ಕರ್ನಾಟಕ ರಾಜ್ಯ ಸರ್ಕಾರ (Karnataka state government) ಜಾರಿಗೆ ತಂದಿರುವ 4 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ (Annabhagya Yojana) ಹಾಗೂ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಬಗ್ಗೆ ದಿನದಿಂದ ದಿನಕ್ಕೆ ಒಂದಲ್ಲ ಒಂದು ರೀತಿಯ ಅಪ್ಡೇಟ್ಗಳು (update) ಸಿಗುತ್ತವೆ.

ಬಹುಶಃ ಈ ಯೋಜನೆಗೆ ಸಂಬಂಧಪಟ್ಟ ಹಾಗೆ ಜನರು ಮಾತ್ರವಲ್ಲದೆ ಸರ್ಕಾರವು ಕೂಡ ಸಾಕಷ್ಟು ಗೊಂದಲ ಹಾಗೂ ಸವಾಲುಗಳನ್ನು ಎದುರಿಸುವಂತಹಾಗಿದೆ.

BPL Ration Card

ಮೊಟ್ಟ ಮೊದಲ ಬಾರಿಗೆ ನೇರವಾಗಿ ಜನರ ಖಾತೆಗೆ (Bank Account) ಹಣ ವರ್ಗಾವಣೆ (Money Transfer) ಮಾಡುವ ಯೋಜನೆ ಒಂದನ್ನು ರಾಜ್ಯ ಸರ್ಕಾರ ಆರಂಭಿಸಿದ್ದು, ಈ ಪ್ರಕ್ರಿಯೆಯಲ್ಲಿ 100% ಸಕ್ಸಸ್ ಆಗಿಲ್ಲ ಎನ್ನಬಹುದು.

ಕೊನೆಗೂ ಜಮಾ ಆಗಿದೆ ಎರಡನೇ ಕಂತಿನ ಹಣ; ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಅನ್ನಭಾಗ್ಯ ಯೋಜನೆಯ ಬಗ್ಗೆ ಮತ್ತೆ ಹೊಸ ಅಪ್ಡೇಟ್

ಇತ್ತೀಚಿನ ದಿನಗಳಲ್ಲಿ ಅನ್ನಭಾಗ್ಯ ಯೋಜನೆಗೆ ಸಂಬಂಧಪಟ್ಟಂತೆ ಸೋಶಿಯಲ್ ಮೀಡಿಯಾದಲ್ಲಿಯೂ (social media) ಕೂಡ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಮುಖ್ಯ ಕಾರಣ ಸರ್ಕಾರವು ದಿನದಿಂದ ದಿನಕ್ಕೆ ತನ್ನ ನಿರ್ಧಾರವನ್ನು ಬದಲಾಯಿಸುತ್ತಿರುವುದು.

ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿರುವ ಕೆಎಚ್ ಮುನಿಯಪ್ಪ, (K.H.Muniyappa) ಸಪ್ಟೆಂಬರ್ ತಿಂಗಳಿನಿಂದ ಅಕ್ಕಿಯ ಬದಲು ಹಣ ವರ್ಗಾವಣೆ (DBT) ಮಾಡುವ ಕೆಲಸವನ್ನು ನಿಲ್ಲಿಸಲಾಗುವುದು. ಅಂದರೆ ಹತ್ತು ಕೆಜಿ ಅಕ್ಕಿಯನ್ನೇ ಫಲಾನುಭವಿಗಳಿಗೆ ನೀಡಲಾಗುವುದು ಎಂದು ತಿಳಿಸಿದ್ದರು.

ಇತ್ತೀಚಿಗೆ ಬಂದಿರುವ ಮಾಹಿತಿಯ ಪ್ರಕಾರ ರಾಜ್ಯ ಸರ್ಕಾರಕ್ಕೆ ಇದುವರೆಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಒದಗಿಸಲು ಸಾಧ್ಯವಾಗಿಲ್ಲ.

