ಗೃಹಜ್ಯೋತಿ ಫ್ರೀ ಕರೆಂಟ್ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಹತ್ವದ ಮಾಹಿತಿ
ಉಚಿತ ವಿದ್ಯುತ್ ಮಿತಿಗಿಂತ ಹೆಚ್ಚಿನ ವಿದ್ಯುತ್ ಅನ್ನು ಬಳಸಿ ಕರೆಂಟ್ ಬಿಲ್ (Electricity Bill) ಅನ್ನು ಪಾವತಿ ಮಾಡಬೇಕಾಗಿರುತ್ತದೆ.
ಈ ಬೇಸಿಗೆ ಕಾಲದಲ್ಲಿ ಸೆಕೆ ಅನ್ನೋದು ಯಾವ ರೇಂಜಿನಲ್ಲಿ ಭಾರತೀಯರನ್ನು ಕಾಡುತ್ತಿದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಯಾಕೆಂದರೆ ಎಲ್ಲಿ ನೋಡಿದರೂ ಸೆಕೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಕಾಣುತ್ತಾರೆ.
ಅದರಲ್ಲೂ ವಿಶೇಷವಾಗಿ ನಾವು ಮಾತಾಡ್ತಾ ಇರೋದು ನಮ್ಮ ಕರ್ನಾಟಕ ರಾಜ್ಯದ ಬಗ್ಗೆ. ನಿಜಕ್ಕೂ ಕೂಡ ಮರುಭೂಮಿಯಲ್ಲಿ ವಾಸಿಸುತ್ತಿರುವಂತಹ ಅನುಭವ ಉಂಟಾಗುತ್ತದೆ.
ಫ್ಯಾನ್ ಹಾಕಿದರೂ ಕೂಡ ಸೆಕೆ ಹೋಗ್ತಿಲ್ಲ. ಕೇವಲ ಎಸಿ ಅಥವಾ ಕೂಲರ್ ಮೂಲಕ ಮಾತ್ರವೇ ನಾವು ತಂಪಾಗಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ, ಆದರೆ ಇವುಗಳ ಹೆಚ್ಚಾದ ಬೆಲೆಯಿಂದಾಗಿ ಹಾಗೂ ಇವುಗಳ ಹೆಚ್ಚಾಗಿ ಕರೆಂಟ್ ಅನ್ನು ಉಪಯೋಗಿಸಿಕೊಳ್ಳುವುದರಿಂದಾಗಿ ಇದು ಕೂಡ ಮಧ್ಯಮ ವರ್ಗದ ಗ್ರಾಹಕರಿಗೆ ಕಷ್ಟ ಸಾಧ್ಯವಾಗಿರುವಂತಹ ಮಾತಾಗಿದೆ.
ಗೃಹಲಕ್ಷ್ಮಿ ಪೆಂಡಿಂಗ್ ಹಣದ ಬಗ್ಗೆ ಬಂತು ನೋಡಿ ಹೊಸ ಅಪ್ಡೇಟ್! ಎಲ್ಲರಿಗು ಹಣ ಜಮಾ
ಸಾಮಾನ್ಯವಾಗಿ ಎಸಿ ಬಳಸಿಕೊಳ್ಳುವುದಕ್ಕೆ ಸಾಮಾನ್ಯ ವಿದ್ಯುತ್ ಬೆಳಕಿಗಿಂತ ಹೆಚ್ಚಿನ ವಿದ್ಯುತ್ ಬೇಕಾಗಿರುತ್ತದೆ. ಅಂದರೆ ಅವುಗಳನ್ನು ಖರೀದಿಸುವುದು ಮಾತ್ರವಲ್ಲದೆ ಅವುಗಳ ನಿರ್ವಹಣೆ ಕೂಡ ದುಬಾರಿ ವೆಚ್ಚದ ಜೊತೆಗೆ ನಡೆಯುತ್ತದೆ.
ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ (Free Electricity) ಸಿಗುತ್ತದೆ ನಿಜ, ಆದರೆ ಹೆಚ್ಚಾದ ವಿದ್ಯುತ್ ಬಳಕೆ ಮಾಡುವಂತಹ ಏಸಿಯನ್ನು ನೀವು ಸಿಕ್ಕಾಪಟ್ಟೆಯಾಗಿ ಬಳಕೆ ಮಾಡಿದರೆ ನೀವು ಉಚಿತ ವಿದ್ಯುತ್ ಮಿತಿಗಿಂತ ಹೆಚ್ಚಿನ ವಿದ್ಯುತ್ ಅನ್ನು ಬಳಸಿ ಕರೆಂಟ್ ಬಿಲ್ (Electricity Bill) ಅನ್ನು ಪಾವತಿ ಮಾಡಬೇಕಾಗಿರುತ್ತದೆ.
ಹೀಗಾಗಿ ನೀಡಿರುವಂತಹ ಲಿಮಿಟ್ ಒಳಗೆ ಗೃಹ ಜ್ಯೋತಿ ಯೋಜನೆಯ ವಿದ್ಯುತ್ ಅನ್ನು ಎಸಿ ಬಳಕೆ ಮಾಡುವ ಮೂಲಕ ಕೂಡ ಉಚಿತವಾಗಿ ಪಡೆದುಕೊಳ್ಳಬಹುದಾ ಎನ್ನುವುದಾಗಿ ಸಾಕಷ್ಟು ಜನರಲ್ಲಿ ಗೊಂದಲ ಇರಬಹುದು. ಹಾಗಿದ್ದರೆ ಯಾವ ರೀತಿಯಲ್ಲಿ ಎಸಿ ಬಳಕೆ ಮಾಡಬೇಕು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.
