ಫ್ರೀ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆ ಹಣ ಪುರುಷರಿಗೂ ಸಿಗುತ್ತಾ? ಏನಿದು ಟ್ವಿಸ್ಟ್

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು (guarantee schemes) ಯಶಸ್ವಿಯಾಗಿ ಮುಂದುವರೆಯುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ನಿವಾಸಿಗಳು ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ.
ಶಕ್ತಿ ಯೋಜನೆಯ (Shakti scheme) ಅಡಿಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ದುಡ್ಡು ಕೊಡದೆ ಎಲ್ಲಿಗೆ ಬೇಕಾದರೂ ರಾಜ್ಯದ ಒಳಗೆ ಪ್ರಯಾಣ ಮಾಡಬಹುದು.
ಸರ್ಕಾರದ ಎಸಿ ಹಾಗೂ ನಾನ್ ಎಸಿ ಸ್ಲೀಪರ್ ಬಸ್ ಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಬಸ್ಸುಗಳಲ್ಲಿಯೂ ಕೂಡ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು, ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಶಕ್ತಿ ಯೋಜನೆಯ ಪರಿಣಾಮದಿಂದಾಗಿ ಮಹಿಳೆಯರ ಸಬಲೀಕರಣ (women empowerment) ಆಗುತ್ತಿದೆ, ಜೊತೆಗೆ ಕರ್ನಾಟಕ ರಾಜ್ಯ ಸಾರಿಗೆಯಲ್ಲಿ 15% ನಷ್ಟು ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಎರಡೂ ಕಂತಿನ ಗೃಹಲಕ್ಷ್ಮಿ ಹಣ ಬಂದಿಲ್ವಾ? ಇವರನ್ನು ಸಂಪರ್ಕಿಸಿ, ನಾಳೆಯೇ ಹಣ ಬರುತ್ತೆ
ಅದೇ ರೀತಿ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Yojana) ಕೂಡ ಸರ್ಕಾರ ಜಾರಿಗೆ ತಂದಿದೆ, ಆಗಸ್ಟ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಹಣ ಬಿಡುಗಡೆ ಮಾಡುವುದರ ಮೂಲಕ ಎರಡು ಕಂತಿನ ಗೃಹಲಕ್ಷ್ಮಿ 2000 ರೂ. ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಜಮಾ ಆಗಿದೆ.
ಎಲ್ಲಾ ಯೋಜನೆಗಳು ಸರಿಯಾಗಿಯೇ ಇದೆ, ಮಹಿಳೆಯರ ಸಬಲೀಕರಣ ಎನ್ನುವ ಸರ್ಕಾರದ ಉದ್ದೇಶವು ಈಡೇರುತ್ತಿದೆ. ಆದರೆ ಈ ಯೋಜನೆಯ ಲಾಭ ಪುರುಷರಿಗೆ ಸಿಗುತ್ತಿಲ್ಲ ಎನ್ನುವುದು ಹಲವರ ವಾದ.
ಪುರುಷರಿಗೂ ವಿಸ್ತರಣೆ ಆಗಬೇಕು, ಸರ್ಕಾರದ ಯೋಜನೆ!

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆ ಉತ್ತಮವಾಗಿದೆ, ಇದರಿಂದ ಮಹಿಳೆಯರಿಗೆ ಸಹಾಯವಾಗುತ್ತದೆ. ಯೋಜನೆಗಳು ಮುಂದುವರೆಯಲಿ ಆದರೆ ಪುರುಷರು ಯಾವ ತಪ್ಪು ಮಾಡಿದ್ದಾರೆ, ಅವರಿಗೆ ಯಾಕೆ ಈ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್, ಜೊತೆಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗೋಲ್ಲ
ಈಗಾಗಲೇ ಸಾಕಷ್ಟು ಸಂಘಟನೆಗಳು ಸರ್ಕಾರದ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಪುರುಷರು ಕೂಡ ಸರ್ಕಾರಕ್ಕೆ ಮತ ಹಾಕಿದ್ದಾರೆ ಅಂತದ್ರಲ್ಲಿ ಅವರಿಗೆ ಯಾವ ಯೋಜನೆಯ ಪ್ರಯೋಜನವು ಸಿಗುತ್ತಿಲ್ಲ.. ಮನೆಯ ಯಜಮಾನಿಗೆ 2000 ಸಿಗುತ್ತಿದ್ದರೆ ಮನೆಯ ಯಜಮಾನನಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲಾ. ಮನೆಯ ಯಜಮಾನಿಯ ಮುಂದೆ ಯಜಮಾನ ತಲೆತಗ್ಗಿಸುವಂಥಾಗಿದೆ. ಹಾಗಾಗಿ ಅವರಿಗೂ ಕೂಡ ಸರ್ಕಾರ ಸಹಾಯಧನ ನೀಡಬೇಕು.
ಇನ್ನು ಪುರುಷರಿಗೂ ಕೂಡ ಶಕ್ತಿ ಯೋಜನೆ ವಿಸ್ತರಣೆ ಆಗಬೇಕು ಪುರುಷರು ಬಿಎಂಟಿಸಿ ಹಾಗೂ ಇತರ ಸರ್ಕಾರದ ಸಾರಿಗೆಯಲ್ಲಿ ಉಚಿತವಾಗಿ ಪ್ರಯಾಣಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರದ ಯೋಜನೆಗಳನ್ನು ಪ್ರಶ್ನಿಸಿ ಹಲವರು ಮನವಿ ಸಲ್ಲಿಸಿದ್ದಾರೆ.
ಸರ್ಕಾರ ನಿಜಕ್ಕೂ ಪುರುಷರ ಈ ಬೇಡಿಕೆಯನ್ನು ಈಡೇರಿಸುತ್ತಾ? ಪುರುಷರಿಗೂ ಉಚಿತ ಹಣ ಹಾಗೂ ಬಸ್ ಪ್ರಯಾಣ ಲಭ್ಯವಾಗುತ್ತಾ ಎನ್ನುವ ಪ್ರಶ್ನೆ ಹಲವರದ್ದು, ಆದರೆ ಸರ್ಕಾರ ಮಾತ್ರ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗೃಹಜ್ಯೋತಿ ಯೋಜನೆ ಕ್ಯಾನ್ಸಲ್ ಆಗುತ್ತಾ? ಉಚಿತ ವಿದ್ಯುತ್ ಕೊಟ್ಟಿದ್ದೆ ಎದುರಾಯಿತು ಸಂಕಷ್ಟ
ಈಗಾಗಲೇ ಉಚಿತ ಯೋಜನೆಗಳಿಂದಾಗಿ ಸರ್ಕಾರಕ್ಕೆ ಬಹಳ ದೊಡ್ಡ ಆರ್ಥಿಕ ಹೊರೆ ಆಗುತ್ತಿದೆ ಅಂತದ್ರಲ್ಲಿ ಪುರುಷರಿಗೂ ಕೂಡ ಈ ಯೋಜನೆಗಳನ್ನ ವಿಸ್ತರಿಸಿದರೆ ರಾಜ್ಯದ ಬೊಕ್ಕಸ ಬರಿದಾಗುವುದು ಗ್ಯಾರಂಟಿ ಅಂತ ವಿಪಕ್ಷಗಳು ಮಾತನಾಡಿಕೊಳ್ಳುತ್ತಿವೆ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೆಲವರಿಗೆ ತೃಪ್ತಿ ನೀಡಿದ್ರೆ ಇನ್ನು ಕೆಲವರಿಗೆ ತಲೆ ನೋವಾಗಿದೆ.
Free bus travel and Gruha lakshmi Yojana money is also available for men







