲನೆ ಪಟ್ಟಿ ಬಿಡುಗಡೆ! ಇದ್ರಲ್ಲಿ ಹೆಸರು ಇದ್ರೆ ಮಾತ್ರ ಹಣ ಜಮಾ

Annabhagya Yojana Fund has been deposited, check your DBT status

Related Stories