ರೇಷನ್ ಕಾರ್ಡ್ ಸಂಬಂಧಪಟ್ಟಂತೆ ಹೊಸ ಅಪ್ಡೇಟ್; ಇಂತಹವರಿಗೆ ಸಿಗೋಲ್ಲ ಕಾರ್ಡ್
ರೇಷನ್ ಕಾರ್ಡ್ ( ration card) ಅಥವಾ ಪಡಿತರ ಚೀಟಿ ಇಂದು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಕೆಲವರು ಪ್ರಮುಖ ಗುರುತಿನ ಚೀಟಿಯಾಗಿ ಇದನ್ನ ಬಳಸಿದರೆ ಇನ್ನು ಕೆಲವರು ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವುದಕ್ಕೆ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.
ರೇಷನ್ ಕಾರ್ಡ್ ನಲ್ಲಿ ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಈ ಮೂರು ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತದೆ ಇತ್ತೀಚಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎನ್ನಬಹುದು.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊರಬಿತ್ತು ಹೊಸ ಅಪ್ಡೇಟ್! ಜಮಾ ಆಗಲಿದೆ ಪೆಂಡಿಂಗ್ ಹಣ
ಬಿಪಿಎಲ್ ರೇಷನ್ ಕಾರ್ಡ್ ಇರುವವರಿಗೆ ಹೊಸ ಅಪ್ಡೇಟ್! (BPL Ration Card new update)
ಬಿಪಿಎಲ್ ರೇಷನ್ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಮೂರು ಲಕ್ಷಕ್ಕಿಂತ ವಾರ್ಷಿಕ ಆದಾಯ ಕಡಿಮೆ ಇರುವವರಿಗೆ ನೀಡಲಾಗುತ್ತದೆ. ಆದರೆ ಈ ಮಾನದಂಡಗಳನ್ನು ನಿರ್ಲಕ್ಷ ಮಾಡಿ ಉಳ್ಳವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಪ್ರತಿ ತಿಂಗಳು ಹೋಗಿ ರೇಶನ್ ಪಡೆದುಕೊಳ್ಳದೆ ಇದ್ದರೂ ಸರ್ಕಾರದಿಂದ ಉಚಿತವಾಗಿ ಸಿಗುವ ಡಿ ಬಿ ಟಿ ಹಣದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.
ಸದ್ಯ ಈ ವಂಚನೆ ಸರಕಾರದ ಗಮನಕ್ಕೆ ಬಂದಿದ್ದು ಸಾಕಷ್ಟು ಬಿಪಿಎಲ್ ಕಾರ್ಡ್ (BPL Card) ರದ್ದು ಪಡಿ ಮಾಡಲಾಗುತ್ತದೆ ನಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇದೆ ಸುಲಭವಾಗಿ ಸರ್ಕಾರದ ಯೋಜನೆ ಸಿಗುತ್ತೆ ಅಂತ ಅಂದುಕೊಳ್ಳುವವರಿಗೆ ಸರ್ಕಾರದ ಈ ನಿರ್ಧಾರ ಶಾಕಿಂಗ್ ಆಗಿದೆ.
ಇಂಥವರ ಬಿಪಿಎಲ್ ಕಾರ್ಡ್ ರದ್ದು; ಏಪ್ರಿಲ್ ತಿಂಗಳ ರದ್ದುಪಡಿ ಲಿಸ್ಟ್ ಚೆಕ್ ಮಾಡಿ!
ತಮ್ಮದೇ ಆಗಿರುವ ಸ್ವಂತ ಮನೆಯಿದ್ದು ಸರಕಾರಿ ನೌಕರಿಯಲ್ಲಿ ಇರುವವರು, ಇನ್ಕಮ್ ಟ್ಯಾಕ್ಸ್ ಪಾವತಿ ಮಾಡುತ್ತಿರುವವರು, ನಾಲ್ಕು ಚಕ್ರದ ವಾಹನ ಅಥವಾ ಕಾರ ಬಳಕೆ ಮಾಡುತ್ತಿರುವವರು ಹೀಗೆ ಉತ್ತಮ ಸ್ಥಿತಿಯಲ್ಲಿ ಇರುವವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ
ಹೀಗಾಗಿ ಆಹಾರ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಫಲಾನುಭವಿಗಳಿಗೆ ಯಾವುದೇ ನೋಟಿಫಿಕೇಶನ್ ನೀಡದೇ ಅವರ ರೇಷನ್ ಕಾರ್ಡ್ ರದ್ದುಪಡಿ ಮಾಡುತ್ತಿದೆ.
