ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೇ ಮಹಿಳೆಯರಿಗೆ ಮತ್ತೊಂದು ಬಂಪರ್ ಗಿಫ್ಟ್; ಹೊಸ ಯೋಜನೆ ಘೋಷಣೆ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ಮತ್ತೊಂದು ಪ್ರಮುಖ ಯೋಜನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಾಹಿತಿಯನ್ನು ನೀಡಿದ್ದಾರೆ

Bengaluru, Karnataka, India
Edited By: Satish Raj Goravigere

ಮಹಿಳೆಯರ ಸ್ವಾವಲಂಬನೆ (Women Empowerment) ಎನ್ನುವುದು ಸರ್ಕಾರದ ಮಂತ್ರ ಆಗಿದೆ. ಈಗಾಗಲೇ ಕೇಂದ್ರ ಸರ್ಕಾರ (central government) ಕೂಡ ಮಹಿಳೆಯರ ಆರ್ಥಿಕ ಸ್ವಾವಲಂಬನೆಯ (financial independence) ಜೀವನ ನಡೆಸಲು ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಪರಿಚಯಿಸಿದೆ.

ಇನ್ನು ರಾಜ್ಯ ಸರ್ಕಾರ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಇದಕ್ಕೆ ಸಾಕ್ಷಿಯಾಗಿ ನಮ್ಮ ಕಣ್ಣ ಎದುರು ಇರುವಂತಹ ಶಕ್ತಿ ಯೋಜನೆ (shakti scheme) ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi scheme) ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

Loan Scheme

ಯಾಕೆಂದ್ರೆ ರಾಜ್ಯದ ಗ್ಯಾರಂಟಿ ಯೋಜನೆಗಳಲ್ಲಿ ಜಾರಿಗೆ ಬಂದಿರುವ ನಾಲ್ಕು ಯೋಜನೆಗಳಲ್ಲಿ ಎರಡು ಯೋಜನೆಗಳನ್ನು ಪ್ರಮುಖವಾಗಿ ಮಹಿಳೆಯರಿಗೆ ಮೀಸಲಿಟ್ಟಿದೆ ರಾಜ್ಯ ಸರ್ಕಾರ.

ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ದೇವಾಲಯಗಳಿಗೂ ವಿಸ್ತರಣೆ! ದೇವರಿಗೂ ಉಚಿತ ವಿದ್ಯುತ್

ಬಡ್ಡಿ ರಹಿತ ಸಾಲ ಯೋಜನೆ – Loan Scheme

Own Business Loanರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ಮತ್ತೊಂದು ಪ್ರಮುಖ ಯೋಜನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಾಹಿತಿಯನ್ನು ನೀಡಿದ್ದಾರೆ

ಇದರಿಂದ ಮಹಿಳೆಯರ ಆರ್ಥಿಕ ಸಬಲೀಕರಣದ ಸರ್ಕಾರದ ಉದ್ದೇಶ ಈಡೇರುತ್ತದೆ ಎನ್ನುವುದು ಸಿಎಂ ಸಿದ್ದರಾಮಯ್ಯ ಅವರ ನಂಬಿಕೆ. ಹಾಗಾಗಿ ಮಹಿಳೆಯರಿಗಾಗಿ ಈ ಒಂದು ವಿನೂತನವಾದ ಯೋಜನೆಯನ್ನು ಸರ್ಕಾರ ಪರಿಚಯಿಸಿದೆ.

ಪೆಟ್ರೋಲ್ ಬಂಕ್ ಗಳ ಸ್ಥಾಪನೆ

ಸಾಮಾನ್ಯವಾಗಿ ಪೆಟ್ರೋಲ್ ಬಂಕ್ಗಳನ್ನು (petrol bunk) ಪುರುಷರು ನಿರ್ವಹಣೆ ಮಾಡುತ್ತಾರೆ, ಆದರೆ ಇದೀಗ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರು ಪೆಟ್ರೋಲ್ ಬಂಕ್ ನಿರ್ವಹಣೆ ಮಾಡಿಕೊಳ್ಳುವಂತೆ ಯೋಜನೆ ಜಾರಿಗೆ ತರಲು ಮುಂದಾಗಿದೆ.

ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸಬೇಕು ಎನ್ನುವ ಕಾರಣಕ್ಕೆ ಅವರಿಗಾಗಿ 100 ಪೆಟ್ರೋಲ್ ಬಂಕ್ಗಳನ್ನು ಸ್ಥಾಪನೆ ಮಾಡಿ ಮಹಿಳಾ ಸಹಕಾರಿ ಸ್ವಸಹಾಯ ಸಂಘದ (women’s sahayak Sangha) ಸದಸ್ಯರು ಇದನ್ನ ನಿರ್ವಹಣೆ (maintenance) ಮಾಡುವಂತೆ ವ್ಯವಸ್ಥೆ ಮಾಡಲಾಗುವುದು.

ಎಲ್ಲವೂ ಸರಿ ಇದ್ರೂ ಗೃಹಲಕ್ಷ್ಮಿ ಯೋಜನೆ ಹಣ ಯಾಕೆ ಬಂದಿಲ್ಲ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಪಕ್ಕ ಉತ್ತರ

ಪೆಟ್ರೋಲ್ ಬಂಕ್ ಸ್ಥಾಪನೆಗೆ ಅಗತ್ಯ ಇರುವ ಪರವಾನಿಗೆ, ಬೇಕಾಗಿರುವ ತರಬೇತಿ (training) ಎಲ್ಲಾ ವಿಷಯಗಳ ಬಗ್ಗೆಯೂ ಕೂಡ ಸರ್ಕಾರವೇ ಬೆಂಬಲ ನೀಡಲಿದೆ, ಈ ಬಗ್ಗೆ ರಾಜ್ಯ ಬಜೆಟ್ (budget) ನಲ್ಲಿಯೂ ಕೂಡ ಹಣ ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕ ಹಾಗೂ ಶೈಕ್ಷಣಿಕ ವಲಯಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಸ್ವಾವಲಂಬನೆ ಜೀವನ ನಡೆಸಿದಾಗ ಮಾತ್ರ ದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ ಮಹಿಳೆಯರು ಉದ್ಯೋಗ, ಕೈಗಾರಿಕೆ ಹಾಗೂ ಸ್ವಂತ ಉದ್ದಿಮೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಎಂದು ಸಿಎಂ ಸಿದ್ದರಾಮಯ್ಯ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.

Another bumper scheme for women after Gruha Lakshmi Yojana