ನ್ಯಾಯಬೆಲೆ ಅಂಗಡಿ ತೆರೆಯೋಕೆ ಅವಕಾಶ! ಅರ್ಹತೆ, ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ

ನ್ಯಾಯ ಬೆಲೆ ಅಂಗಡಿಯನ್ನು ಹೆಚ್ಚಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ನೀವು ಕೂಡ ಸ್ಥಳಿಯವಾಗಿ ನ್ಯಾಯಬೆಲೆ ಅಂಗಡಿ ಆರಂಭಿಸಬಹುದು

Bengaluru, Karnataka, India
Edited By: Satish Raj Goravigere

ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ (BPL Ration Card) ಇರುವವರು ಉಚಿತವಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನ ಪಡೆದುಕೊಳ್ಳಬಹುದು. ಅದರಲ್ಲೂ ರಾಜ್ಯ ಸರ್ಕಾರ ಈಗ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಉಚಿತ ಉಳಿದ ಐದು ಕೆಜಿ ಅಕ್ಕಿ ಬದಲಾಗಿ ಹಣವನ್ನು ವಿತರಣೆ ಮಾಡುತ್ತಿದೆ.

ಇನ್ನು ರೇಶನ್ (ration card) ಪಡೆದುಕೊಳ್ಳಬೇಕು ಅಂದ್ರೆ ನೀವು ನ್ಯಾಯ ಬೆಲೆ ಅಂಗಡಿಗೆ ತೆರಳಲೇಬೇಕು. ಪ್ರತಿಯೊಂದು ಹಳ್ಳಿಯಲ್ಲಿಯೂ ಗ್ರಾಮಕ್ಕೆ ಒಂದಾದರೂ ನ್ಯಾಯಬೆಲೆ ಅಂಗಡಿ ಇದ್ದೇ ಇರುತ್ತದೆ. ಅಲ್ಲಿಗೆ ನೀವು ಹೋಗಿ ನಿಗದಿತ ದಿನಾಂಕದಂದು ರೇಷನ್ ಪಡೆಯಬಹುದು.

distribution of new ration card, Also the decision to cancel ration cards

ರಾಜ್ಯದ ಮಹಿಳೆಯರಿಗೆ ಒಟ್ಟಾರೆ ಎಲ್ಲಾ ಗೃಹಲಕ್ಷ್ಮಿ ಹಣ ಜಮಾ! ನಿಮಗೆ ಬಂದಿಲ್ವಾ ಈ ರೀತಿ ಮಾಡಿ

ನೀವು ನ್ಯಾಯಬೆಲೆ ಅಂಗಡಿ ಆರಂಭಿಸಬಹುದು ಗೊತ್ತ?

ರೇಷನ್ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾದಂತೆ ನ್ಯಾಯ ಬೆಲೆ ಅಂಗಡಿಯಲ್ಲಿ ಎಲ್ಲರಿಗೂ ಸಕಾಲದಲ್ಲಿ ಪಡಿತರ ಒದಗಿಸಲು ಸಾಧ್ಯವಿಲ್ಲ ತುಂಬಾ ಹೊತ್ತು ಕ್ಯೂನಲ್ಲಿ ಕಾಯಬೇಕು. ಹೀಗಾಗಿ ನ್ಯಾಯ ಬೆಲೆ ಅಂಗಡಿಯನ್ನು ಹೆಚ್ಚಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ನೀವು ಕೂಡ ಸ್ಥಳಿಯವಾಗಿ ನ್ಯಾಯಬೆಲೆ ಅಂಗಡಿ ಆರಂಭಿಸಬಹುದು ಇದಕ್ಕೆ ಸರ್ಕಾರ ಅರ್ಜಿ ಆಹ್ವಾನಿಸಿದೆ. ಇದನ್ನು ಆರಂಭಿಸುವುದಕ್ಕೆ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಇಲ್ಲಿದೆ ಮಾಹಿತಿ.

ಅರ್ಹತೆಗಳು!