ಅನ್ನಭಾಗ್ಯ ಹಣ ಜಮಾ ಆಗಿದ್ಯಾ ಎಂದು ಚೆಕ್ ಮಾಡುವುದಕ್ಕೆ ಇಲ್ಲಿದೆ ಡೈರೆಕ್ಟ್ ಲಿಂಕ್!
ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದಂತೆ ನೀವು ಎಲ್ಲ ರೀತಿಯಲ್ಲಿಯೂ ಅನುಕೂಲಕರಾಗಿದ್ದು ಬಿಪಿಎಲ್ ಕಾರ್ಡ್ ಹೊಂದಿದ್ರೆ ದಯವಿಟ್ಟು ಅದನ್ನ ಸರ್ಕಾರಕ್ಕೆ ಹಿಂತಿರುಗಿಸಿ ಎಂದು ಹೇಳಲಾಗಿತ್ತು. ಆದರೆ ಆ ಕೆಲಸವನ್ನು ಯಾರು ಮಾಡಿಲ್ಲ. ಆದ್ದರಿಂದ ಸರ್ಕಾರವೇ ಕ್ರಮ ಕೈಗೊಂಡಿದ್ದು ಸಾಕಷ್ಟು ರೇಷನ್ ಕಾರ್ಡ್ ತಿದ್ದುಪಡಿಯ ಸಮಯದಲ್ಲಿಯೇ ಅವರ ಅರ್ಹತೆಯನ್ನು ಪರಿಶೀಲಿಸಿ ಮಾನದಂಡದ ಒಳಗೆ ಬಾರದೆ ಇರುವವರ ರೇಷನ್ ಕಾರ್ಡ್ ರದ್ದುಪಡಿ ಮಾಡಲಾಗಿದೆ.
3ಲಕ್ಷಕ್ಕೂ ಅಧಿಕ ಜನರು ರೇಷನ್ ಕಾರ್ಡ್ ಕಳೆದುಕೊಂಡಿದ್ದಾರೆ ಇದರ ಜೊತೆಗೆ ಸಾಕಷ್ಟು ಹೊಸ ಅರ್ಜಿಗಳು ಕೂಡ ಸರ್ಕಾರಕ್ಕೆ ಸಂದಾಯ ಆಗಿದೆ. ಮೊದಲಿಗಿಂತ ಹೆಚ್ಚು ಮುತುವರ್ಜಿಯಿಂದ ಸರ್ಕಾರ ಈ ಅರ್ಜಿಗಳನ್ನು ಪರಿಶೀಲಿಸುತ್ತಿದ್ದು, ಬಡತನ ರೇಖೆಗಿಂತ ಕೆಳಗಿರುವವರಿಗೆ BPL ಕಾರ್ಡ್ ಹಾಗೂ ಉಳ್ಳವರಿಗೆ ಎಪಿಎಲ್ ಕಾರ್ಡ್ ಪ್ರೊವೈಡ್ ಮಾಡುತ್ತಿದೆ. ನೀವು ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಇಲ್ಲವೋ ಎನ್ನುವುದನ್ನು ಮಾಡಿಕೊಳ್ಳಿ.
ಗೃಹಲಕ್ಷ್ಮಿ ಹಣಕ್ಕೆ ಎಸ್ಎಂಎಸ್ ಬಾರದೆ ಇದ್ರೆ, ಕೂಡಲೇ ಈ ಕೆಲಸ ಮಾಡಿ ಹಣ ಬಂದೇ ಬರುತ್ತೆ!
New update regarding Ration Card, such people not Get Card