ಎಲ್ಲವೂ ಸರಿ ಇದ್ರೂ ಗೃಹಲಕ್ಷ್ಮಿ ಯೋಜನೆ ಹಣ ಯಾಕೆ ಬಂದಿಲ್ಲ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಪಕ್ಕ ಉತ್ತರ

ಮೊಟ್ಟ ಮೊದಲನೆಯದಾಗಿ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಅಡಿಯಲ್ಲಿ 2000 ಯಾರಿಗೆ ಬಂದು ಸೇರಿಲ್ಲ ಎನ್ನುವುದಕ್ಕಿಂತ ಎಷ್ಟು ಜನರಿಗೆ ತಲುಪಿದೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ
ಯಾಕಂದ್ರೆ ಇನ್ನು ಹಣ ಬಾರದೆ ಇರುವ ಅರ್ಜಿದಾರರ ಸಂಖ್ಯೆ ಕೇವಲ 20% ನಷ್ಟು ಆದರೆ 80% ನಷ್ಟು ಮಹಿಳೆಯರ ಖಾತೆಗೆ (Bank Account) ಎರಡು ಕಂತಿನ ಹಣ ವರ್ಗಾವಣೆಯಾಗಿದೆ.
ಆದ್ರೂ ಯಾರಿಗೆ ಹಣ ಬಂದಿಲ್ಲವೋ ಅಂತವರು ಚಿಂತೆ ಮಾಡುವ ಅಗತ್ಯವಿಲ್ಲ, ಪ್ರತಿಯೊಬ್ಬರ ಖಾತೆಗೂ ಹಣ ಬಂದು ತಲುಪುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
3 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರಾತ್ರೋ ರಾತ್ರಿ ರದ್ದು; ಆಹಾರ ಇಲಾಖೆಯ ಮಹತ್ವದ ಅಪ್ಡೇಟ್!
ಸಚಿವರು ಹೇಳಿದ್ದು ಏನು?
ಅರ್ಜಿ ಹಾಕಿದ ಮಹಿಳೆಯರ ಖಾತೆಗೆ ಹಣ ಬಂದೇ ಬರುತ್ತದೆ, ಚಿಂತೆ ಮಾಡುವ ಅಗತ್ಯವೇ ಇಲ್ಲ. ತಡವಾಗಿಯಾದರೂ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ. ಹಾಗಾಗಿ ನಿಮ್ಮ ಖಾತೆಗೆ ಸಂಬಂಧಪಟ್ಟ ಹಾಗೆ ಯಾವುದಾದರೂ ಸಮಸ್ಯೆ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.
ಹೌದು, ಇಂದು ಈ ಸಾವಿರಾರು ಮಹಿಳೆಯರು ತಮ್ಮ ಖಾತೆಗೆ ಹಣ (DBT) ಬಂದಿಲ್ಲ ಎನ್ನುವ ಕಾರಣಕ್ಕೆ ಬಹಳ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಗಸ್ಟ್ 30ಕ್ಕೇ ಮೊದಲ ಕಂತಿನ ಹಣ ಜಮಾ ಆಗಿದ್ದರೆ ಅಕ್ಟೋಬರ್ 17 ನೇ ತಾರೀಖಿನಿಂದ ಎರಡನೇ ಕಂತಿನ ಹಣವನ್ನು ಕೂಡ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ
ಇನ್ನು ಒಂದೊಂದೇ ಜಿಲ್ಲೆಗೆ (district) ಹಣ ವರ್ಗಾವಣೆ ಮಾಡಲಾಗುತ್ತಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಹಣ ತಲುಪಲು ಸ್ವಲ್ಪ ದಿನ ಸಮಯ ಹಿಡಿಯುತ್ತದೆ. ಒಂದು ದಿನಕ್ಕೆ ಮೂರರಿಂದ ನಾಲ್ಕು ಲಕ್ಷ ಜನರ ಖಾತೆಗೆ ಮಾತ್ರ ಹಣ ವರ್ಗಾವಣೆ ಮಾಡಲು ಸಾಧ್ಯ
ಯಾಕಂದ್ರೆ RBI ಬ್ಯಾಂಕ್ (Bank) ವ್ಯವಹಾರ ಮಿತಿಯನ್ನು ವಿಧಿಸಿರುತ್ತದೆ. ಹಾಗಾಗಿ ಈ ತಿಂಗಳ ಕೊನೆಯ ದಿನಾಂಕದ ಒಳಗೆ ಬಹುತೇಕ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ 2000 ರೂ. ಅಥವಾ 2 ಕಂತಿನ ಹಣ ಸೇರಿ 4,000 ರೂ. ಜಮಾ ಆಗಲಿದೆ.
ಈ ಜಿಲ್ಲೆಯ ಜನರಿಗೆ ಇನ್ಮುಂದೆ ಸಿಗುವುದಿಲ್ಲ ಉಚಿತ ವಿದ್ಯುತ್; ಸರ್ಕಾರದ ಮಹತ್ವದ ಸೂಚನೆ
ಖಾತೆಯ ಬಗ್ಗೆ ಮಾಹಿತಿ ಪಡೆಯಿರಿ!

ಈಗಲೂ ಕೂಡ ಸಾಕಷ್ಟು ಮಹಿಳೆಯರು ರೇಷನ್ ಕಾರ್ಡ್ (ration card) ಅನ್ನು ತಮ್ಮ ಹೆಸರಿಗೆ ಮಾಡಿಕೊಂಡಿಲ್ಲ. ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಲ್ಲಿ ಜೊತೆಗೆ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ವಿಳಾಸ ಹೊಂದಾಣಿಕೆ ಆಗುತ್ತಿಲ್ಲ.
ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್, ಜೊತೆಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗೋಲ್ಲ
ಆಧಾರ್ ಸೀಡಿಂಗ್ (Aadhaar seeding) ಕೂಡ ಮಾಡಿಸಿಕೊಳ್ಳದೆ ಇರುವ ಪರಿಣಾಮ ಅಂತವರ ಖಾತೆಗೆ (Bank Account) ಹಣ ವರ್ಗಾವಣೆ ಆಗಿಲ್ಲ. ಹಾಗಾಗಿ ಯಾರ ಖಾತೆಗೆ ಹಣ ಬಂದಿಲ್ಲವೋ ಅವರು ಸ್ಥಳೀಯ ಸಿಡಿಪಿಓ (CDPO) ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಅಂಗನವಾಡಿ ಶಿಕ್ಷಕಿಯರನ್ನು ಅಥವಾ ಸಹಾಯಕಿಯರನ್ನು ಸಂಪರ್ಕಿಸಬಹುದು. ಒಟ್ಟಿನಲ್ಲಿ ತಡವಾಗಿಯಾದರೂ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ (Money Transfer) ಆಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
why the Gruha lakshmi Yojana money has not come, Here is the answer to your question







