Karnataka NewsBangalore News

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ ಈ ಕೆಲಸ ಮಾಡುವುದು ಕಡ್ಡಾಯ!

ಅವಧಿಗೂ ಮೊದಲೇ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಫಲಾನುಭವಿಗಳ ಖಾತೆಗೆ (Bank Account) ಜಮಾ ಆಗಿದೆ. ನಿಮ್ಮ ಖಾತೆಗೂ ಬಂದಿದ್ಯ ಎನ್ನುವುದನ್ನ ನೀವು ಡಿಬಿಟಿ ಸ್ಟೇಟಸ್ ಚೆಕ್ (check dbt status) ಮಾಡುವುದರ ಮೂಲಕ ತಿಳಿದುಕೊಳ್ಳಬಹುದು.

ಹೌದು ಸ್ನೇಹಿತರೆ, ಈಗಾಗಲೇ ಲೋಕಸಭಾ ಚುನಾವಣೆ ನಡೆಯುತ್ತಿದೆ 26 ನೇ ತಾರೀಕಿನಂದು ಕೆಲವು ಕಡೆ ವೋಟಿಂಗ್ ನಡೆದರೆ ಇನ್ನು ಮೇ 7ನೇ ತಾರೀಕಿನಂದು ಇನ್ನೂ ಕೆಲವು ಕಡೆ ವೋಟಿಂಗ್ ನಡೆಯಲಿದೆ.

Gruha Lakshmi pending money is also deposited for the women of this district

ಈ ಹಿನ್ನೆಲೆಯಲ್ಲಿ ಸರ್ಕಾರ ಏಪ್ರಿಲ್ ಕಂತಿನ ಹಣ ಅಂದರೆ 8ನೇ ಕಂತಿನ ಹಣ ಜಮಾ ಮಾಡಿದ ನಂತರ ಮೇ ತಿಂಗಳಿನಲ್ಲಿ ಜಮಾ ಮಾಡಬೇಕಾಗಿರುವ 9ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.

ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್; ಏಪ್ರಿಲ್ ತಿಂಗಳ ಲಿಸ್ಟ್ ಬಿಡುಗಡೆ

ಈಗಾಗಲೇ ಕೆಲವು ಮಹಿಳೆಯರ ಖಾತೆಗೆ ಒಂದೇ ತಿಂಗಳಿನಲ್ಲಿ 4000 ಅಂದರೆ 8 ಮತ್ತು 9ನೇ ಕಂತಿನ ಹಣ ಜಮಾ ಆಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬ್ಯಾಂಕ್ ಸ್ಟೇಟ್ಮೆಂಟ್ ಗಳು (Bank Statement) ವೈರಲ್ ಆಗುತ್ತಿವೆ.

ಹೌದು, ಸರ್ಕಾರ ಈಗಾಗಲೇ ತಿಳಿಸಿರುವಂತೆ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಮೇ ತಿಂಗಳ ಒಳಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಲಾಗಿತ್ತು. ಅದೇ ರೀತಿ ಕೆಲವರಿಗೆ ಪೆಂಡಿಂಗ್ ಹಣ (pending amount) ಜಮಾ ಆಗಿದ್ದರು ಇನ್ನೂ ಸಾಕಷ್ಟು ಜನರಿಗೆ ಪೆಂಡಿಂಗ್ ಇರುವ ಹಣ ಬಂದಿಲ್ಲ.

ಇನ್ನು ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಯಾರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದೆಯೋ ಅವರು ತಮ್ಮ ಖಾತೆ ಅಪ್ಡೇಟ್ ಮಾಡಿಕೊಂಡು ಸಮಸ್ಯೆ ಪರಿಹರಿಸಿಕೊಂಡರೆ ಅಂತವರ ಖಾತೆಗೆ ಪೆಂಡಿಂಗ್ ಇರುವ ಹಣವು ಕೂಡ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ ವರದಿಯಾಗಿದೆ.

ಗೃಹಲಕ್ಷ್ಮಿ ಮರು ಪರಿಶೀಲನೆ ಪಟ್ಟಿ ಬಿಡುಗಡೆ! ಇದ್ರಲ್ಲಿ ಹೆಸರು ಇದ್ರೆ ಮಾತ್ರ ಹಣ ಜಮಾ

Gruha Lakshmi Yojanaಈಕೆ ವೈಸಿ ಮತ್ತು ಆಧಾರ್ ಸೀಡಿಂಗ್ ಮಾಡಿಸಿಕೊಳ್ಳಿ! (E-KYC and Aadhar seeding)

ನೀವು ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಅದು ಬಹಳ ವರ್ಷ ಹಳೆಯದಾಗಿದ್ದರೆ ಆ ಖಾತೆ ಆಕ್ಟಿವ್ ಆಗಿರದೆ ಇರಬಹುದು ಅಂತಹ ಸಂದರ್ಭದಲ್ಲಿ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳುವುದು ಜೊತೆಗೆ ಈಕೆ ವೈ ಸಿ ಅಪ್ಡೇಟ್ ಮಾಡಿಸುವುದು ಬಹಳ ಮುಖ್ಯ. ಇಷ್ಟಾಗಿಯೂ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದರೆ ನೀವು ಎನ್ಪಿಸಿಐ ಮ್ಯಾಪಿಂಗ್ ಕೂಡ ಮಾಡಿಸಿಕೊಳ್ಳಬೇಕು.

ಹೊಸ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಇದರಲ್ಲಿ ಹೆಸರು ಇದ್ರೆ ಇನ್ನಷ್ಟು ಬೆನಿಫಿಟ್

ಪರಿಹಾರವನ್ನು ಸೂಚಿಸಿದೆ ಸರ್ಕಾರ!

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಮನೆಮನೆಯ ಗೃಹಿಣಿಯರಿಗೆ ತಲುಪಲು ಆಶಾ ಕಾರ್ಯಕರ್ತೆಯರು ಸರ್ಕಾರದ ಜೊತೆಗೆ ಕೈಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕ ಪಡೆದುಕೊಂಡು ನೀವು ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.

ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಮಹಿಳೆಯರು ತಮ್ಮ ಖಾತೆಗೆ ಹಣ ಬರದೇ ಇದ್ದರೆ ಆಶಾ ಕಾರ್ಯಕರ್ತೆಯರನ್ನು ಅಥವಾ ಅಂಗನವಾಡಿ ಸಹಾಯಕಿಯರನ್ನು ಸಂಪರ್ಕಿಸಬಹುದು ಅವರ ಮೂಲಕ ಬ್ಯಾಂಕಿಗೆ ಹೋಗಿ ಅಗತ್ಯ ಇರುವ ಅಪ್ಡೇಟ್ ಮಾಡಿಸಿಕೊಂಡು ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.

ನ್ಯಾಯಬೆಲೆ ಅಂಗಡಿ ತೆರೆಯೋಕೆ ಅವಕಾಶ! ಅರ್ಹತೆ, ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ

From now on it is mandatory to do this work to get Gruha Lakshmi Scheme Money

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories