ಶಾಲಾ ಮಕ್ಕಳಿಗೆ ಫುಲ್ ಖುಷ್, ದಸರಾ ರಜೆ ನವೆಂಬರ್ 1ರ ವರೆಗೆ ವಿಸ್ತರಣೆ ಸಾಧ್ಯತೆ! ಬಿಗ್ ಅಪ್ಡೇಟ್

Dussehra Holiday Extend : ಕೇವಲ ಒಂದರಿಂದ ಎರಡು ವಾರಗಳು ಮಾತ್ರ ರಜೆ ಸಿಗುತ್ತವೆ. ಆದರೆ ಈ ಬಾರಿ ಹೆಚ್ಚುವರಿ ರಜೆ ನೀಡುವಂತೆ ರಾಜ್ಯ ಶಿಕ್ಷಕರ ಸಂಘ ಶಿಕ್ಷಣ ಇಲಾಖೆಗೆ (education department) ಮನವಿ ಮಾಡಿತ್ತು

Dussehra Holiday Extend : ಮೊದಲಿಗಿಂತಲೂ ಈಗ ದಸರಾ ರಜೆಯ (Dussehra holiday) ಅವಧಿ ಬಹಳ ಕಡಿಮೆ ಆಗಿದೆ, ಕೇವಲ ಒಂದರಿಂದ ಎರಡು ವಾರಗಳು ಮಾತ್ರ ರಜೆ ಸಿಗುತ್ತವೆ. ಆದರೆ ಈ ಬಾರಿ ಹೆಚ್ಚುವರಿ ರಜೆ ನೀಡುವಂತೆ ರಾಜ್ಯ ಶಿಕ್ಷಕರ ಸಂಘ ಶಿಕ್ಷಣ ಇಲಾಖೆಗೆ (education department) ಮನವಿ ಮಾಡಿತ್ತು. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (basavaraj horatti) ಈ ಬಗ್ಗೆ ಮಹತ್ವದ ನಿರ್ಧಾರವನ್ನು ತಿಳಿಸಿದ್ದಾರೆ.

ನಿಮ್ಮ ತೋಟ ಅಥವಾ ಜಮೀನಿಗೆ ಹೋಗಲು ರಸ್ತೆ ಇಲ್ಲವೇ? ಬಂತು ರೈತರಿಗಾಗಿ ಹೊಸ ರೂಲ್ಸ್

ಶಾಲೆಗಳಿಗೆ ದಸರಾ ರಜೆ ವಿಸ್ತರಣೆ!

ಶಿಕ್ಷಣ ಇಲಾಖೆಗೆ ರಾಜ್ಯ ಶಿಕ್ಷಕರ ಸಂಘ ದಸರಾ ರಜೆಯನ್ನು ನವೆಂಬರ್ 1ನೇ ತಾರೀಖಿನವರೆಗೆ ವಿಸ್ತರಣೆ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಅಂಗೀಕರಿಸಲು ಬಸವರಾಜ್ ಹೊರಟ್ಟಿ ಅವರು ಆಗ್ರಹಿಸಿದ್ದಾರೆ.

ಶಾಲಾ ಮಕ್ಕಳಿಗೆ ಫುಲ್ ಖುಷ್, ದಸರಾ ರಜೆ ನವೆಂಬರ್ 1ರ ವರೆಗೆ ವಿಸ್ತರಣೆ ಸಾಧ್ಯತೆ! ಬಿಗ್ ಅಪ್ಡೇಟ್ - Kannada News

ಮೊದಲು ದಸರಾ ರಜೆ ಸರಿಯಾಗಿ ನಿಗದಿಪಡಿಸಲಾಗಿರುತ್ತಿತ್ತು ಆದರೆ ಇಂದಿನ ಜ್ಞಾನ ಇಲ್ಲದ ಅಧಿಕಾರಿಗಳು ರಜೆಯನ್ನ ತಮಗೆ ಬೇಕಾದ ಹಾಗೆ ರೂಪಿಸಿಕೊಳ್ಳುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಯ ವಿರುದ್ಧ ಬಸವರಾಜ ಹೊರಟ್ಟಿ ಕಿಡಿ ಕಾರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಿಕ್ಷಣ ವ್ಯವಸ್ಥೆ (education system) ಸರಿಯಾಗಿಲ್ಲ, ಅಧಿಕಾರಿಗಳು ರಜೆಯನ್ನು ಸರಿಯಾಗಿ ನಿರ್ಧರಿಸುತ್ತಿಲ್ಲ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ.

ಗೃಹಜ್ಯೋತಿ ಫ್ರೀ ಕರೆಂಟ್! ಇಂತಹವರಿಗೆ ಮಾತ್ರ 250 ಯೂನಿಟ್ ವರೆಗೆ ಸಿಗುತ್ತೆ ಉಚಿತ ವಿದ್ಯುತ್

ಶಿಕ್ಷಣ ಸಚಿವರಿಗೆ ಸಲಹೆ ನೀಡಿದ ಬಸವರಾಜ ಹೊರಟ್ಟಿ!

studentsವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ದಸರಾ ರಜೆಯನ್ನು ಇನ್ನಷ್ಟು ದಿನ ಮುಂದುವರಿಸಬೇಕು, ಅಂದರೆ ನವೆಂಬರ್ ಒಂದರವರೆಗೆ ದಸರಾ ರಜೆ ವಿಸ್ತರಣೆ ಮಾಡಬೇಕು ಎಂದು ಶಿಕ್ಷಣ ಇಲಾಖೆಯ ಸಚಿವ ಮಧು ಬಂಗಾರಪ್ಪ (Madhu bangarappa) ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕರೆ ಮಾಡಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ದಸರಾ ರಜೆಯನ್ನು ಒಂದು ತಿಂಗಳ ಅವಧಿಗೆ ನೀಡಲಾಗುತ್ತಿತ್ತು, ಅದರಂತೆಯೇ ಈ ವರ್ಷವೂ ಕೂಡ ದಸರಾ ರಜೆ ವಿಸ್ತರಣೆ ಮಾಡಬೇಕು ಎಂದು ಬಸವರಾಜ್ ಹೊರಟ್ಟಿ ಆಗ್ರಹಿಸಿದ್ದಾರೆ.

ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದ ಬಂಪರ್ ಗಿಫ್ಟ್; ಹೆಚ್ಚಾಗಲಿದೆ ಸಂಬಳ, ತುಟ್ಟಿ ಭತ್ಯೆ!

ಮಧ್ಯಂತರ ಅವಧಿಯ ರಜೆಯ ಪುನರ್ ಪರಿಶೀಲನೆ!

ಸ್ವಾತಂತ್ರ ನಂತರ ಮಧ್ಯಂತರ ರಜೆ ಅಂದರೆ ಅಕ್ಟೋಬರ್ ತಿಂಗಳ ದಸರಾ ರಜೆಯನ್ನು ಅಕ್ಟೋಬರ್ ಮೂರರಿಂದ ಅಕ್ಟೋಬರ್ 31 ರವರೆಗೆ 29 ದಿನಗಳ ಕಾಲ ನೀಡಲಾಗುತ್ತಿತ್ತು ಅದನ್ನು 14 ರಿಂದ 15 ದಿನಗಳ ಅವಧಿಗೆ ಇಳಿಕೆ ಮಾಡಿದ್ದು ಸರಿಯಲ್ಲ. ಹಾಗಾಗಿ ಮಧ್ಯಂತರ ಅವಧಿಯ ರಜೆಯ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಗೆ ಶಿಕ್ಷಕರ ಸಂಘ ಬರೆದಿರುವ ಪತ್ರದಲ್ಲಿ ರಜೆಯ ಬಗ್ಗೆ ಮಾಹಿತಿ ನೀಡಲಾಗಿದೆ, ಈ ಹಿಂದೆ ವರ್ಷದಲ್ಲಿ 230 ದಿನಗಳ ಕಾಲ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು.

ಆದರೆ ಈಗ ದಸರಾ ರಜೆ ಹಾಗೂ ಬೇಸಿಗೆ ರಜೆ ಕಡಿತಗೊಳಿಸಿರುವ ಪರಿಣಾಮ ವರ್ಷದಲ್ಲಿ 260 ದಿನ ಶಾಲೆಗೆ ಮಕ್ಕಳು ಬರುವಂತಾಗಿದೆ. ಇದರಿಂದಾಗಿ ಮಕ್ಕಳ ಮೇಲೆ ಒತ್ತಡ ಬೀಳುತ್ತಿದೆ ಎಂದು ಮನವಿ ಪತ್ರದಲ್ಲಿ ಬರೆಯಲಾಗಿದೆ.

ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಕೇವಲ 10 ದಿನಗಳ ಕಾಲ ರಜೆ ನೀಡಲಾಗುತ್ತದೆ. ಪ್ರೌಢ ಶಿಕ್ಷಣ ದಲ್ಲಿಯೂ ರಜೆ ಮರುಪರಿಶೀಲನೆ ಆಗಬೇಕು ಈ ರೀತಿ ದಸರಾ ರಜೆ ಕಡಿತಗೊಳಿಸಿರುವುದು ಅವೈಜ್ಞಾನಿಕ.

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿಯೂ (social media) ಕೂಡ ಶಾಲಾ ಮಕ್ಕಳಿಗೆ ನೀಡಲಾಗುವ ಮಧ್ಯಂತರ ರಜೆಯ ಮರು ಪರಿಶೀಲನೆ ಆಗಬೇಕು ತಿಂಗಳ ಕೊನೆಯವರೆಗೆ ರಜೆಯನ್ನು ವಿಸ್ತರಿಸಬೇಕು ಎಂದು ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ.

ಕೋವಿಡ್ ಅವಧಿಯ ನಂತರ ಮಕ್ಕಳಿಗೆ ನೀಡಲಾಗಿರುವ ರಜೆಯ ಅವಧಿ ಬಹಳ ಕಡಿಮೆ, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನೀಡುವ ರಜೆಗಳಲ್ಲಿಯೂ ಸಾಕಷ್ಟು ವ್ಯತ್ಯಾಸ ಮಾಡಲಾಗಿದೆ

ಇದರಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಬೀರುತ್ತಿದೆ. ಹಾಗಾಗಿ ರಜೆಗಳ ಮರುಪರಿಶೀಲನೆ ನಡೆಸಬೇಕು ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ. ಅಕ್ಟೋಬರ್ ದಸರಾ ರಜೆ 24ಕ್ಕೆ ಕೊನೆಗೊಂಡು 25ನೇ ತಾರೀಖಿನಿಂದ ಶಾಲೆ ಮರ ಪ್ರಾರಂಭ ಆಗುತ್ತದೆಯೋ ಅಥವಾ ಮನವಿಗಳನ್ನು ಪರಿಶೀಲಿಸಿ ಸರ್ಕಾರ ನವೆಂಬರ್ 1 ರವರೆಗೆ ರಜೆಯನ್ನು ವಿಸ್ತರಣೆ ಮಾಡುತ್ತದೆಯೋ ಎಂಬ ವಿಚಾರದ ಬಗ್ಗೆ ನಾಳೆ ಸ್ಪಷ್ಟನೆ ಸಿಗಲಿದೆ.

Dussehra holiday likely to be extended till November 1

Follow us On

FaceBook Google News

Dussehra holiday likely to be extended till November 1