ಗೃಹಜ್ಯೋತಿ ಯೋಜನೆ ಕ್ಯಾನ್ಸಲ್ ಆಗುತ್ತಾ? ಉಚಿತ ವಿದ್ಯುತ್ ಕೊಟ್ಟಿದ್ದೆ ಎದುರಾಯಿತು ಸಂಕಷ್ಟ

ವರ್ಷದಿಂದ ವರ್ಷಕ್ಕೆ ವಿದ್ಯುತ್ ಬಿಲ್ (Electricity Bill) ದರ ಜಾಸ್ತಿ ಆಗುತ್ತದೆ. ಆದರೆ ಈ ವರ್ಷ ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಜಾಸ್ತಿ ಮಾಡುವುದರ ಬದಲು ಗೃಹಜ್ಯೋತಿ ಯೋಜನೆ ಜಾರಿಗೆ ತಂದು 200 ಯೂನಿಟ್ (unit) ವರೆಗಿನ ವಿದ್ಯುತ್ ಅನ್ನು ಉಚಿತವಾಗಿ ನೀಡಿತ್ತು.

ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯ ಸರ್ಕಾರ (state government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ (Gruha Jyothi scheme) ಕೂಡ ಒಂದು. ಯೋಜನೆಯ ಮೂಲಕ ರಾಜ್ಯದಲ್ಲಿ ವಾಸಿಸುವ ಲಕ್ಷಾಂತರ ಕುಟುಂಬಗಳು ಯಾವುದೇ ಹಣಕಾಸಿನ ಸಮಸ್ಯೆ ಇಲ್ಲದೆ ವಿದ್ಯುತ್ (electricity) ಪಡೆದುಕೊಳ್ಳುವಂತಾಗಿದೆ.

ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ವಿದ್ಯುತ್ ಬಿಲ್ (Electricity Bill) ದರ ಜಾಸ್ತಿ ಆಗುತ್ತದೆ. ಆದರೆ ಈ ವರ್ಷ ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಜಾಸ್ತಿ ಮಾಡುವುದರ ಬದಲು ಗೃಹಜ್ಯೋತಿ ಯೋಜನೆ ಜಾರಿಗೆ ತಂದು 200 ಯೂನಿಟ್ (unit) ವರೆಗಿನ ವಿದ್ಯುತ್ ಅನ್ನು ಉಚಿತವಾಗಿ ನೀಡಿತ್ತು.

ಹೌದು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಜೋತಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಜನರ ಮನೆಯ ವಿದ್ಯುತ್ ಬೆಳಗಿದೆ ಎನ್ನಬಹುದು. ಉಚಿತ ವಿದ್ಯುತ್ ನೀಡುವುದರ ಮೂಲಕ ಸಾಕಷ್ಟು ಜನರಿಗೆ ಅನುಕೂಲ ಮಾಡಿಕೊಡಲಾಗಿತ್ತು ಆದರೆ ಈಗ ಸರ್ಕಾರದ ಈ ಒಂದು ನಿರ್ಧಾರ ಸರ್ಕಾರವನ್ನು ಬಹಳ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿದೆ.

ಗೃಹಜ್ಯೋತಿ ಯೋಜನೆ ಕ್ಯಾನ್ಸಲ್ ಆಗುತ್ತಾ? ಉಚಿತ ವಿದ್ಯುತ್ ಕೊಟ್ಟಿದ್ದೆ ಎದುರಾಯಿತು ಸಂಕಷ್ಟ - Kannada News

ಗೃಹಲಕ್ಷ್ಮಿ ಯೋಜನೆ 2ನೇ ಕಂತು ಬಿಡುಗಡೆ ಆದ್ರೂ ನಿಮಗಿನ್ನು ಬಂದೇ ಇಲ್ವಾ? ಅದಕ್ಕೆ ಇಲ್ಲಿದೆ ಕಾರಣ

ವಿದ್ಯುತ್ ಕೊರತೆ!

ಈ ಬಾರಿ ರಾಜ್ಯದಲ್ಲಿ ನಿರೀಕ್ಷೆಗೆ ತಕ್ಕ ಹಾಗೆ ಮಳೆ ಆಗಿಲ್ಲ. ಮಳೆಯ ಅಭಾವದಿಂದಾಗಿ ರಾಜ್ಯದ ಕೆಲವು ಪ್ರದೇಶಗಳನ್ನು ಈಗಾಗಲೇ ಬರಪೀಡಿತ ಪ್ರದೇಶ ಎಂದು ಕೂಡ ಘೋಷಣೆ ಮಾಡಲಾಗಿದೆ.

ಆದರೆ ಈಗ ಮಳೆಯ ಅಭಾವದಿಂದ ಬೆಳೆ ನಷ್ಟ ಮಾತ್ರವಲ್ಲದೆ ರಾಜ್ಯಕ್ಕೆ ಬೇಕಾಗಿರುವಷ್ಟು ವಿದ್ಯುತ್ ಕೂಡ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಕೇವಲ ನೀರಿನಿಂದ ಉತ್ಪಾದನೆ ಮಾಡುವ ವಿದ್ಯುತ್ ಅಭಾವ ಮಾತ್ರವಲ್ಲದೆ ಸೌರಶಕ್ತಿ ಹಾಗೂ ಪವನ ಶಕ್ತಿ ಉತ್ಪಾದನೆ ಕೂಡ ಸರಿಯಾಗಿ ಆಗುತ್ತಿಲ್ಲ ಎನ್ನಲಾಗಿದೆ.

ರಾಜ್ಯದಲ್ಲಿ ಮಳೆಯ ಅಭಾವ ಮಾತ್ರವಲ್ಲದೆ ಗಾಳಿಯ ಅಭಾವವು ಆಗುತ್ತಿದೆ ಎನ್ನಲಾಗಿದೆ, ಅಂದರೆ ಸಂಶೋಧನೆಯ ಪ್ರಕಾರ ನಮ್ಮ ರಾಜ್ಯದಲ್ಲಿ ಬೀಸುವ ಗಾಳಿಯ ಪ್ರಮಾಣವೂ ಕೂಡ ಕಡಿಮೆಯಾಗಿದೆ, ಇದರಿಂದ ಪವನ ಶಕ್ತಿಯನ್ನು ಕೊಡಬಲ್ಲಂತಹ ರೆಕ್ಕೆಗಳು ಸರಿಯಾಗಿ ತಿರುಗುತ್ತಿಲ್ಲ. ಇದರಿಂದ ಪವನ ಶಕ್ತಿಯಿಂದ ಯಾವುದೇ ರೀತಿಯ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ.

ನಿಮ್ಮ ತೋಟ ಅಥವಾ ಜಮೀನಿಗೆ ಹೋಗಲು ರಸ್ತೆ ಇಲ್ಲವೇ? ಬಂತು ರೈತರಿಗಾಗಿ ಹೊಸ ರೂಲ್ಸ್

Gruha jyothi scheme

ಗೃಹಜ್ಯೋತಿ ಫ್ರೀ ಕರೆಂಟ್! ಇಂತಹವರಿಗೆ ಮಾತ್ರ 250 ಯೂನಿಟ್ ವರೆಗೆ ಸಿಗುತ್ತೆ ಉಚಿತ ವಿದ್ಯುತ್

ಪ್ರತಿ ಸೆಕೆಂಡಿಗೆ 3600 ವರೆಗೆ ಪವನ ಶಕ್ತಿ ವಿದ್ಯುತ್ ತಯಾರಿಸುತ್ತಿದ್ದ ರಾಜ್ಯ ಇಂದು ಪ್ರತಿ ಸೆಕೆಂಡ್ ಗೆ 100 ರಿಂದ 600 ವ್ಯಾಟ್ ವರೆಗೆ ಮಾತ್ರ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಅಷ್ಟು ದೊಡ್ಡ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಗೆ ಹೊಡೆತ ಬಿದ್ದಿದೆ ಎನ್ನಬಹುದು.

ಈಗಾಗಲೇ ಹಳ್ಳಿ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ (load shedding) ಆರಂಭವಾಗಿದೆ. ವಿದ್ಯುತ್ ಕೊರತೆಯ ಹಿನ್ನೆಲೆಯಲ್ಲಿ ವಿದ್ಯುತ್ ದರವನ್ನು ಕೂಡ ಹೆಚ್ಚಿಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ವಿದ್ಯುತ್ ತಯಾರಿಕೆಯ ವಿಚಾರದಲ್ಲಿ ಬಹಳ ದೊಡ್ಡ ಸಮಸ್ಯೆ ಎದುರಾಗಿದ್ದು ಇನ್ನು ಮುಂದೆ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ನಿಜಕ್ಕೂ ಎಲ್ಲರಿಗೂ ವಿದ್ಯುತ್ ಉಚಿತವಾಗಿ ಕೊಡಲು ಸಾಧ್ಯವಿದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ.

ಹಾಗಾಗಿ ಇಲ್ಲಿಯವರೆಗೆ ಯಶಸ್ವಿಯಾಗಿರುವ ಗೃಹಜ್ಯೋತಿ ಯೋಜನೆ ಇನ್ನೂ ಮುಂದೆ ಕೂಡ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತದೆಯಾ ಅಥವಾ ಯೋಜನೆ ಅರ್ಧದಲ್ಲಿಯೇ ಸ್ಥಗಿತಗೊಳ್ಳಲಿದೆಯಾ, ಸರ್ಕಾರ ವಿದ್ಯುತ್ ಗಾಗಿ ಪರ್ಯಾಯವಾದ ವ್ಯವಸ್ಥೆ ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕು.

Karnataka Free Electricity Scheme Gruha Jyothi Yojana Big Update

Follow us On

FaceBook Google News

Karnataka Free Electricity Scheme Gruha Jyothi Yojana Big Update