Karnataka NewsBangalore News

ರಾಜ್ಯದ ಮಹಿಳೆಯರಿಗೆ ಒಟ್ಟಾರೆ ಎಲ್ಲಾ ಗೃಹಲಕ್ಷ್ಮಿ ಹಣ ಜಮಾ! ನಿಮಗೆ ಬಂದಿಲ್ವಾ ಈ ರೀತಿ ಮಾಡಿ

ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಜಾರಿಗೆ ಬಂದು ಆಗಲೇ 8 ತಿಂಗಳು ಕಳೆದಿದೆ. ಇಲ್ಲಿಯವರೆಗೆ ಮಹಿಳೆಯರಿಗೆ ಒಟ್ಟು 16,000 ಖಾತೆಗೆ ಜಮಾ ಆಗಿದೆ, ಅರ್ಜಿ ಸಲ್ಲಿಸಿದ ಕೋಟ್ಯಾಂತರ ಮಹಿಳೆಯರಲ್ಲಿ ಬಹುತೇಕ 9% ನಷ್ಟು ಮಹಿಳೆಯರ ಖಾತೆಗೆ ಹಣ ಬಂದಿದೆ ಎಂದು ಸರ್ಕಾರ ವರದಿ ಮಾಡಿದೆ.

ಪ್ರತಿ ತಿಂಗಳು 25 ರಿಂದ 30ನೇ ತಾರೀಖಿನ ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ 9ನೇ ಕಂತಿನ ಹಣವನ್ನು ಕೂಡ ಬಹಳ ಬೇಗ ಬಿಡುಗಡೆ ಮಾಡುವ ಸಾಧ್ಯತೆ ಇದೆ.

Gruha Lakshmi pending money is also deposited for the women of this district

ಹೌದು, ಗೃಹಲಕ್ಷ್ಮಿಯ ಯೋಜನೆಯ 9ನೇ ಕಂತಿನ ಹಣ ಮೇ ತಿಂಗಳ ಮೊದಲ ವಾರದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆ ಇದೆ, ಹಂತ ಹಂತವಾಗಿ ಕೆಲವು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುವುದು. ಹಾಗೂ ಮೇ ತಿಂಗಳ ಎರಡನೇ ವಾರದ ಹೊತ್ತಿಗೆ ಪ್ರತಿಯೊಂದು ಜಿಲ್ಲೆಗೂ ಹಣ ವರ್ಗಾವಣೆ (Money Deposit) ಆಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

ಗೃಹಲಕ್ಷ್ಮಿ 9ನೇ ಕಂತಿಗೆ ಹೊಸ ಕಂಡೀಷನ್; ಯಾರ ಖಾತೆಗೆ ಹಣ ಬಂದಿದೆ ಇಲ್ಲಿದೆ ಡೀಟೇಲ್ಸ್

ದೇಶಾದ್ಯಂತ ಲೋಕಸಭಾ ಎಲೆಕ್ಷನ್ ನಡೆಯುತ್ತಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಯ ಮುಂದುವರಿಸುತ್ತದೆಯೋ ಇಲ್ಲವೋ ಎನ್ನುವ ಡೌಟ್ ಕೂಡ ಸಾಕಷ್ಟು ಜನರಲ್ಲಿ ಇರಬಹುದು

ಆದರೆ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆ ಇನ್ನೂ ಮುಂದುವರೆಯಲಿದೆ ಹಾಗೂ ಒಂಬತ್ತನೇ ಕಂತಿನ ಹಣ ಅಂದರೆ ಮೇ ತಿಂಗಳ ಹಣ ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.

