ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊರಬಿತ್ತು ಹೊಸ ಅಪ್ಡೇಟ್! ಜಮಾ ಆಗಲಿದೆ ಪೆಂಡಿಂಗ್ ಹಣ
ಮಹಿಳೆಯರ ಖಾತೆಗೆ (Bank Account) ಹಣ ಜಮಾ ಆಗುತ್ತಿಲ್ಲ ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಸಾಕಷ್ಟು ವಿಚಾರಗಳು ತಿಳಿದು ಬರುತ್ತವೆ.
ಸಾಕಷ್ಟು ಮಹಿಳೆಯರು ಇಂದು ಸರ್ಕಾರದ ಈ ಯೋಜನೆಯಿಂದಾಗಿ ಆರ್ಥಿಕ ನೆರವು ಪಡೆಯುವಂತೆ ಆಗಿದೆ, ಪ್ರತಿ ತಿಂಗಳು 2000 ನಾವು ಮನೆಯಲ್ಲಿ ಖಾಲಿ ಕೂತ್ರೆ ಯಾರು ಕೊಡುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ನಮಗೆ 2000 ಗಳನ್ನ ಕೊಡ್ತಾ ಇರೋದು ಬಹಳ ಪ್ರಯೋಜನಕಾರಿ ಆಗಿದೆ ಎಂದು ಸಾಕಷ್ಟು ಫಲಾನುಭವಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಆದರೂ ಶೇಕಡ 20ರಷ್ಟು ಮಹಿಳೆಯರ ಖಾತೆಗೆ (Bank Account) ಹಣ ಜಮಾ ಆಗುತ್ತಿಲ್ಲ ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಸಾಕಷ್ಟು ವಿಚಾರಗಳು ತಿಳಿದು ಬರುತ್ತವೆ.
ಇಂಥವರ ಬಿಪಿಎಲ್ ಕಾರ್ಡ್ ರದ್ದು; ಏಪ್ರಿಲ್ ತಿಂಗಳ ರದ್ದುಪಡಿ ಲಿಸ್ಟ್ ಚೆಕ್ ಮಾಡಿ!
ಮಾರ್ಚ್ ತಿಂಗಳ ಹಣ ಇಂಥವರ ಖಾತೆಗೆ ಬಂದಿಲ್ಲ!
ಸುಮಾರು 80% ನಷ್ಟು ಮಹಿಳೆಯರ ಖಾತೆಗೆ 6ನೇ ಕಂತಿನ ಹಣ ಮತ್ತು 7ನೇ ಕಂತಿನ ಹಣ ಜಮಾ ಆಗಿದೆ, ಆದರೂ ಸುಮಾರು 20% ನಷ್ಟು ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಈಗಾಗಲೇ ಎಂಟನೇ ಕಂತಿನ ಹಣವು ಕೂಡ ಬಿಡುಗಡೆ ಆಗಿದ್ದು ಹಂತ ಹಂತವಾಗಿ ಮಹಿಳೆಯರ ಖಾತೆಯನ್ನು (Money Deposit) ತಲುಪುತ್ತಿದೆ.
ಆದರೆ ಹಣ ಯಾರಿಗೆ ಬಂದಿಲ್ಲವೋ ಅಂತವರಿಗೂ ಕೂಡ ಈ ತಿಂಗಳ ಕೊನೆಯೊಳಗೆ ಬಾಕಿ ಇರುವ ಹಣ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಅನ್ನಭಾಗ್ಯ ಹಣ ಜಮಾ ಆಗಿದ್ಯಾ ಎಂದು ಚೆಕ್ ಮಾಡುವುದಕ್ಕೆ ಇಲ್ಲಿದೆ ಡೈರೆಕ್ಟ್ ಲಿಂಕ್!
ಹಣ ಬಾರದೆ ಇದ್ರೆ ಈ ಕೆಲಸ ಮಾಡಿ ಎಂದ ಸಚಿವರು!
ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಹಾಕುವ ಪ್ರಕ್ರಿಯೆ ಡಿಜಿಟಲ್ ಆಗಿರುವಂಥದ್ದು, ಹಾಗಾಗಿ ಮಹಿಳೆಯರು ತಮ್ಮ ಖಾತೆಗೆ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲದೆ ಹಣ ಜಮಾ ಆಗುತ್ತದೆ
ಉದಾಹರಣೆಗೆ ಬ್ಯಾಂಕ್ ಖಾತೆಯನ್ನು ಹೊಂದಿರುವ ಮಹಿಳೆಯರು ತಮ್ಮ ಖಾತೆಗೆ ಕೆವೈಸಿ ಅಪ್ಡೇಟ್ ಆಗಿದ್ಯೋ ಇಲ್ವೋ ಎನ್ನುವುದನ್ನ ಚೆಕ್ ಮಾಡಬೇಕು. ಎನ್ ಪಿ ಸಿ ಐ ಮ್ಯಾಪಿಂಗ್ ಕೂಡ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ಇನ್ನು ಮಹಿಳೆಯರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳುವುದು ಅಷ್ಟೇ ಮುಖ್ಯ.
ಇಷ್ಟೆಲ್ಲ ಮಾಡಿಸಿಕೊಂಡ ನಂತರವೂ ನಿಮ್ಮ ಖಾತೆಗೆ ಹಣ ಬಾರದೆ ಇದ್ರೆ ನಿಮ್ಮ ಅರ್ಜಿಯಲ್ಲಿ ಸಮಸ್ಯೆ ಇರಬಹುದು, ಸರ್ಕಾರ ಹೊಸದಾಗಿ ಅರ್ಜಿ ಸಲ್ಲಿಸಲು ಕೂಡ ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ನಿಮ್ಮ ಖಾತೆಯಲ್ಲಿ ಸಮಸ್ಯೆ ಇದ್ರೆ ಅದನ್ನ ತಿಳಿದುಕೊಳ್ಳುವ ಸಲುವಾಗಿ ಸೇವಾ ಕೇಂದ್ರಕ್ಕೆ ಹೋಗಿ ರೇಷನ್ ಕಾರ್ಡ್ ಬ್ಯಾಂಕ್ ಖಾತೆಯ ವಿವರ ಮೊದಲಾದ ದಾಖಲೆಗಳನ್ನು ನೀಡಿ ಮಾಹಿತಿ ಪಡೆದುಕೊಳ್ಳಿ. ಆಶಾ ಕಾರ್ಯಕರ್ತೆಯರು ಕೂಡ ಮಹಿಳೆಯರ ಸಹಾಯಕ್ಕೆ ನಿಂತಿದ್ದು ನಿಮಗೆ ಹಣ ಬಾರದೆ ಇದ್ರೆ ಅವರಿಂದಲೂ ಪರಿಹಾರ ಪಡೆಯಬಹುದು.
ಗೃಹಲಕ್ಷ್ಮಿ ಹಣಕ್ಕೆ ಎಸ್ಎಂಎಸ್ ಬಾರದೆ ಇದ್ರೆ, ಕೂಡಲೇ ಈ ಕೆಲಸ ಮಾಡಿ ಹಣ ಬಂದೇ ಬರುತ್ತೆ!
ಡಿಬಿಟಿ ಸ್ಟೇಟಸ್ ಚೆಕ್ ಮಾಡಿ!
DBT Karnataka ಮೊಬೈಲ್ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ನಂತರ ಮಾಡಿ ಬಳಿಕ ಪಾವತಿ ಸ್ಟೇಟಸ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಬಂದಿದೆಯೋ ಇಲ್ಲವೋ ತಿಳಿದುಕೊಳ್ಳಬಹುದು.
New update about Gruha Lakshmi Yojana, Pending money will be deposited