ಅವಿವಾಹಿತ ಮಹಿಳೆಯರಿಗೂ ಸಿಗಲಿದೆ ₹500 ರೂಪಾಯಿ; ಹೊಸ ಯೋಜನೆಗೆ ಇಂದೇ ಅಪ್ಲೈ ಮಾಡಿ
ಮಹಿಳೆಯರಿಗೆ ಅನುಕೂಲವಾಗುವಂತಹ ಶಕ್ತಿ ಯೋಜನೆ (Shakti Yojana) ಹಾಗೂ ಗೃಹಲಕ್ಷ್ಮಿ (Gruha lakshmi scheme) ಯೋಜನೆ ಜಾರಿಗೆ ಬಂದಿದ್ದು, ಈಗ ಮನಸ್ವಿನಿ ಯೋಜನೆ (Manaswini scheme) ಕೂಡ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗಿದೆ
ಅಶಕ್ತ ಜನರಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಸ್ವಾವಲಂಬಿ ಬದುಕಿಗೆ (independent life) ಬೆಂಬಲ ನೀಡುವುದು ಸರ್ಕಾರದ ಉದ್ದೇಶ, ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸಾಕಷ್ಟು ಉಪಯೋಗಕಾರಿ ಯೋಜನೆಗಳನ್ನು (schemes) ಸರ್ಕಾರ ಜಾರಿಗೆ ತಂದಿದೆ.
ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು (guarantee schemes) ಘೋಷಿಸಿತ್ತು. ಅದೇ ರೀತಿ ಮಹಿಳೆಯರಿಗೆ ಅನುಕೂಲವಾಗುವಂತಹ ಶಕ್ತಿ ಯೋಜನೆ (Shakti Yojana) ಹಾಗೂ ಗೃಹಲಕ್ಷ್ಮಿ (Gruha lakshmi scheme) ಯೋಜನೆ ಇಂದು ಜಾರಿಗೆ ಬಂದಿವೆ.
ಎರಡು ಸಾವಿರ ರೂಪಾಯಿಗಳನ್ನು ವಿವಾಹಿತ ಮಹಿಳೆಯರಿಗೆ ಅಂದರೆ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನೀಡಲಾಗುತ್ತಿದೆ. ಇದರ ಜೊತೆಗೆ ಮದುವೆ ಆಗದೆ ಇರುವವರಿಗೂ ಕೂಡ ಹೊಸದಾಗಿರುವ ಯೋಜನೆ ಒಂದನ್ನು ಜಾರಿಗೆ ತರಲಾಗಿದೆ.
ಮಂಗಳಮುಖಿಯರಿಗೂ ಒಲಿದು ಬಂದ ಗೃಹಲಕ್ಷ್ಮಿ ಯೋಜನೆ ಭಾಗ್ಯ; ಸರ್ಕಾರದ ಮಹತ್ವದ ನಿರ್ಧಾರ
ಮನಸ್ವಿನಿ ಯೋಜನೆ! (Manaswini scheme)
40 ರಿಂದ 65 ವಯಸ್ಸಿನ ಮಹಿಳೆಯರು ಮದುವೆ ಆಗದೆ ಹಾಗೆ ಉಳಿದಿದ್ದರೆ ಅಥವಾ ಪತಿಯಿಂದ ವಿಚ್ಛೇದಿತರಾಗಿದ್ದರೆ (divorced) ಅಂತವರಿಗೆ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ. ಕಳೆದ ಬಾರಿ ಬಜೆಟ್ (budget) ಮಂಡನೆಯ ಸಮಯದಲ್ಲಿ ಮಹಿಳೆಯರ ಸವಲೀಕರಣಕ್ಕಾಗಿ ಸರ್ಕಾರ ಸಾಕಷ್ಟು ಹಣವನ್ನು ಮೀಸಲಿಟ್ಟಿದೆ.
ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ 4,000 ಕೋಟಿಗೂ ಅಧಿಕಾರವನ್ನು ಮೀಸಲಿಡಲಾಗಿದೆ. ಅದೇ ರೀತಿ ಸ್ತ್ರೀಶಕ್ತಿ ಗುಂಪುಗಳಿಗೆ ಎರಡು ಲಕ್ಷ ರೂಪಾಯಿಗಳವರೆಗೆ ಬಡ್ಡಿ ರಹಿತ ಸಾಲವನ್ನು (Loan without interest) ನೀಡಲು ಸರ್ಕಾರ ಮುಂದಾಗಿದೆ.
ಇದರ ಮೂಲಕ ಸಾಕಷ್ಟು ಮಹಿಳೆಯರು ತಮ್ಮದೇ ಆಗಿರುವ ಸ್ವ ಉದ್ದಿಮೆ ಆರಂಭಿಸಬಹುದು, ಗುಡಿ ಕೈಗಾರಿಕೆಯಂತಹ ವೃತ್ತಿ (own business) ಜೀವನವನ್ನು ಆಯ್ದುಕೊಂಡು ತಮ್ಮ ಕುಟುಂಬದವರಿಗೂ ಕೂಡ ಆರ್ಥಿಕವಾಗಿ ಬೆನ್ನೆಲುಬಾಗಿ ನಿಲ್ಲಬಹುದು.
ಸರ್ಕಾರದ ಸಬ್ಸಿಡಿ ಸಾಲದ ಯೋಜನೆ; ಇಂತಹವರಿಗೆ ಸಿಗಲಿದೆ 5 ಲಕ್ಷ ಸಾಲಕ್ಕೆ 2.5 ಲಕ್ಷ ಸಬ್ಸಿಡಿ
ಇದೀಗ ಮನಸ್ವಿನೀ ಯೋಜನೆಯ ಮೂಲಕ ವಿಚ್ಛೇದಿತ ಮಹಿಳೆಯರು ಹಾಗೂ ಮದುವೆ ಆಗದೆ ಉಳಿದಿರುವ 40 ರಿಂದ 64 ವಯಸ್ಸಿನ ಮಹಿಳೆಯರಿಗೆ 500 ರೂಪಾಯಿಗಳನ್ನು ಪ್ರತಿ ತಿಂಗಳು ಉಚಿತವಾಗಿ ನೀಡಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿ ಯಾವುದೇ ಮಹಿಳೆ ಆರ್ಥಿಕವಾಗಿ (financial support) ಸಮಸ್ಯೆ ಅನುಭವಿಸಬಾರದು ಎನ್ನುವುದು ಸರ್ಕಾರದ ಉದ್ದೇಶ.
2023ರ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಮನಸ್ವಿನಿ ಯೋಜನೆಗಾಗಿ 138 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.
ನಮ್ಮ ಸರ್ಕಾರ ಮಹಿಳೆಯರ ಸ್ವಾವಲಂಬನೆ ಜೀವನವನ್ನು ಬೆಂಬಲಿಸುತ್ತದೆ ನವರಾತ್ರಿಯ ಶುಭ ಸಂದರ್ಭದಲ್ಲಿ ಈ ಯೋಜನೆ ಮೂಲಕ ಕೂಡ ಮಹಿಳೆಯರಿಗೆ ಹೆಚ್ಚು ಬೆಂಬಲ ನೀಡುವುದು ಸರ್ಕಾರದ ಉದ್ದೇಶ” ಎಂದು ತಿಳಿಸಿದ್ದಾರೆ. ಸದ್ಯ ಮನಸ್ವಿನಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು ಫಲಾನುಭವಿ ಮಹಿಳೆಯರು ಈ ಯೋಜನೆಯ ಮೂಲಕ ಪ್ರತಿ ತಿಂಗಳು 500 ರೂಪಾಯಿಗಳನ್ನು ಪಡೆದುಕೊಳ್ಳಬಹುದು.
ಇನ್ಮುಂದೆ ಫ್ರೀ ಅಕ್ಕಿ ಸಿಗುತ್ತಾ? ಇಲ್ಲವೇ ಹಣ ಸಿಗುತ್ತಾ? ಅನ್ನಭಾಗ್ಯ ಯೋಜನೆಯ ಕುರಿತು ಬಿಗ್ ಅಪ್ಡೇಟ್
500 Rupees Per Month For Unmarried and Divorced Women from Manaswini Yojana