ಏಪ್ರಿಲ್ ತಿಂಗಳ ಅನ್ನಭಾಗ್ಯ ಅಕ್ಕಿ ಹಣ ಜಮಾ ಆಗಿದೆ! ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ
ಈ ರೀತಿ ಬಳಕೆ ಮಾಡಿ ಕಡಿಮೆ ವಿದ್ಯುತ್ ಖರ್ಚಿನಲ್ಲಿ!
* ಸಾಮಾನ್ಯವಾಗಿ ನೀವು ಎಸಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಐದು ಸ್ಟಾರ್ ರೇಟಿಂಗ್ ಇರುವಂತಹ ಎಸಿ ಯನ್ನು ಖರೀದಿ ಮಾಡುವುದು ಒಳ್ಳೆಯದು. ಯಾಕೆಂದರೆ ಈ ರೀತಿಯ ಏಸಿಗಳು ಖರೀದಿಸುವುದಕ್ಕೆ ಹಣ ಹೆಚ್ಚಿರುವುದು, ಆದರೆ ಅವುಗಳ ಕ್ವಾಲಿಟಿ ಟಾಪ್ ಆಗಿರುತ್ತದೆ ಹಾಗೂ ವಿದ್ಯುತ್ ಬಳಕೆ ಮಾಡುವಂತಹ ಪ್ರಮಾಣ ಕೂಡ ಕಡಿಮೆ ಆಗಿರುತ್ತದೆ.
* ಎಸಿ ಅನ್ನು ಆನ್ ಮಾಡುವ ಸಂದರ್ಭದಲ್ಲಿ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿರಬೇಕು ಯಾಕೆಂದರೆ ಈ ರೀತಿ ಕಿಟಕಿಗಳನ್ನು ಮುಚ್ಚದೆ ಹೋದಲ್ಲಿ ನೀವು ಇರುವಂತಹ ರೂಮ್ ಬೇಗ ತಂಪಾಗುವುದಿಲ್ಲ ಮುಚ್ಚಿದರೆ ಮಾತ್ರ ಬೇಗ ತಂಪಾಗುತ್ತದೆ ಹಾಗೂ ಹೆಚ್ಚಿನ ವಿದ್ಯುತ್ ಅನ್ನು ಬಳಸಬೇಕಾದ ಅಗತ್ಯ ಕೂಡ ಇರುವುದಿಲ್ಲ.
ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಕ್ಕೆ ಗುಡ್ ನ್ಯೂಸ್ ನೀಡಿದ ಸರ್ಕಾರ!
* ಎಸಿ ಬಳಸುವ ವೇಳೆ ಸರಿಯಾದ ಟೆಂಪರೇಚರ್ ಅನ್ನು ಸೆಟ್ ಮಾಡುವುದು ಕೂಡ ಅತ್ಯಂತ ಅಗತ್ಯವಾಗಿರುತ್ತದೆ. 24 ಡಿಗ್ರಿ ನಲ್ಲಿ ಟೆಂಪರೇಚರ್ ಸೆಟ್ ಮಾಡಿದ್ರೆ ಹೆಚ್ಚಾಗಿ ಹೆಚ್ಚಿನ ಸಮಯದವರೆಗೆ ತಂಪು ಇರುವಂತಹ ಕೂಲ್ ಅನುಭವವನ್ನು ಎಸಿ ನೀಡುತ್ತದೆ. ಈ ಮೂಲಕ ನೀವು ವಿದ್ಯುತ್ ಬಳಕೆಯಲ್ಲಿ 10 ಪ್ರತಿಶತ ಉಳಿತಾಯ ಮಾಡಬಹುದಾಗಿದೆ.
* ಎಸಿ ಜೊತೆಗೆ ಫ್ಯಾನ್ ಅನ್ನು ಕೂಡ ನೀವು ಬಳಸ್ತಾ ಇದ್ರೆ ಆ ಸಂದರ್ಭದಲ್ಲಿ ಉಪಯೋಗಿಸದೆ ಇದ್ರೆ ಅವುಗಳನ್ನು ಆಫ್ ಮಾಡಿ ಇಡುವುದು ಒಳ್ಳೆಯದು. ಅನಗತ್ಯವಾಗಿ ನೀವು ವಿದ್ಯುತ್ ಬಳಕೆ ಮಾಡಬೇಕಾಗಿರುವಂತಹ ಅಗತ್ಯ ಇರುವುದಿಲ್ಲ.
ಅಗತ್ಯ ಸಂದರ್ಭದಲ್ಲಿ ಬಳಸುವುದರಿಂದ ಕೂಡ ನೀವು ಸಾಕಷ್ಟು ವಿದ್ಯುತ್ ಉಳಿತಾಯ ಮಾಡಬಹುದಾಗಿದೆ. ಈ ಮೂಲಕ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಎಸಿಯನ್ನು ಬಳಕೆ ಮಾಡುವಂತಹ ಗ್ರಾಹಕರು ಯಾವುದೇ ರೀತಿಯಲ್ಲಿ ಹೆಚ್ಚಿನ ವಿದ್ಯುತ್ ಬಿಲ್ (Electricity Bill) ಬರುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.
9ನೇ ಕಂತಿನ ಗೃಹಲಕ್ಷ್ಮಿ ಹಣ ಈ ಜಿಲ್ಲೆಗಳಿಗೆ ಬಿಡುಗಡೆ; ನಿಮ್ಮ ಜಿಲ್ಲೆ ಇದೆಯಾ ಚೆಕ್ ಮಾಡಿ!
Big Update for Gruha Jyothi Free Electricity Beneficiaries