ಈಗಾಗಲೇ ರಾಜ್ಯದ ಕೆಲವು ಬರಪೀಡಿತ ಪ್ರದೇಶಗಳ ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಕುಟುಂಬಕ್ಕೆ ಹಣದ ಬದಲು ಹತ್ತು ಕೆಜಿ ಅಕ್ಕಿಯನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

ಇನ್ನೂ ಸಾಕಷ್ಟು ಜನ ತಮಗೆ ಹಣ ಬೇಡ ಅಕ್ಕಿಯಲ್ಲಿ ಕೊಡಿ ಎಂದು ಸಮೀಕ್ಷೆಯಲ್ಲಿ ಕೂಡ ತಿಳಿಸಿದ್ದರು. ಆದರೆ ಅದ್ಯಾಕೋ ನುಡಿದಂತೆ ನಡೆಯುವ ಸರ್ಕಾರಕ್ಕೆ ಅಕ್ಕಿ ಹೊಂದಿಸುವುದು ಮಾತ್ರ ಕಷ್ಟ ಆಗುತ್ತಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ಫಲಾನುಭವಿಗಳ ಖಾತೆಗೆ ಅಕ್ಕಿಯ ಬದಲು ಹಣ ಹಾಕುವ ಪ್ರಕ್ರಿಯೆ ಯಥಾ ಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿರುವವರಿಗೆ ಬಿಗ್ ಅಪ್ಡೇಟ್! ಕಾರ್ಡ್ ವಿತರಣೆಗೆ ಕಟ್ಟುನಿಟ್ಟಿನ ಕ್ರಮ

ಡಿ ಬಿ ಟಿ ಮುಂದುವರಿಕೆ!

Annabhagya Schemeಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯ ಬದಲು ಹಣ ಕೊಡುತ್ತಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಒಂದು ವೇಳೆ ಅಕ್ಕಿಯನ್ನು ಒದಗಿಸಲು ಸಾಧ್ಯವಾಗದೆ ಇದ್ದರು ಹಣ ಕೊಡುವ ಬದಲು ಐದು ಕೆಜಿ ಅಕ್ಕಿ ತೂಕದ ಪೌಷ್ಟಿಕ ಆಹಾರ (nutrient food) ವನ್ನು ಕೊಡುವುದರ ಬಗ್ಗೆ ಚರ್ಚೆ ನಡೆಸಲಾಗಿತ್ತು.

ಈ ಬಗ್ಗೆ ಸಚಿವ ಚೆಲುವರಾಯಸ್ವಾಮಿ (cheluvaraya Swamy) ವಿಧಾನಸೌಧ ಸಭೆಯಲ್ಲಿ ಮಾತನಾಡಿದರು. ಆದರೆ ಈಗ ಸರ್ಕಾರ ಇದಕ್ಕೂ ಕೂಡ ಸಿದ್ಧವಿಲ್ಲ. ಫಲಾನುಭವಿಗಳಿಗೆ ಅಕ್ಕಿಯ ಬದಲು ಹಣವನ್ನೇ ಮುಂದಿನ ತಿಂಗಳು ಕೂಡ ಅವರ ಖಾತೆಗೆ ನೇರವಾಗಿ ಜಮಾ ಮಾಡುವುದಾಗಿ ತಿಳಿಸಿದೆ.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಈಗಾಗಲೇ ಮೂರು ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಸಪ್ಟೆಂಬರ್ ತಿಂಗಳಿನ ಕಂತಿನ ಹಣ ಬಿಡುಗಡೆ ಆಗಿದ್ದು ಇನ್ನೂ ಹಲವರ ಖಾತೆಗೆ ವರ್ಗಾವಣೆ ಆಗಬೇಕಿದೆ.

ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ! ರಾಜ್ಯ ಸರ್ಕಾರದಿಂದ ಹಬ್ಬಕ್ಕೆ ಬಂಪರ್ ಗಿಫ್ಟ್

ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಿನಿಂದಾದರೂ ಹಣದ ಬದಲು ಅಕ್ಕಿಯೇ ತಮಗೆ ಸಿಗುತ್ತದೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ. ಹಣದ ಬದಲು ಅಕ್ಕಿಯನ್ನು ಒದಗಿಸುವ ಬಗ್ಗೆ ಅಥವಾ ಪೌಷ್ಟಿಕ ಆಹಾರವನ್ನು ನೀಡುವುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿಲ್ಲ. ಹಾಗಾಗಿ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ, ಒಬ್ಬ ವ್ಯಕ್ತಿಗೆ 170 ರೂ.ಗಳು ಮುಂದಿನ ತಿಂಗಳು ಕೂಡ ನೇರವಾಗಿ ಖಾತೆಗೆ ಸಂದಾಯವಾಗಲಿದೆ.

Karnataka Govt Big Update on Annabhagya Yojana Free Rice and Money DBT