ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ರದ್ದಾಗುತ್ತದೆ, ಸರ್ಕಾರದ ಹೊಸ ನಿರ್ಧಾರ

ಎಲ್ಲ ಯೋಜನೆಗಳು ಯಾರು ಬಿಪಿಎಲ್ ಕಾರ್ಡ್ (BPL Ration card) ಹೊಂದಿದ್ದಾರೋ ಅವರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ

Bengaluru, Karnataka, India
Edited By: Satish Raj Goravigere

ಪಡಿತರ ಚೀಟಿ (Ration Card) ಇಂದು ಕರ್ನಾಟಕದಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ತಮ್ಮ ಲೈಫ್ ಜಿಂಗಾಲಾಲ ಅಂತಿದ್ದಾರೆ. ಯಾಕೆ ಅಂತೀರಾ? ಕರ್ನಾಟಕ ರಾಜ್ಯ ಸರ್ಕಾರ ಕೆಲವು ಉಚಿತ ಯೋಜನೆ (guarantee schemes) ಗಳನ್ನು ಪರಿಚಯಿಸಿತು.

ಈ ಎಲ್ಲ ಯೋಜನೆಗಳು ಯಾರು ಬಿಪಿಎಲ್ ಕಾರ್ಡ್ (BPL Ration card) ಹೊಂದಿದ್ದಾರೋ ಅವರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಆದರೆ ನಿಜವಾಗಿ ಯಾರಿಗೆ ಈ ಯೋಜನೆಯ ಪ್ರಯೋಜನ ಸಿಗಬೇಕೋ, ಅವರಿಗೆ ಸಿಗ್ತಿದ್ಯಾ ಅಂತ ಕೇಳಿದ್ರೆ ಖಂಡಿತವಾಗಿ ಇಲ್ಲ ಎನ್ನುವ ಉತ್ತರ ಬರುತ್ತೆ.

The ration card of such families has been cancelled

ಯಾಕೆ ಅಂದ್ರೆ ಅರ್ಹತೆಯನ್ನು ಹೊಂದಿರುವವರಿಗಿಂತ ಯಾರು ಅನರ್ಹರು.. ಅಂದ್ರೆ ಉತ್ತಮ ಸ್ಥಿತಿಯಲ್ಲಿ ಇದ್ದಾರೋ ಅವರು ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಗೃಹಜ್ಯೋತಿ ಫ್ರೀ ಕರೆಂಟ್ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಹತ್ವದ ಮಾಹಿತಿ

ಈ ರೀತಿ ವಂಚನೆ ನಡೆದಿರುವುದರಿಂದ ಸಾಕಷ್ಟು ನಿಜವಾದ ಫಲಾನುಭವಿಗಳಿಗೆ ರೇಷನ್ ಕಾರ್ಡ್ ಸಿಗುತ್ತಿಲ್ಲ. ಸರ್ಕಾರದ ನಿಯಮದ ಪ್ರಕಾರ ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ಬಳಿ ಇರುವ ರೇಷನ್ ಕಾರ್ಡ್ ಅಪ್ಡೇಟ್ ಆಗಬೇಕು, ಈ ಸಂದರ್ಭದಲ್ಲಿ ಅನರ್ಹರ ಬಳಿ ಇರುವ ರೇಷನ್ ಕಾರ್ಡ್ ಅನ್ನು ಸರ್ಕಾರ ರದ್ದುಪಡಿ ಮಾಡಿದೆ. ಈಗಾಗಲೇ ಸುಮಾರು ಮೂರು ಲಕ್ಷಕ್ಕೂ ಅಧಿಕ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದೆ ಎಂದು ವರದಿಯಾಗಿದೆ.

ಗೃಹಲಕ್ಷ್ಮಿ ಪೆಂಡಿಂಗ್ ಹಣದ ಬಗ್ಗೆ ಬಂತು ನೋಡಿ ಹೊಸ ಅಪ್ಡೇಟ್! ಎಲ್ಲರಿಗು ಹಣ ಜಮಾ

ಯಾರ ರೇಷನ್ ಕಾರ್ಡ್ ರದ್ದಾಗುತ್ತೆ ಗೊತ್ತಾ? (Ration card cancellation)

BPL Ration Card* ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಸರ್ಕಾರ ಬೇರೆ ಬೇರೆ ಮಾನದಂಡಗಳನ್ನು ತಿಳಿಸಿದೆ ಈ ಮಾನದಂಡದ ಅಡಿಯಲ್ಲಿ ಬಾರದೆ ಇರುವವರು ಬಿಪಿಎಲ್ ಕಾರ್ಡ್ ಹೊಂದಿದ್ರೆ ಅವರ ಕಾರ್ಡ್ ಆಗುತ್ತೆ.

