ಗೃಹಲಕ್ಷ್ಮಿ 9ನೇ ಕಂತಿಗೆ ಹೊಸ ಕಂಡೀಷನ್; ಯಾರ ಖಾತೆಗೆ ಹಣ ಬಂದಿದೆ ಇಲ್ಲಿದೆ ಡೀಟೇಲ್ಸ್
ಎಂಟು ಕಂತಿನ ಹಣ ಜಮಾ (Money Deposit) ಆಗಿದ್ದು 16,000ಗಳನ್ನು ಮಹಿಳೆಯರು ತಮ್ಮ ಖಾತೆಯಲ್ಲಿ (Bank Account) ಕಾಣಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ ಯಶಸ್ಸಿನ ಕಥೆಗಳನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ರಾಹುಲ್ ಗಾಂಧಿ ಮೊದಲಾದ ಕಾಂಗ್ರೆಸ್ ಮುಖಂಡರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ
ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಪ್ರತಿ ತಿಂಗಳು ಸಿಗುತ್ತಿರುವುದರಿಂದ ಮನೆಯ ಖರ್ಚು ವೆಚ್ಚ ಸ್ವಲ್ಪ ಮಟ್ಟಿಗೆ ನಿಭಾಯಿಸಲು ಸಾಧ್ಯವಾಗಿದೆ ಎಂದು ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಎಂಟು ಕಂತಿನ ಹಣ ಜಮಾ (Money Deposit) ಆಗಿದ್ದು 16,000ಗಳನ್ನು ಮಹಿಳೆಯರು ತಮ್ಮ ಖಾತೆಯಲ್ಲಿ (Bank Account) ಕಾಣಬಹುದಾಗಿದೆ.
ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ರದ್ದಾಗುತ್ತದೆ, ಸರ್ಕಾರದ ಹೊಸ ನಿರ್ಧಾರ
ಆದ್ರೂ ಇಂಥವರಿಗೆ ಹಣ ಜಮಾ ಆಗಿಲ್ಲ!
ಗೃಹಲಕ್ಷ್ಮಿ ಯೋಜನೆಗೆ ಸುಮಾರು 1.2 ಕೋಟಿಗೂ ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ, ಅದರಲ್ಲಿ ಇನ್ನೂ ನಾಲ್ಕರಿಂದ ಐದು ಲಕ್ಷ ಮಹಿಳೆಯರ ಖಾತೆಗೆ ಹಣ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ಬ್ಯಾಂಕ್ ಖಾತೆಗೆ ಅಗತ್ಯ ಇರುವ ದಾಖಲೆಗಳನ್ನು ಲಿಂಕ್ ಮಾಡಿಕೊಳ್ಳದೆ ಇರುವುದು.
ಹಳೆಯ ಬ್ಯಾಂಕ್ ಖಾತೆ ಆಗಿದ್ರೆ ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡು ಆಕ್ಟಿವ್ ಆಗಿರುವಂತೆ ಮಾಡಿಕೊಳ್ಳಬೇಕು. ಈ ಕೆ ವೈ ಸಿ ಆಗುವುದು ಕಡ್ಡಾಯ. ಹಾಗೇನೆ ಇತ್ತೀಚಿನ ದಿನಗಳಲ್ಲಿ ಎನ್ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಡಿಜಿಟಲ್ ಆಗಿ ಹಣ ವರ್ಗಾವಣೆ ಮಾಡಲು ಇದು ಸಹಾಯಕವಾಗಲಿದೆ.
ಗೃಹಜ್ಯೋತಿ ಫ್ರೀ ಕರೆಂಟ್ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಹತ್ವದ ಮಾಹಿತಿ
ಇನ್ನು ಸಾಕಷ್ಟು ಮಹಿಳೆಯರು ರೇಷನ್ ಕಾರ್ಡ್ ನಲ್ಲಿ ತಮ್ಮ ಹೆಸರನ್ನು ಮನೆ ಯಜಮಾನಿ ಎಂದು ಬದಲಾಯಿಸಿಕೊಂಡಿದ್ದಾರೆ. ಆದರೆ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರಿಗೂ ಈ ಹೆಸರಿಗು ಅದೇ ರೀತಿ ಆಧಾರ್ ಕಾರ್ಡ್ ನಲ್ಲಿರುವ ಹೆಸರಿಗೂ ಒಂದಕ್ಕೊಂದು ಮ್ಯಾಚ್ ಆಗ್ತಿಲ್ಲ. ಇದು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿ ಮಹಿಳೆಯರ ಖಾತೆಗೆ ಬಾರದೆ ಇರುವುದಕ್ಕೆ ಕಾರಣವಾಗಿದೆ.
9ನೇ ಕಂತಿನ ಹಣ ಬಿಡುಗಡೆ ನಿಮ್ಮ ಖಾತೆಗೆ ಬಂದಿದ್ಯ ಚೆಕ್ ಮಾಡಿ!
ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಹಂತ ಹಂತವಾಗಿ ರಾಜ್ಯದ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಲೋಕಸಭಾ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಒಂಬತ್ತನೇ ಕಂತಿನ ಹಣವನ್ನು ಬಹಳ ಬೇಗ ಬಿಡುಗಡೆ ಮಾಡಿದೆ ಎನ್ನಬಹುದು. ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಿಗೆ 9ನೇ ಕಂತಿನ ಹಣ ಬಂದಿದೆ ಎರಡನೇ ಹಂತದಲ್ಲಿ ಇನ್ನೂ ಉಳಿದ ಜಿಲ್ಲೆಗಳಿಗೂ ವರ್ಗಾವಣೆ ಆಗುವುದು.
ಗೃಹಲಕ್ಷ್ಮಿ ಪೆಂಡಿಂಗ್ ಹಣದ ಬಗ್ಗೆ ಬಂತು ನೋಡಿ ಹೊಸ ಅಪ್ಡೇಟ್! ಎಲ್ಲರಿಗು ಹಣ ಜಮಾ
ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆ ಎನ್ನುವುದನ್ನು ಕನ್ಫರ್ಮ್ ಮಾಡಿಕೊಳ್ಳಲು ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ಮಾಡಿಸಬಹುದು. ಅಥವಾ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ DBT Karnataka ಮೊಬೈಲ್ ಅಪ್ಲಿಕೇಶನ್ ನಲ್ಲಿ, ಡಿ ಬಿ ಟಿ ಸ್ಟೇಟಸ್ ತಿಳಿದುಕೊಳ್ಳಬಹುದು.
New condition for Gruha Lakshmi Scheme 9th installment