ಈ ಜಿಲ್ಲೆಯ ಜನರಿಗೆ ಇನ್ಮುಂದೆ ಸಿಗುವುದಿಲ್ಲ ಉಚಿತ ವಿದ್ಯುತ್; ಸರ್ಕಾರದ ಮಹತ್ವದ ಸೂಚನೆ
free electricity : ಗೃಹಜ್ಯೋತಿಯ ಲಾಭ ಪಡೆದುಕೊಳ್ಳಲು ಉಚಿತ ವಿದ್ಯುತ್ ಗಾಗಿ ಸಾಕಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ, ಆದರೆ ಸರ್ಕಾರ ಹಳೆಯ ಬಾಗಿ ಪಾವತಿ ಮಾಡಬೇಕು ಎನ್ನುವ ನಿಯಮವನ್ನು ಮಾತ್ರ ಪಾಲಿಸಿಲ್ಲ.
ಸರ್ಕಾರದಿಂದ ಉಚಿತ ವಿದ್ಯುತ್ (free electricity) ಪ್ರಯೋಜನವನ್ನು ಪಡೆದುಕೊಂಡು ಸರ್ಕಾರದ ಕಣ್ಣಿಗೆ ಮಣ್ಣೆರೆಚುವಂತಹ ಕೆಲಸ ಮಾಡುವವರಿಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಒಂದನ್ನು ಹೊರಡಿಸಿದೆ
ಇನ್ನು ಮುಂದೆ ಇಂಥವರಿಗೆ ಉಚಿತವಾಗಿ ವಿದ್ಯುತ್ ಸಿಗುವುದಿಲ್ಲ, ಅಷ್ಟೇ ಅಲ್ಲ ವಂಚನೆ ಮಾಡಿದವರ ಮನೆಯ ವಿದ್ಯುತ್ ಸಂಪರ್ಕವನ್ನು ಕೂಡ ಕಡಿತಗೊಳಿಸಲಾಗುವುದು.
ಫ್ರೀ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆ ಹಣ ಪುರುಷರಿಗೂ ಸಿಗುತ್ತಾ? ಏನಿದು ಟ್ವಿಸ್ಟ್
ಗೃಹಜ್ಯೋತಿ ಯೋಜನೆ ರದ್ದಾಗುವುದೇ?
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲಿಗೆ ಜಾರಿಗೆ ತಂದಿದ್ದೆ ಶಕ್ತಿ ಯೋಜನೆ (Shakti Yojana) ಹಾಗೂ ಗೃಹ ಜ್ಯೋತಿ ಯೋಜನೆ (Gruha Jyothi scheme). ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ 200 ಯೂನಿಟ್ (unit) ವರೆಗೆ ಉಚಿತ ವಿದ್ಯುತ್ ಅನ್ನು ಸರ್ಕಾರ ನೀಡುತ್ತಿದೆ.
ಯಾರು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಾರೋ ಅಂತವರಿಗೆ ಸಂಪೂರ್ಣ ಜೀರೋ ಬಿಲ್ (zero electricity bill) ಬರಲಿದೆ, ಆದರೆ 200 ಯೂನಿಟ್ ಗಿಂತಲೂ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡಿದರೆ ಅಂತವರು ಸಂಪೂರ್ಣ ಪಾವತಿ ಮಾಡಬೇಕು.
ಕೇವಲ ಮನೆಯ ಓನರ್ ಗಳು ಮಾತ್ರವಲ್ಲದೆ ಬಾಡಿಗೆದಾರರಿಗೂ ಕೂಡ ಈ ಸೌಲಭ್ಯವನ್ನು ಸರ್ಕಾರ ನಿಗದಿ ಪಡಿಸಿದೆ. ಆದರೆ ಉಚಿತ ವಿದ್ಯುತ್ ಕೊಟ್ಟ ಸರ್ಕಾರಕ್ಕೆ ಕೆಲವು ಜಿಲ್ಲೆಯ ಜನರು ಶಾಕ್ ನೀಡಿದ್ದಾರೆ.
