ಏಪ್ರಿಲ್ ತಿಂಗಳ ಅನ್ನಭಾಗ್ಯ ಅಕ್ಕಿ ಹಣ ಜಮಾ ಆಗಿದೆ! ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ
ಸರ್ಕಾರ 5 ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 170ಗಳನ್ನು ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ವರ್ಗಾವಣೆ ಮಾಡುತ್ತಿದೆ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಸಾಕಷ್ಟು ಸಾರ್ವಜನಿಕರಿಗೆ ಸಹಾಯವಾಗಿದೆ ಎನ್ನಬಹುದು. ಅನ್ನಭಾಗ್ಯ ಯೋಜನೆ (AnnaBhagya scheme) ಯ ಅಡಿಯಲ್ಲಿ ಹೆಚ್ಚುವರಿ ಆಗಿ 5 ಕೆಜಿ ಅಕ್ಕಿ ಒದಗಿಸಲು ಸಾಧ್ಯವಾಗದೇ ಇರುವ ಕಾರಣದಿಂದಾಗಿ ಸರ್ಕಾರ 5 ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 170ಗಳನ್ನು ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ವರ್ಗಾವಣೆ ಮಾಡುತ್ತಿದೆ.
ಈಗಾಗಲೇ ಸಾಕಷ್ಟು ಕುಟುಂಬಗಳು ಏಪ್ರಿಲ್ ತಿಂಗಳ 680ಗಳನ್ನು ಪಡೆದುಕೊಂಡಿದ್ದಾರೆ ನಿಮ್ಮ ಖಾತೆಗೂ ಹಣ ಬಂದಿದ್ಯ ಎಂದು ಚೆಕ್ ಮಾಡಿ ಒಂದು ವೇಳೆ ಬಾರದೇ ಇದ್ದರೆ ಅದಕ್ಕೆ ಪ್ರಮುಖ ಕಾರಣ ಏನಾಗಿರಬಹುದು ಎನ್ನುವುದನ್ನು ತಿಳಿದುಕೊಳ್ಳಿ.
ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಕ್ಕೆ ಗುಡ್ ನ್ಯೂಸ್ ನೀಡಿದ ಸರ್ಕಾರ!
ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆ ಚೆಕ್ ಮಾಡಿ! (Check your DBT status)
ನಿಮಗೆಲ್ಲ ಗೊತ್ತಿರುವಂತೆ ಬಿಪಿಎಲ್ ಕಾರ್ಡ್ ಇರುವುದು ಬಡತನ ರೇಖೆಗಿಂತ ಕೆಳಗಿರುವವರ ಉಪಯೋಗಕ್ಕಾಗಿ ಆದ್ರೆ ಸಾಕಷ್ಟು ಜನ ಉಳ್ಳವರು ಕೂಡ ಬಿಪಿಎಲ್ ಕಾರ್ಡ್ (BPL Card) ಬಳಕೆ ಮಾಡುತ್ತಿರುವುದರಿಂದ ಅಂತಹ ಕಾರ್ಡ್ ರದ್ದುಪಡಿಗೊಳಿಸಲಾಗುತ್ತಿದೆ.
ಹಾಗಾಗಿ ಸಾಕಷ್ಟು ಜನ ತಮ್ಮ ರೇಷನ್ ಕಾರ್ಡ್ ಕಳೆದುಕೊಂಡಿದ್ದಾರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿದಿಯೋ ಇಲ್ಲವೋ ಎಂದು ಚೆಕ್ ಮಾಡಿ ಒಂದುವೇಳೆ ರದ್ದಾಗಿದ್ದರೆ ಅದಕ್ಕೆ ರೀಸನ್ ಕೂಡ ಕೊಡಲಾಗಿರುತ್ತದೆ.
9ನೇ ಕಂತಿನ ಗೃಹಲಕ್ಷ್ಮಿ ಹಣ ಈ ಜಿಲ್ಲೆಗಳಿಗೆ ಬಿಡುಗಡೆ; ನಿಮ್ಮ ಜಿಲ್ಲೆ ಇದೆಯಾ ಚೆಕ್ ಮಾಡಿ!
DBT ಸ್ಟೇಟಸ್ ಚೆಕ್ ಮಾಡುವುದು ಹೇಗೆ!
8ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಯೋಜನೆಯ ಹಣ ಎರಡನ್ನು ಬಿಡುಗಡೆ ಮಾಡಲಾಗಿದೆ ಯಾರ ಖಾತೆಗೆ ಹಣ ಬಂದಿದೆಯೋ ಅವರು ಖುಷಿಯಾಗಿದ್ದಾರೆ ಆದರೆ ಸಾಕಷ್ಟು ಜನ ಹಣ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಆನ್ಲೈನ್ ಮೂಲಕ ನಿಮ್ಮ ಖಾತೆಗೆ ಹಣ ಬಂದಿದ್ಯ ಇಲ್ವಾ ಎನ್ನುವುದನ್ನು ಯಾವ ರೀತಿ ಚೆಕ್ ಮಾಡಬಹುದು ಎನ್ನುವುದನ್ನು ನೋಡೋಣ.
* ಮೊದಲನೇದಾಗಿ ಆಹಾರ ಇಲಾಖೆಯ https://ahara.kar.nic.in/lpg/ ಈ ವೆಬ್ ಸೈಟ್ ಲಿಂಕ್ ಅನ್ನು ಕ್ಲಿಕ್ ಮಾಡಿ.
* ಈಗ ನಿಮಗೆ ಮೂರು ಲಿಂಕ್ಗಳು ಕಾಣುತ್ತಿರಬಹುದು. ಅವುಗಳ ಕೆಳಗೆ ಇರುವ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಅದಕ್ಕೆ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಕೊನೆಯಲ್ಲಿ ಇರುವ ಸ್ಟೇಟಸ್ ಆಫ್ ಡಿ ಬಿ ಟಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಈಗ ಸ್ಟೇಟಸ್ ಆಫ್ ಡಿ ಬಿ ಟಿ ಪುಟ ತೆರೆದುಕೊಳ್ಳುತ್ತದೆ.
ರೇಷನ್ ಕಾರ್ಡ್ ಸಂಬಂಧಪಟ್ಟಂತೆ ಹೊಸ ಅಪ್ಡೇಟ್; ಇಂತಹವರಿಗೆ ಸಿಗೋಲ್ಲ ಕಾರ್ಡ್
* ಇಲ್ಲಿ ಯಾವ ವರ್ಷದ ಡಿಬಿಟಿ ಸ್ಟೇಟಸ್ ತಿಳಿದುಕೊಳ್ಳಬೇಕು ಎನ್ನುವುದನ್ನು ಆಯ್ಕೆ ಮಾಡಿ. ನಂತರ ತಿಂಗಳು ಆಯ್ಕೆ ಮಾಡಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.
* ಬಳಿಕ ಕೆಳಗೆ ಕೊಡಲಾಗುವ ಕ್ಯಾಪ್ಚ ಸಂಖ್ಯೆಯನ್ನು ನಮೂದಿಸಬೇಕು.
* ಬಳಿಕ ಗೊ ಎಂದು ಕ್ಲಿಕ್ ಮಾಡಿ
* ನೀವು ಯಾವ ತಿಂಗಳ ಡಿಬಿಟಿ ಸ್ಟೇಟಸ್ ತಿಳಿದುಕೊಳ್ಳಲು ಆಯ್ಕೆ ಮಾಡಿದಿರೋ ಆ ತಿಂಗಳಿನಲ್ಲಿ ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎನ್ನುವ ಮಾಹಿತಿ ಇಲ್ಲಿ ಸಿಗುತ್ತದೆ.
ಒಂದು ವೇಳೆ ಪಾವತಿ ಪ್ರಗತಿಯಲ್ಲಿದೆ ಎಂದು ತೋರಿಸಿದರೆ ಸರ್ಕಾರದಿಂದ ಹಣ ಬಿಡುಗಡೆ ಆಗಿದೆ ಅದು ನಿಮ್ಮ ಬ್ಯಾಂಕ್ ಖಾತೆಗೆ (Bank Account) ಬಂದು ತಲುಪಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಅರ್ಥ ಹಾಗಾಗಿ ಏಪ್ರಿಲ್ ತಿಂಗಳ ಕೊನೆಯೊಳಗೆ ಬಿಪಿಎಲ್ ಕಾರ್ಡ್ ಹೊಂದಿರುವವರ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣ ಜಮಾ ಆಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊರಬಿತ್ತು ಹೊಸ ಅಪ್ಡೇಟ್! ಜಮಾ ಆಗಲಿದೆ ಪೆಂಡಿಂಗ್ ಹಣ
Annabhagya money for the month of April has been deposited