* ಕಳೆದ ಆರು ತಿಂಗಳಿನಿಂದ ಯಾರೂ ಪಡಿತರ ವಸ್ತುಗಳನ್ನ ಖರೀದಿ ಮಾಡಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದಾಗುತ್ತದೆ.

* ಬಿಪಿಎಲ್ ಕಾರ್ಡ್ ಹೊಂದಿರುವವರು ತಮ್ಮ ಕಾರ್ಡನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಕೊಳ್ಳಬೇಕು. ಈ ರೀತಿ ಲಿಂಕ್ ಮಾಡಿಕೊಂಡಾಗ ಆ ಕುಟುಂಬದ ಎಲ್ಲಾ ವಿವರಗಳು ಕೂಡ ಸರ್ಕಾರದ ಡೇಟಾಬೇಸ್‌ನಲ್ಲಿ ಸ್ಟೋರ್ ಆಗುತ್ತದೆ. ಹಾಗಾಗಿ ಅಂತವರು ಉಳ್ಳವರಾಗಿದ್ರೆ ಅವರ ರೇಷನ್ ಕಾರ್ಡ್ ಅನ್ನು ಸರ್ಕಾರ ತಕ್ಷಣ ರದ್ದು ಪಡಿ ಮಾಡುತ್ತೆ.

ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗುತ್ತೆ ಹೀಗೆ ಮಾಡಿ!

* ಇನ್ನು ಸರ್ಕಾರಿ ನೌಕರಿ ಮಾಡುತ್ತಿರುವವರು ಉತ್ತಮ ಆದಾಯ ಗಳಿಸುವವರು ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರ್ಕಾರದ ಉಚಿತ ಯೋಜನೆ ಪಡೆದುಕೊಳ್ಳುತ್ತಿದ್ದರು ಅಂತವರ ಕಾರ್ಡ್ ರದ್ದಾಗುತ್ತದೆ.

ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ ಬಿಡುಗಡೆ ಮಾಡಿದ ನಂತರ ಬಡತನ ರೇಖೆಗಿಂತ ಕೆಳಗಿರುವವರಿಗೆ ಸಾಕಷ್ಟು ಅನುಕೂಲ ಆಗಿದೆ. ಆದರೆ ಇಲ್ಲಿಯೂ ಕೂಡ ವಂಚನೆ ನಡೆಯುತ್ತಿದ್ದು ಇದನ್ನು ಆಹಾರ ಇಲಾಖೆ ಗಮನಿಸಿದೆ.

ಹಾಗಾಗಿ ರಾಜ್ಯ ಸರ್ಕಾರದಲ್ಲಿ ಯಾರು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಲು ಇನ್ನು ಮುಂದೆ ಸಾಧ್ಯವಿಲ್ಲ. ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವಾಗಲೂ ಬಹಳ ಕೂಲಂಕುಶವಾಗಿ ಅರ್ಜಿಯನ್ನು ಪರಿಶೀಲಿಸಿ ಅಂತವರಿಗೆ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಎರಡರಲ್ಲಿ ಯಾವುದನ್ನು ವಿತರಣೆ ಮಾಡಬೇಕು ಎಂದು ಸರ್ಕಾರವೇ ನಿರ್ಧಾರ ಮಾಡಿ ಕಾರ್ಡ್ ವಿತರಣೆ ಮಾಡುತ್ತದೆ.

ಏಪ್ರಿಲ್ ತಿಂಗಳ ಅನ್ನಭಾಗ್ಯ ಅಕ್ಕಿ ಹಣ ಜಮಾ ಆಗಿದೆ! ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ

ಒಟ್ಟಿನಲ್ಲಿ ರೇಷನ್ ಕಾರ್ಡ್ ಹೊಂದಿರುವ ಸಾಕಷ್ಟು ಕುಟುಂಬಗಳು ಇನ್ನು ಮುಂದೆ ತಮ್ಮ ರೇಷನ್ ಕಾರ್ಡ್ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು.

The ration card of such people will be canceled, new decision of the government