ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದ ಬಂಪರ್ ಗಿಫ್ಟ್; ಹೆಚ್ಚಾಗಲಿದೆ ಸಂಬಳ, ತುಟ್ಟಿ ಭತ್ಯೆ!

ರಾಜ್ಯ ಸರ್ಕಾರ (state government) ಈ ಬಾರಿ ಹಬ್ಬದ ನಿಮಿತ್ತ ರಾಜ್ಯದ ಜನತೆಗೆ ಒಂದಲ್ಲ ಒಂದು ರೀತಿಯ ಯೋಜನೆಯ ಲಾಭವನ್ನು ನೀಡುತ್ತಿದೆ, ಈಗಾಗಲೇ ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಎರಡನೇ ಕಂತಿನ ಹಣ ಬಿಡುಗಡೆ ಆಗಿರುವುದರ ಹಿನ್ನೆಲೆಯಲ್ಲಿ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿಯೂ ಮೂರು ಕಂತಿನ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ.
ಇದೆಲ್ಲ ಖುಷಿಯ ನಡುವೆ ಇದೀಗ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (Government employees DA increased) ಹೆಚ್ಚಳ ಮಾಡುವ ಗುಡ್ ನ್ಯೂಸ್ ಅನ್ನು ಕೂಡ ನೀಡಿದೆ.
ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಮತ್ತೊಂದು ಕೊಡುಗೆ! ಬಡ್ಡಿಯೇ ಇಲ್ಲದೆ 2 ಲಕ್ಷ ಸಾಲ ಸೌಲಭ್ಯ
ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ತೀರ್ಮಾನ?
ಹೌದು, ಬಹುದಿನಗಳಿಂದ ನಿರೀಕ್ಷೆ ಮಾಡಲಾಗಿದ್ದ ಸರ್ಕಾರಿ ನೌಕರರ ತುಟ್ಟಿಭತ್ಯೆ (DA) ಹೆಚ್ಚಳದ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಅಪ್ಡೇಟ್ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿಗೆ ಬಂಪರ್ ಗಿಫ್ಟ್ (festival gift) ನೀಡಲು ಸರ್ಕಾರ ಮುಂದಾಗಿದೆ.
ಎಷ್ಟು ಸಿಗಲಿದೆ ತುಟ್ಟಿ ಭತ್ಯೆ?
ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ದೀಪಾವಳಿಗೆ ತುಟ್ಟಿ ಭತ್ಯೆ ಹೆಚ್ಚಳದ ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯದ ಸರ್ಕಾರಿ ನೌಕರರಿಗೆ 3.75% ನಷ್ಟು ತುಟ್ಟಿ ಭತ್ಯೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಅದೇ ರೀತಿ UGC, AICTE, ICAR ವೇತನ ಶ್ರೇಣಿಗಳ ಬೋಧಕ ಸಿಬ್ಬಂಧಿ (teachers) ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿ ಭತ್ಯೆ ಯನ್ನೂ ಹೆಚ್ಚಿಸಲು ತೀರ್ಮಾನಿಸಲಾಗಿದೆ
4% ವರೆಗೆ ಅಧಿಕವಾಗುವ ನಿರೀಕ್ಷೆ ಇದೆ. ಇನ್ನು ರಾಜ್ಯ ಸರ್ಕಾರಿ ನೌಕರರಿಗೆ ಎಲ್ಲರಿಗೂ ತುಟ್ಟಿ ಭತ್ಯೆ ಪ್ರಶ್ನೆಗೆ ಇಲ್ಲಿದೆ ಉತ್ತರ. ಸರ್ಕಾರದ ಕೆಲವು ಶರತ್ತುಗಳ ಆಧಾರದ ಮೇಲೆ ತುಟ್ಟಿ ಭತ್ಯೆ ನಿಗದಿ ಪಡಿಸಲಾಗುವುದು.
ಅವಿವಾಹಿತ ಮಹಿಳೆಯರಿಗೂ ಸಿಗಲಿದೆ ₹500 ರೂಪಾಯಿ; ಹೊಸ ಯೋಜನೆಗೆ ಇಂದೇ ಅಪ್ಲೈ ಮಾಡಿ
ಯಾರಿಗೆ ಹೆಚ್ಚಳವಾಗಲಿದೆ ತುಟ್ಟಿ ಭತ್ಯೆ?

ಇದರ ಜೊತೆಗೆ ಜಿಲ್ಲಾ ಪಂಚಾಯತ ಪೂರ್ಣಾವಧಿಯ ನೌಕರರಿಗೆ (full time employment) ಹಾಗೂ ವೇತನ ಶ್ರೇಣಿಯಲ್ಲಿರುವ ಬೋಧಕ ಸಿಬ್ಬಂದಿಗಳಿಗೆ ಪೂರ್ಣಾವಧಿಯ ಶಿಕ್ಷಕರಿಗೆ ಈ ಹೊಸ ತುಟ್ಟಿ ಭತ್ಯೆ ಹೆಚ್ಚಳ ಅನ್ವಯವಾಗುವುದು.
ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕಲಿಕಾ ಶ್ರೇಣಿಯಲ್ಲಿ ಇರುವ ಪೂರ್ಣಾವಧಿಯ ಬೋಧಕ ಸಿಬ್ಬಂದಿಗಳಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗುವುದು.
ಮಂಗಳಮುಖಿಯರಿಗೂ ಒಲಿದು ಬಂದ ಗೃಹಲಕ್ಷ್ಮಿ ಯೋಜನೆ ಭಾಗ್ಯ; ಸರ್ಕಾರದ ಮಹತ್ವದ ನಿರ್ಧಾರ
ಐವತ್ತು ಪೈಸೆ ಗಿಂತ ಕಡಿಮೆ ಭಿನ್ನಾಂಕವನ್ನು ಕಡೆಗಣಿಸಬೇಕು ಹಾಗೂ ಅದನ್ನು ರೂಪಾಯಿಗೆ ಹೆಚ್ಚಿಸಬೇಕು ಎಂದು ಸರ್ಕಾರ ತೀರ್ಮಾನಿಸಿದೆ. ಒಟ್ಟಿನಲ್ಲಿ ಸರ್ಕಾರಿ ನೌಕರರಿಗೆ ಸಲ್ಲಬೇಕಾಗಿರುವ 7ನೇ ವೇತನ ಶ್ರೇಣಿಯ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಹೊರಡಿಸಿರುವ ಈ ತುಟ್ಟಿ ಭತ್ಯೆ ವಿಚಾರ ಸರ್ಕಾರಿ ನೌಕರರ ಮುಖದಲ್ಲಿ ಮಂದಹಾಸ ಮೂಡಿಸಿದೆ.
Karnataka Government employees DA increased