* ಭಾರತೀಯ ಪ್ರಜೆ ಆಗಿರಬೇಕು
* ಕನಿಷ್ಠ 10ನೇ ತರಗತಿ ಶಿಕ್ಷಣ ಪಡೆದಿರಬೇಕು
* 50 ಸಾವಿರವಾದರೂ ಕನಿಷ್ಠ ಹಣ ಬ್ಯಾಂಕ್ ಖಾತೆಯಲ್ಲಿ ಇರಬೇಕು
* ಯಾವುದೇ ಕ್ರಿಮಿನಲ್ ಕೇಸ್ ಅಥವಾ ಇತರ ಕೇಸ್ ನಿಮ್ಮ ಹೆಸರಿನಲ್ಲಿ ಇರಬಾರದು
* ರೇಷನ್ ಡೀಲರ್ ಶಿಪ್ (ration dealership) ಒಂದು ಬಾರಿಗೆ ಮಾತ್ರ ಸಿಗುತ್ತದೆ ಎರಡನೇ ಬಾರಿಗೆ ಅರ್ಜಿ ಹಾಕಲು ಸಾಧ್ಯವಿಲ್ಲ
* 21ರಿಂದ 35 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು
* ಕಂಪ್ಯೂಟರ್ ಶಿಕ್ಷಣ ಹೊಂದಿರಬೇಕು
* ಜಾಗದ ಬಗ್ಗೆ ಮಾಹಿತಿ ನೀಡಬೇಕು

ಹೊಸ ಬಿಪಿಎಲ್ ಕಾರ್ಡ್ ಪಡೆಯೋಕೆ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ

Ration Shopಬೇಕಾಗುವ ದಾಖಲೆಗಳು

ವ್ಯಾಪಾರ ಮಳಿಗೆ
ಬಾಡಿಗೆ ಕರಾರು ಪತ್ರ
ಬ್ಯಾಂಕ ಖಾತೆಯ ವಿವರ
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಕ್ರಿಮಿನಲ್ ಪ್ರಕರಣ ಹೊಂದಿಲ್ಲದೆ ಇರುವುದಕ್ಕೆ ವೆರಿಫಿಕೇಶನ್ ರಿಪೋರ್ಟ್
ಆದಾಯ ಪ್ರಮಾಣ ಪತ್ರ
ಪಾಸ್ಪೋರ್ಟ್ ಅಳತೆಯ ಫೋಟೋ

ಗೃಹಲಕ್ಷ್ಮಿ 9ನೇ ಕಂತಿಗೆ ಹೊಸ ಕಂಡೀಷನ್; ಯಾರ ಖಾತೆಗೆ ಹಣ ಬಂದಿದೆ ಇಲ್ಲಿದೆ ಡೀಟೇಲ್ಸ್

ಇಂಥವರಿಗೆ ಮೊದಲ ಆದ್ಯತೆ!

ನ್ಯಾಯಬೆಲೆ ಅಂಗಡಿಯನ್ನು ಒಂದು ಗುಂಪಿನಲ್ಲಿ ಆರಂಭಿಸಬಹುದು ಅಂದರೆ ಪ್ರಾಥಮಿಕ ಕೃಷಿ ಸಹಕಾರ ಸಂಘ ಮಹಿಳಾ ಸ್ವಸಹಾಯ ಸಂಘ ತೋಟಗಾರಿಕಾ ಸಂಘ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೇರೆ ಬೇರೆ ಸಂಘ ಸಂಸ್ಥೆಗಳು ಅರ್ಜಿ ಹಾಕಬಹುದು. ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಕೆಜಿ ದವಸ ಧಾನ್ಯ ಮಾರಾಟದ ಮೇಲೆ ಕಮಿಷನ್ ನೀಡಲಾಗುತ್ತದೆ.

ನೀವು ಕೂಡ ಆಸಕ್ತರಾಗಿದ್ದರೆ ಗ್ರಾಹಕ ವ್ಯವಹಾರಗಳ ಜಂಟಿ ನಿರ್ದೇಶಕರ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ https://ahara.kar.nic.in ಈ ವೆಬ್ ಸೈಟ್ ಗೆ ಭೇಟಿ ನೀಡಿ. ನೀವು ಕೂಡ ನ್ಯಾಯಬೆಲೆ ಅಂಗಡಿಯಲ್ಲಿ ನಿಮ್ಮ ಸ್ವಂತ ಉದ್ಯಮ ಆರಂಭಿಸುವುದಕ್ಕೆ ಸಾಧ್ಯವಿದೆ ಉತ್ತಮ ರೀತಿಯಲ್ಲಿ ಆದಾಯವನ್ನು ಪಡೆಯಬಹುದು ಟ್ರೈ ಮಾಡಿ.

open a fair price shop, Know the eligibility and documents required