Karnataka NewsBangalore News

ಗೃಹಲಕ್ಷ್ಮಿ ಹಣ ಒಂದೇ ತಿಂಗಳಿನಲ್ಲಿ 4 ಸಾವಿರ ಜಮಾ; ನಿಮ್ಮ ಖಾತೆಗೂ ಬಂದಿದ್ಯ ಚೆಕ್ ಮಾಡಿ!

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಗೃಹಲಕ್ಷ್ಮಿ (Gruha lakshmi scheme) ಯೋಜನೆಯಂತಹ ದೊಡ್ಡ ಕೊಡುಗೆಯನ್ನು ನೀಡಿದೆ ಎನ್ನಬಹುದು. ಫಲಾನುಭವಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಅವರ ಖಾತೆಗೆ (Bank Account) ನೇರವಾಗಿ ಜಮಾ ಮಾಡಲಾಗುತ್ತದೆ

ಕಳೆದ 8 ತಿಂಗಳುಗಳಿಂದ ತಪ್ಪದೆ 2,000ಗಳನ್ನು ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಹಲವರ ಖಾತೆಗೆ ಇನ್ನೂ ಹಣ ಬಾರದೆ ಇರುವುದರಿಂದ ಅಂಥವರ ಖಾತೆಗೆ ಹಣ ವರ್ಗಾವಣೆ (DBT) ಮಾಡುವುದಕ್ಕಾಗಿ ಸರ್ಕಾರ ಬೇರೆ ಬೇರೆ ಉಪಕ್ರಮಗಳನ್ನು ಕೈಗೊಂಡಿತ್ತು.

Gruha Lakshmi money received only 2,000, Update About Pending Money

ಬಿಪಿಎಲ್ ರೇಷನ್ ಕಾರ್ಡ್ ನಿಯಮ ಬದಲಾವಣೆ; ಮೇ 1ರಿಂದ ಹೊಸ ರೂಲ್ಸ್ ಜಾರಿ

ಒಂದೇ ತಿಂಗಳಿನಲ್ಲಿ ನಾಲ್ಕು ಸಾವಿರ ರೂಪಾಯಿ ರಿಲೀಸ್!

8 ಮತ್ತು 9ನೇ ಕಂತಿನ ಹಣ 4,000 ಮಹಿಳೆಯರ ಖಾತೆಗೆ ಜಮಾ ಆಗಿದೆ (Money Transfer) ಎಂದು ವರದಿಯಾಗಿದೆ. ಏಪ್ರಿಲ್ ತಿಂಗಳಲ್ಲಿ 8ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಇನ್ನು ಒಂಬತ್ತನೇ ಕಂತಿನ ಹಣವನ್ನು ಮೇ, ಮೊದಲ ವಾರದಲ್ಲಿ ಜಮಾ ಮಾಡುವ ನಿರೀಕ್ಷೆ ಇತ್ತು, ಆದರೆ ಕೆಲವು ಮಹಿಳೆಯರಿಗೆ ಮೇ ತಿಂಗಳ ಹಣ ಅಂದರೆ ಒಂಬತ್ತನೇ ಕಂತಿನ ಹಣವು ಕೂಡ ಈಗಾಗಲೇ ಜಮಾ ಆಗಿದೆ.

ಆಗಸ್ಟ್ 30 2023, ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು ಅಂದಿನಿಂದ ಪ್ರತಿ ತಿಂಗಳು 20 ನೇ ತಾರೀಖಿನ ನಂತರ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹಿಳೆಯರ ಖಾತೆಗೆ ನಿರೀಕ್ಷೆಗೂ ಮೊದಲೇ ಹಣ ಜಮಾ ಮಾಡಿರುವುದು ಕಂಡುಬಂದಿದೆ.

1.27 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು ಇಲ್ಲಿಯವರೆಗೆ 3000 ಕೋಟಿಗೂ ಅಧಿಕ ಹಣವನ್ನು ಗೃಹಲಕ್ಷ್ಮಿ ಯೋಜನೆ ಒಂದಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾಹಿತಿ ನೀಡಿದ್ದು ಮುಂದಿನ ದಿನದಲ್ಲಿ ಅನುದಾನದ ಹಣವನ್ನು ಇನ್ನಷ್ಟು ಜಾಸ್ತಿ ಮಾಡುವ ಸಾಧ್ಯತೆ ಇದೆ.

ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ, ನಿಮ್ಮ ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

Gruha Lakshmi Yojanaಸಾಕಷ್ಟು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ಲ. ಇದಕ್ಕೆ ಮುಖ್ಯವಾಗಿ ಬ್ಯಾಂಕಿನ ದಾಖಲೆಗಳು ಸರಿ ಇಲ್ಲದೆ ಇರುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆದರೆ ಇದಕ್ಕೆ ಸಾಕಷ್ಟು ಪರಿಹಾರವನ್ನು ಕೂಡ ಸೂಚಿಸಲಾಗಿತ್ತು.

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ ಈ ಕೆಲಸ ಮಾಡುವುದು ಕಡ್ಡಾಯ!

ಅಂಗನವಾಡಿ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರ ಸಹಾಯದಿಂದ ಮಹಿಳೆಯರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. ಇದುವರೆಗೆ ನಿಮ್ಮ ಖಾತೆಗೆ ಸಂಬಂಧಪಟ್ಟ ಸಮಸ್ಯೆ ಪರಿಹಾರ ಆಗದೆ ಇದ್ದಲ್ಲಿ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

Gruha lakshmi scheme Money 4 thousand deposits in a single month, check your account

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories