ಎರಡನೇ ಕಂತಿನ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಅಂತೂ ಬಿಡುಗಡೆ ಆಗಿದೆ, ಮೊದಲೇ ಕಂತಿನ ಹಣ (first installment) ಬಿಡುಗಡೆ ಆದ ನಂತರ ಎರಡನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಬಹುದು ಎಂದು ಮಹಿಳೆಯರು ಕಾದು ಕುಳಿತಿದ್ದರು.
ಈಗ ನವರಾತ್ರಿ ಉಡುಗೊರೆಯಾಗಿ ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha lakshmi Yojana) ಅಡಿಯಲ್ಲಿ 2000 ಗಳನ್ನ ಮಹಿಳೆಯರ ಖಾತೆಗೆ (Bank Account) ನೇರವಾಗಿ ವರ್ಗಾವಣೆ ಮಾಡಿದೆ.
ಶಾಲಾ ಮಕ್ಕಳಿಗೆ ಫುಲ್ ಖುಷ್, ದಸರಾ ರಜೆ ನವೆಂಬರ್ 1ರ ವರೆಗೆ ವಿಸ್ತರಣೆ ಸಾಧ್ಯತೆ! ಬಿಗ್ ಅಪ್ಡೇಟ್
ನವರಾತ್ರಿಗೆ ಗಿಫ್ಟ್ ಕೊಟ್ಟ ರಾಜ್ಯ ಸರ್ಕಾರ
ಮೊದಲ ಕಂತಿನ ಹಣವನ್ನ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು, ಆದರೆ ಇನ್ನೂ ಸಾಕಷ್ಟು ಮಹಿಳೆಯರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳದೆ ಇರುವ ಪರಿಣಾಮ ಅಂತವರ ಖಾತೆಗೆ ಹಣ ವರ್ಗಾವಣೆ (Money Transfer) ಆಗಿಲ್ಲ.
ಇದನ್ನು ಹೊರತುಪಡಿಸಿ ಮೊದಲ ಕಂತಿನ ಹಣ ಯಾರೆಲ್ಲಾ ಖಾತೆಗೆ ಬಂದಿದೆಯೋ ಅವರಿಗೆ ಎರಡನೇ ಕಂತಿನ ಹಣವು (second installment released) ಕೂಡ ಬಿಡುಗಡೆಯಾಗಿದೆ. ಅಕ್ಟೋಬರ್ 17 ನೇ ತಾರೀಖಿನಿಂದ ಫಲಾನುನುಭವಿ ಗೃಹಿಣಿಯರ ಖಾತೆಗೆ ಹಣ ಹಾಕಲು ಸರ್ಕಾರ ಆರಂಭಿಸಿದೆ.
ನಿಮ್ಮ ತೋಟ ಅಥವಾ ಜಮೀನಿಗೆ ಹೋಗಲು ರಸ್ತೆ ಇಲ್ಲವೇ? ಬಂತು ರೈತರಿಗಾಗಿ ಹೊಸ ರೂಲ್ಸ್
ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಿ (online DBT status check)
ಇನ್ನು ಸರ್ಕಾರದಿಂದ 2000 ಮಹಿಳೆಯರ ಖಾತೆಗೆ ವರ್ಗಾವಣೆ ಆಗಿದೆಯೋ ಇಲ್ಲವೋ ಎಂಬುದನ್ನು ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ (website) ಆಗಿರುವ https://ahara.kar.nic.in ಮೂಲಕ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಬಹುದು, ಸಾಮಾನ್ಯವಾಗಿ ಅನ್ನಭಾಗ್ಯ ಯೋಜನೆಯ (Annabhagya scheme) ಹಣ ಬಂದಿರುವವರ ಖಾತೆಗೆ ಯೋಜನೆಯ ಹಣವು ಕೂಡ ಬಂದಿರುತ್ತದೆ.
ಗೃಹಜ್ಯೋತಿ ಫ್ರೀ ಕರೆಂಟ್! ಇಂತಹವರಿಗೆ ಮಾತ್ರ 250 ಯೂನಿಟ್ ವರೆಗೆ ಸಿಗುತ್ತೆ ಉಚಿತ ವಿದ್ಯುತ್
ನವರಾತ್ರಿ ಹಬ್ಬಕ್ಕೆ ಗೃಹಿಣಿಯರಿಗೆ ಸರ್ಕಾರ ಗಿಫ್ಟ್ ನೀಡಿದ್ದು ಮೊದಲ ಕಂತಿನ ಹಣ ಬಿಡುಗಡೆ ಆಗದವರೆಗೂ ಕೂಡ ಈಗ ಹಣ ಬಿಡುಗಡೆ ಆಗಿದೆ. ಇನ್ನು ಒಂದೊಂದೇ ಜಿಲ್ಲೆಯ ಪ್ರಕಾರ ಹಣ ವರ್ಗಾವಣೆ ಮಾಡಲಾಗುತ್ತಿದ್ದು ಅಕ್ಟೋಬರ್ 31ರ ಒಳಗೆ ಪ್ರತಿಯೊಬ್ಬರ ಖಾತೆಗೂ ಕೂಡ ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ
ಇದುವರೆಗೆ ಯಾರ ಖಾತೆಗೆ ಹಣ ಬಂದಿಲ್ಲವೋ ನಿಮ್ಮ ಖಾತೆ ಸರಿಯಾಗಿದ್ದರೆ ಟೆನ್ಶನ್ ಮಾಡಿಕೊಳ್ಳುವ ಅಗತ್ಯವಿಲ್ಲ ನಿಮ್ಮ ಖಾತೆಗೂ ಅಕ್ಟೋಬರ್ ತಿಂಗಳ ಒಳಗೆ ಹಣ ಜಮಾ ಆಗುತ್ತದೆ. ನೀವು ಮಾಡಬೇಕಿರುವುದು ಇಷ್ಟೇ, ನೀವು ಕೊಟ್ಟಂತಹ ಮಾಹಿತಿ ಸರಿಯಾಗಿದೆಯೇ? ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಆಗಿದೆಯೇ ಎಂಬ ಅಂಶಗಳನ್ನು ಪರಿಶೀಲಿಸುವುದು. ಎಲ್ಲವೂ ಸರಿಯಾಗಿದ್ದರೆ ತಡವಾಗಿ ಆದರೂ ಹಣ ಸೇರುತ್ತದೆ
Gruaha Lakshmi Yojana 2nd installment has been released, if You Still Not Received Here is the reason
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.