ಇದರ ಜೊತೆಗೆ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಮಾಹಿತಿಯ ಪ್ರಕಾರ ಅಗತ್ಯ ಇರುವ ದಾಖಲೆಗಳನ್ನು ನೀಡಿ ಹೊಸದಾಗಿ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಇದೆ

ಯಾಕಂದ್ರೆ ಸಾಕಷ್ಟು ಜನರಿಗೆ ಇದುವರೆಗೆ ಹಣ ವರ್ಗಾವಣೆ ಆಗಿಲ್ಲ. ಅಂತಹ ಸಂದರ್ಭದಲ್ಲಿ ಖಾತೆಯಲ್ಲಿ ಇರುವ ಸಮಸ್ಯೆಯಿಂದಾಗಿ ಹಣ ಬಾರದೆ ಇರಬಹುದು. ಹಾಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವುದರ ಮೂಲಕ ಮುಂದಿನ ತಿಂಗಳಿನಿಂದ ಹಣ ಬರುವಂತೆ ಮಾಡಿಕೊಳ್ಳುವುದು ಎನ್ನುವ ಸಲಹೆ ನೀಡಿದ್ದಾರೆ.

ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ರದ್ದಾಗುತ್ತದೆ, ಸರ್ಕಾರದ ಹೊಸ ನಿರ್ಧಾರ

Gruha Lakshmi Yojanaಹೊಸ ಖಾತೆಯನ್ನು ತೆರೆಯಿರಿ!

ಸಾಮಾನ್ಯವಾಗಿ ಬ್ಯಾಂಕ್ ಖಾತೆ (Bank Account) ಬಹಳ ಹಳೆಯದಾಗಿದ್ದರೆ ಅಥವಾ ಅದರಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡದೆ ವರ್ಷಗಟ್ಟಲೆ ಆಗಿದ್ದರೆ ಅಂತಹ ಖಾತೆಗೆ ಹಣ ಜಮಾ ಆಗದೆ ಇರಬಹುದು

ಮಿನಿಮಮ್ ಬ್ಯಾಲೆನ್ಸ್ (Bank Balance) ಇಲ್ಲದೆ ಇರುವಾಗ ಬ್ಯಾಂಕ್ (Bank) ಅಂತಹ ಖಾತೆಯನ್ನು ಎರಡು ವರ್ಷಗಳ ಬಳಿಕ ನಿಷ್ಕ್ರಿಯಗೊಳಿಸುತ್ತದೆ. ಈ ರೀತಿಯಾಗಿದ್ದು ನೀವು ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ಅರ್ಜಿ ಸಲ್ಲಿಸುವಾಗ ಹಳೆಯ ಖಾತೆಯ ವಿವರ ನೀಡಿದ್ದರೆ ಆಗ ನಿಮ್ಮ ಖಾತೆಗೆ (Bank Account) ಹಣ ಬಾರದೆ ಇರಬಹುದು

ಗೃಹಜ್ಯೋತಿ ಫ್ರೀ ಕರೆಂಟ್ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಹತ್ವದ ಮಾಹಿತಿ

ಅಂತಹ ಸಂದರ್ಭದಲ್ಲಿ ಅಂಚೆ ಕಚೇರಿಯಲ್ಲಿ ಅಥವಾ ಯಾವುದೇ ರಾಷ್ಟ್ರೀಯ ಬ್ಯಾಂಕ್ ನಲ್ಲಿ ಹೊಸ ಖಾತೆಯನ್ನು ಆರಂಭಿಸುವುದರ ಮೂಲಕ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.

ಇನ್ನು ಕೆಲವರ ಖಾತೆಗೆ ಬ್ಯಾಂಕು ಖಾತೆ ಅಪ್ಡೇಟ್ ಆದ ನಂತರ ಪೆಂಡಿಂಗ್ ಇರುವ ಹಣವು ಜಮಾ ಆಗಿದೆ, ಆದ್ರೆ ಇದು ಎಲ್ಲರ ಖಾತೆಗೂ ಬಂದಿರುವ ಸಾಧ್ಯತೆ ಕಡಿಮೆ ಹಾಗಾಗಿ ನಿಮ್ಮ ಖಾತೆಗೆ ಹಣ ಬಾರದೆ ಇದ್ರೆ ಬ್ಯಾಂಕಿಗೆ ಹೋಗಿ ಪರಿಶೀಲನೆ ನಡೆಸಿ ಅಥವಾ ಹೊಸದಾಗಿ ಅರ್ಜಿ ಸಲ್ಲಿಸಿ.

All Gruha Lakshmi Scheme money Deposited for the women of the state

Our Whatsapp Channel is Live Now 👇

Whatsapp Channel

Related Stories