ಎರಡೂ ಕಂತಿನ ಗೃಹಲಕ್ಷ್ಮಿ ಹಣ ಬಂದಿಲ್ವಾ? ಇವರನ್ನು ಸಂಪರ್ಕಿಸಿ, ನಾಳೆಯೇ ಹಣ ಬರುತ್ತೆ
ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ (Electricity Bill)
ಹೌದು ಗೃಹಜ್ಯೋತಿಯ ಲಾಭ ಪಡೆದುಕೊಳ್ಳಲು ಉಚಿತ ವಿದ್ಯುತ್ ಗಾಗಿ ಸಾಕಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ, ಆದರೆ ಸರ್ಕಾರ ಹಳೆಯ ಬಾಗಿ ಪಾವತಿ ಮಾಡಬೇಕು ಎನ್ನುವ ನಿಯಮವನ್ನು ಮಾತ್ರ ಪಾಲಿಸಿಲ್ಲ.
ಇದರಿಂದಾಗಿ ವಿದ್ಯುತ್ ನಿಗಮಕ್ಕೆ ಹೆಚ್ಚು ನಷ್ಟವಾಗಿದೆ, ಈ ಕಾರಣಕ್ಕೆ ಇನ್ನು ಮುಂದೆ ಯಾರು ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೋ ಅಂತವರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.
ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್, ಜೊತೆಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗೋಲ್ಲ
ಈ ಜಿಲ್ಲೆಯವರು ಬಾಕಿ ಹಣ ಪಾವತಿ ಮಾಡಿಲ್ಲ;
ಸರ್ಕಾರದ ಮಾಹಿತಿಯ ಪ್ರಕಾರ ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸಾಕಷ್ಟು ವಿದ್ಯುತ್ ಬಿಲ್ ಪಾವತಿ (old bill payment) ಮಾಡುವುದು ಬಾಕಿ ಉಳಿದಿದೆ. ಹುಬ್ಬಳ್ಳಿ ವಿದ್ಯುತ್ ನಿಗಮದ ಅಡಿಯಲ್ಲಿ ಉತ್ತರ ಕನ್ನಡ ಭಾಗದಿಂದ ಕೋಟ್ಯಾಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿ ಆಗಬೇಕು.
ಇದಕ್ಕಾಗಿ ಸರ್ಕಾರ ಯಾರು ಬಾಕಿ ಉಳಿಸಿಕೊಂಡಿದ್ದಾರೋ ಅಂತವರ ಮನೆಯ ವಿದ್ಯುತ್ ಕಡಿತಗೊಳಿಸಲು ಮುಂದಾಗಿದೆ ಈ ಕೆಲಸವನ್ನು ವಿದ್ಯುತ್ ನಿಗಮ ಮಾಡಲಿದೆ. ಅಷ್ಟೇ ಅಲ್ಲದೆ ಬಾಕಿ ವಿದ್ಯುತ್ ಬಿಲ್ ಉಳಿಸಿಕೊಂಡವರ ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಕೂಡ ತಡೆಹಿಡಿಯಲಾಗುತ್ತದೆ.
ರಾಜ್ಯದಲ್ಲಿ ತಲೆದೂರಿದ ವಿದ್ಯುತ್ ಕೊರತೆ!
ರಾಜ್ಯದಲ್ಲಿ ಜನರ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ತಯಾರು ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈಗಾಗಲೇ ಮಳೆಯ ಅಭಾವದಿಂದಾಗಿ ವಿದ್ಯುತ್ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಲೋಡ್ ಶೆಡ್ಡಿಂಗ್ (load shedding) ಕೂಡ ಆರಂಭವಾಗಿದೆ. ಅಷ್ಟೇ ಅಲ್ಲದೆ ಉಚಿತ ವಿದ್ಯುತ್ ನಿಂದಾಗಿ ವಿದ್ಯುತ್ ನಿಗಮ ದೊಡ್ಡ ಮೊತ್ತದ ಹಣವನ್ನು ಕಳೆದುಕೊಳ್ಳುವಂತಾಗಿದೆ ಹಾಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದು ಸದ್ಯದಲ್ಲಿಯೇ ಸಾಕಷ್ಟು ಜನರು ತಮ್ಮ ವಿದ್ಯುತ್ ಸಂಪರ್ಕವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
The people of this district will no longer get free electricity
Follow us On
Google News |