ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಕ್ಕೆ ಗುಡ್ ನ್ಯೂಸ್ ನೀಡಿದ ಸರ್ಕಾರ!
ಕೇಂದ್ರ ಸರ್ಕಾರ (Central government) ಸಾಕಷ್ಟು ವರ್ಷಗಳ ಹಿಂದೆನೆ ನಿಮಗೆಲ್ಲರಿಗೂ ಗೊತ್ತಿರಬಹುದು ಸರ್ಕಾರಿ ಯೋಜನೆಗಳು ಹಾಗೂ ಉಚಿತ ಪಡಿತರವನ್ನ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ನೀಡುವ ಕಾರಣದಿಂದಾಗಿ ರೇಷನ್ ಕಾರ್ಡ್ (ration card) ವ್ಯವಸ್ಥೆಯನ್ನು ಜಾರಿಗೆ ತಂದು ಅದರಲ್ಲಿ ಕೂಡ ಬೇರೆ ಬೇರೆ ರೀತಿಯ ವಿಧಗಳನ್ನು ಮಾಡಿ ಪ್ರತಿಯೊಂದು ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತಿದೆ.
ಇನ್ನು ಈ ಏಪ್ರಿಲ್ ತಿಂಗಳಲ್ಲಿ ಈಗಾಗಲೇ ಸಾಕಷ್ಟು ಜನರ ರೇಷನ್ ಕಾರ್ಡ್ ಬೇರೆ ಬೇರೆ ಕಾರಣಗಳಿಂದ ರದ್ದಾಗಿರುವಂತಹ ಮಾಹಿತಿ ಕೇಳಿ ಬರುತ್ತಿದೆ. ಒಂದು ವೇಳೆ ಆ ಸಾಲಿನಲ್ಲಿ ನಿಮ್ಮ ಹೆಸರು ಕೂಡ ಇದ್ರೆ ತಪ್ಪದೆ ಇವತ್ತೇ ಚೆಕ್ ಮಾಡಿ.
9ನೇ ಕಂತಿನ ಗೃಹಲಕ್ಷ್ಮಿ ಹಣ ಈ ಜಿಲ್ಲೆಗಳಿಗೆ ಬಿಡುಗಡೆ; ನಿಮ್ಮ ಜಿಲ್ಲೆ ಇದೆಯಾ ಚೆಕ್ ಮಾಡಿ!
ಬರೋಬರಿ 3 ಲಕ್ಷಕ್ಕೂ ಹೆಚ್ಚಿನ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲಾಗಿದ್ದು ಬಡವರಿಗೆ ಸಿಗುವಂತಹ ಅಥವಾ ಸಿಗಬೇಕಾಗಿರುವಂತಹ ಪ್ರಯೋಜನಗಳನ್ನು ಹಾಗೂ ಪಡಿತರವನ್ನು ಇವರು ಪಡೆದುಕೊಳ್ಳುತ್ತಿರುವ ನಿಟ್ಟಿನಲ್ಲಿ ಸರ್ಕಾರ, ಆಹಾರ ಇಲಾಖೆ ಈ ವಿಚಾರದ ಬಗ್ಗೆ ತನಿಖೆ ನಡೆಸಿ ಅವರ ರೇಷನ್ ಕಾರ್ಡ್ ಅನ್ನು ರದ್ದು (Ration Card Cancellation) ಮಾಡಿದೆ.
ರದ್ದಾಗದೆ ಇರುವಂತಹ ರೇಷನ್ ಕಾರ್ಡಿನವರಿಗೆ ಸರ್ಕಾರ ಈ ಬಾರಿ ನ್ಯಾಯ ಬೆಲೆ ಅಂಗಡಿಯಲ್ಲಿ 46 ಧಾನ್ಯಗಳನ್ನು ನೀಡುವಂತಹ ನಿರ್ಧಾರಕ್ಕೆ ಬಂದಿದ್ದು, ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಇನ್ನು ಈ ಸಂದರ್ಭದಲ್ಲಿ ನಿಮ್ಮ ರೇಷನ್ ಕಾರ್ಡ್ ಯಾವ ತಪ್ಪಿನಿಂದಾಗಿ ರದ್ದಾಗಿದೆ ಅಂದ್ರೆ ಸಂಬಂಧಪಟ್ಟಂತಹ ಕಚೇರಿಗಳಿಗೆ ಅಥವಾ ಅಧಿಕೃತ ವೆಬ್ಸೈಟ್ಗೆ ಹೋಗಿ ತಪ್ಪಾಗಿ ನಿಮ್ಮ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗಿದೆಯೇ ಎನ್ನುವಂತಹ ಮಾಹಿತಿಯನ್ನು ರಿಕ್ವೆಸ್ಟ್ ಮೂಲಕ ನೀಡಬೇಕಾಗಿರುತ್ತದೆ, ನಂತರ ನಿಮ್ಮ ರೇಷನ್ ಕಾರ್ಡ್ ರದ್ದಾಗಿರುವ ಸಾಲಿನಿಂದ ಹೊರಗೆ ಬರುತ್ತದೆ.
