ಸಾಕಷ್ಟು ಮಂದಿ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ (ration card) ಇಲ್ಲದೇ ಇರುವುದರಿಂದ ಅಂತಹ ಯೋಜನೆಗಳಿಂದ ವಂಚಿತರಾಗಿದ್ದಾರೆ ಎನ್ನಬಹುದು.
ಈಗಾಗಲೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ (guarantee schemes) ಗಳನ್ನು ಪರಿಚಯಿಸಿದೆ, ಆದರೆ ಬಿಪಿಎಲ್ ಕಾರ್ಡ್ (BPL card) ಇರುವವರಿಗೆ ಮಾತ್ರ ಈ ಎಲ್ಲಾ ಯೋಜನೆಗಳ ಪ್ರಯೋಜನಗಳು ಸಿಗುತ್ತವೆ.
ಆದರೆ ಸಾಕಷ್ಟು ಜನರ ಬಳಿ ಬಿಪಿಎಲ್ ಕಾರ್ಡ್ (BPL card) ಇಲ್ಲ. ಲಕ್ಷಾಂತರ ಜನ ಈಗಾಗಲೇ ಸರ್ಕಾರಕ್ಕೆ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದು ಒಂದೊಂದೇ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ ಕಾರ್ಯ ಕೂಡ ಆರಂಭವಾಗಿದೆ.
ಗೃಹಲಕ್ಷ್ಮಿ ಮರು ಪರಿಶೀಲನೆ ಪಟ್ಟಿ ಬಿಡುಗಡೆ! ಇದ್ರಲ್ಲಿ ಹೆಸರು ಇದ್ರೆ ಮಾತ್ರ ಹಣ ಜಮಾ
ಏಪ್ರಿಲ್ ತಿಂಗಳ ಲಿಸ್ಟ್ ಬಿಡುಗಡೆ!
ಹೌದು, ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವವರಗೆ ಗುಡ್ ನ್ಯೂಸ್ ನೀಡಿದೆ, ಸರ್ಕಾರ ಈಗಾಗಲೇ ತಿಳಿಸಿರುವಂತೆ ಕಳೆದ ಎರಡು ವರ್ಷಗಳಿಂದ ವಿಲೇವಾರಿ ಆಗದೆ ಇರುವ ರೇಷನ್ ಕಾರ್ಡ್ ಈಗ ವಿಲೇವಾರಿ ಮಾಡಲು ಸರ್ಕಾರ ಮುಂದಾಗಿದೆ.
ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸರ್ಕಾರಕ್ಕೆ ಸಂದಾಯ ಆಗಿದ್ದವು. ಈಗ ಅವುಗಳನ್ನು ಬಿಡುಗಡೆ ಮಾಡಲಾಗಿದ್ದು ಫಲಾನುಭವಿಗಳ ಲಿಸ್ಟ್ ನಲ್ಲಿ ಯಾರು ಅರ್ಹರು ಅವರ ಹೆಸರನ್ನು ನಮೂದಿಸಲಾಗಿದೆ. ನೀವು ಆನ್ಲೈನ್ ನಲ್ಲಿ ಈ ಲಿಸ್ಟ್ ಚೆಕ್ ಮಾಡಿಕೊಳ್ಳಬಹುದು.
ಹೊಸ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಇದರಲ್ಲಿ ಹೆಸರು ಇದ್ರೆ ಇನ್ನಷ್ಟು ಬೆನಿಫಿಟ್
ಇದಕ್ಕಾಗಿ ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ನಂತರ ಅಲ್ಲಿ ಕಾಣುವ ಪಡಿತರ ಚೀಟಿ ಆಯ್ಕೆಗಳಲ್ಲಿ ನೂತನ ಪಡಿತರ ಚೀಟಿ ಲಿಸ್ಟ್ ಸರ್ಚ್ (new ration card list released) ಮಾಡಬೇಕು. ನಂತರ ನಿಮ್ಮ ಜಿಲ್ಲೆ ಊರು ಗ್ರಾಮ ಮೊದಲಾದ ವಿವರಗಳನ್ನು ನೀಡಿ ನಿಮ್ಮ ಹೆಸರು ಪಡಿತರ ಚೀಟಿ ಲಿಸ್ಟ್ ನಲ್ಲಿ ಇದೆಯೋ ಇಲ್ವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.
ನಿಮ್ಮ ಊರಿನಲ್ಲಿ ಯಾರೆಲ್ಲಾ ಫಲಾನುಭವಿಗಳಿದ್ದಾರೋ ಎಲ್ಲರ ಹೆಸರು ಕೂಡ ಅಲ್ಲಿ ಕಾಣಿಸುತ್ತದೆ ಹಾಗಾಗಿ ನೀವು ಪ್ರತ್ಯೇಕವಾಗಿ ನಿಮ್ಮ ಹೆಸರು ಎಲ್ಲಿದೆ ಎಂಬುದನ್ನು ಸರ್ಚ್ ಮಾಡಿಕೊಳ್ಳಬೇಕು.
ಇನ್ನು ಪಡಿತರ ಚೀಟಿ ವಿತರಣೆಗೆ ಸಂಬಂಧಪಟ್ಟಂತೆ ಹತ್ತಿರದ ತಶೀಲ್ದಾರರ ಕಚೇರಿಗೆ ಹೋಗಿ ಕೂಡ ನೀವು ನಿಮ್ಮ ಹೆಸರು ಪರಿಶೀಲನೆ ಮಾಡಿಕೊಳ್ಳಬಹುದು.
ನ್ಯಾಯಬೆಲೆ ಅಂಗಡಿ ತೆರೆಯೋಕೆ ಅವಕಾಶ! ಅರ್ಹತೆ, ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ
ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿ!
ಇನ್ನು ಹೊಸದಾಗಿ ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುವವರಿಗೆ ಸರ್ಕಾರ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಅದರಲ್ಲೂ ಮೆಡಿಕಲ್ ಎಮರ್ಜೆನ್ಸಿ ಇರುವವರು ಸರ್ಕಾರದಿಂದ ಆರೋಗ್ಯ ಸಹಾಯ ಪಡೆದುಕೊಳ್ಳಲು ಮತ್ತೆ ಅರ್ಜಿ ಸಲ್ಲಿಸಿ ಹೊಸ ಪಡಿತರ ಚೀಟಿ ಪಡೆಯಬಹುದು.
ಸದ್ಯ ಈ ಪ್ರಕ್ರಿಯೆಯನ್ನು ಹೋಲ್ಡ್ ನಲ್ಲಿ ಇಡಲಾಗಿದ್ದು ಚುನಾವಣೆಯ ನಂತರ ಮತ್ತೆ ಆರಂಭಿಸುವ ಸಾಧ್ಯತೆ ಇದೆ. ಹಾಗಾಗಿ ನೀವು ಹೊಸ ಅರ್ಜಿ ಸಲ್ಲಿಸುವುದಾದರೆ ಅಗತ್ಯ ಇರುವ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ ಯಾವಾಗ ಆನ್ಲೈನ್ ಪೋರ್ಟಲ್ ತೆರೆದುಕೊಳ್ಳುತ್ತದೆಯೋ ಆಗ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.
ರಾಜ್ಯದ ಮಹಿಳೆಯರಿಗೆ ಒಟ್ಟಾರೆ ಎಲ್ಲಾ ಗೃಹಲಕ್ಷ್ಮಿ ಹಣ ಜಮಾ! ನಿಮಗೆ ಬಂದಿಲ್ವಾ ಈ ರೀತಿ ಮಾಡಿ
Big Update on New Ration Card, April list was released
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.