ರೇಷನ್ ಕಾರ್ಡ್ ಸಂಬಂಧಪಟ್ಟಂತೆ ಹೊಸ ಅಪ್ಡೇಟ್; ಇಂತಹವರಿಗೆ ಸಿಗೋಲ್ಲ ಕಾರ್ಡ್
46 ಧಾನ್ಯಗಳ ವಿತರಣೆ
ಕಳೆದ ಸಾಕಷ್ಟು ವರ್ಷಗಳಿಂದ ನಿಮಗೆಲ್ಲರಿಗೂ ತಿಳಿದಿರಬಹುದು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಇರುವವರಿಗೆ ಎಣ್ಣೆ ಅಕ್ಕಿ, ಗೋಧಿ, ರಾಗಿ ಈ ರೀತಿಯ ಧಾನ್ಯಗಳನ್ನು ಮಾತ್ರ ಪಡಿತರ ಕಾರ್ಡ್ ಇರುವವರಿಗೆ ನೀಡಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ 46 ಧಾನ್ಯಗಳನ್ನು ಪಡಿತರ ಚೀಟಿ ಇರುವವರಿಗೆ ನೀಡುವಂತಹ ಕೆಲಸವನ್ನು ಮಾಡುವಂತಹ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದ್ದು ಇವುಗಳಲ್ಲಿ ಹೆಚ್ಚಿನ ಧಾನ್ಯಗಳು ರಿಯಾಯಿತಿ ದರದಲ್ಲಿ ದೊರಕಲಿದೆ ಎಂಬುದಾಗಿ ತಿಳಿದುಬಂದಿದೆ.
ಸರ್ಕಾರ ಈ ಮೂಲಕ ಬೇರೆ ಬೇರೆ ಧಾನ್ಯಗಳನ್ನು ಅಗತ್ಯ ಇರುವಂತಹ ಕುಟುಂಬಗಳಿಗೆ ಆಹಾರ ಯೋಜನೆಯ ಮೂಲಕ ನೀಡಲು ಹೊರಟಿದ್ದು, ಇದು ಯಾವತ್ತಿನಿಂದ ಪ್ರಾರಂಭ ಆಗಬೇಕು ಅನ್ನೋದನ್ನ ನಾವು ಅಧಿಕೃತವಾಗಿ ಆಹಾರ ಇಲಾಖೆಯಿಂದಲೇ ಅಧಿಕೃತ ಘೋಷಣೆ ಕೇಳಬೇಕಾಗಿದೆ.
ಇದರಲ್ಲಿ ಹೆಸರು ಇದ್ದವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗೋದಿಲ್ವಂತೆ; ಲಿಸ್ಟ್ ಚೆಕ್ ಮಾಡಿ!
ಖಂಡಿತವಾಗಿ ಮುಂದಿನ ದಿನಗಳಲ್ಲಿ ಇದೇ ರೀತಿಯ ಜನಪ್ರಿಯ ಯೋಜನೆಗಳನ್ನು ಜನರಿಗೆ ಆಹಾರವಿತರಣೆ ಮಾಡುವಂತಹ ಪ್ರಕ್ರಿಯೆಯಲ್ಲಿ ಸರ್ಕಾರ ಜಾರಿಗೆ ತರುವುದು ಒಂದು ಲೆಕ್ಕದಲ್ಲಿ ಕ್ರಾಂತಿಕಾರಿ ಬದಲಾವಣೆ ಎಂದು ಹೇಳಬಹುದಾಗಿದೆ.
The government has given good news to all families with ration cards