Karnataka NewsBangalore News

ಕೊನೆಗೂ ಜಮಾ ಆಗಿದೆ ಎರಡನೇ ಕಂತಿನ ಹಣ; ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ರಾಜ್ಯದಲ್ಲಿ ಜನರಿಗೆ ಹೆಚ್ಚು ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ (government schemes) ತರಲಾಗಿದ್ದು, ಅವುಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruha Lakshmi scheme ) ಕೂಡ ಒಂದು.

ರಾಜ್ಯದಲ್ಲಿರುವ ಕೋಟ್ಯಾಂತರ ಗೃಹಿಣಿಯರು ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗಿದ್ದಾರೆ. ಅಗಸ್ಟ್ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ (Bank Account) ವರ್ಗಾವಣೆ ಆಗುತ್ತಿದೆ.

The second installment is finally deposited, Check Gruha Lakshmi Yojana Status

ಆದಾಗ್ಯೂ ಅರ್ಜಿ ಹಾಕಿದ ಎಲ್ಲಾ ಮಹಿಳೆಯರಿಗೂ ಹಣ ವರ್ಗಾವಣೆ (direct banker transfer) ಆಗಿದೆಯೇ ಎನ್ನುವ ಪ್ರಶ್ನೆ ಬಂದಾಗ, ವರ್ಗಾವಣೆ ಆಗಿಲ್ಲ ಇನ್ನು ಪ್ರಕ್ರಿಯೆ (process) ನಡೆಯುತ್ತಿದೆ ಎಂದು ಸರ್ಕಾರ ಉತ್ತರಿಸುತ್ತಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿರುವವರಿಗೆ ಬಿಗ್ ಅಪ್ಡೇಟ್! ಕಾರ್ಡ್ ವಿತರಣೆಗೆ ಕಟ್ಟುನಿಟ್ಟಿನ ಕ್ರಮ

ಆದರೆ ಕೆಲವು ಮಹಿಳೆಯರಿಗೆ ಸಿಕ್ತು ಹಬ್ಬದ ಗಿಫ್ಟ್!

ಹೌದು, ಮೊದಲ ಕಂತಿನ ನ ಹಣ ಇನ್ನೂ ಹಲವರಿಗೆ ಬಿಡುಗಡೆ ಆಗಬೇಕಿದೆ. ಆದರೆ ಯಾಕೆ ಕೆಲವರಿಗೆ ಇನ್ನೂ ಹಣ ಬಿಡುಗಡೆ ಆಗಿಲ್ಲ ಎನ್ನುವುದಕ್ಕೆ ಸರ್ಕಾರ ಈಗಾಗಲೇ ಅಂಕಿ ಅಂಶಗಳ (statistics) ಸಮೇತವಾಗಿ ಕಾರಣ ನೀಡಿದೆ.

ಇನ್ನು ಮಹಿಳೆಯರ ಖಾತೆ ಆಧಾರ್ ಸೀಡಿಂಗ್ (Aadhaar seeding) ಎನ್ ಪಿಸಿಐ (NPCI) ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ. ಅದೇ ರೀತಿ ಹಲವು ಮಹಿಳೆಯರು ಬ್ಯಾಂಕ್ ಖಾತೆ (bank account) ಹೊಂದಿದ್ದರು ಕೂಡ ಆ ಖಾತೆಗಳು ಆಕ್ಟಿವ್ (active) ಆಗಿಲ್ಲ. ಈ ಹಿನ್ನೆಲೆಯಲ್ಲಿ ಅಂತವರ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.

ಎರಡನೇ ಕಂತಿನ ಹಣ ಬಿಡುಗಡೆ ಆಗಿದೆಯೇ?

ಸರ್ಕಾರ ಈಗಾಗಲೇ ತಿಳಿಸಿರುವಂತೆ, ಬ್ಯಾಂಕ್ ಗೆ ಎರಡನೇ ಕಂತಿನ ಹಣವನ್ನು DBT ಮಾಡಲಾಗಿತ್ತು. ಆದರೆ ಫಲಾನುಭವಿಗಳ ಖಾತೆಗೆ ಮಾತ್ರ ಜಮಾ ಆಗಿರಲಿಲ್ಲ ಇದಕ್ಕೆ ಮುಖ್ಯವಾದ ಕಾರಣ ಮೊದಲನೇ ಕಂತಿನ ಹಣ ಇನ್ನು ಎಲ್ಲಾ ಮಹಿಳೆಯರಿಗೂ ಡಿಬಿಟಿ ಆಗಿರಲಿಲ್ಲ.

ಆದರೆ ಸರ್ಕಾರ ನವರಾತ್ರಿ ಗಿಫ್ಟ್ ಅನ್ನು ಮಹಿಳೆಯರಿಗೆ ನೀಡಿದ್ದು ಈಗಾಗಲೇ ಎರಡನೇ ಕಂತಿನ ಹಣ (2nd installment) ಕೂಡ ಬಿಡುಗಡೆ ಆಗಿದೆ. ಹಲವರ ಖಾತೆಗೆ 2ನೇ ಕಂತಿನ ಹಣ ಜಮಾ ಆಗಿದ್ದು ಸರ್ಕಾರದಿಂದ ಮೆಸೇಜ್ (SMS) ಕೂಡ ಬಂದಿದೆ.

ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ! ರಾಜ್ಯ ಸರ್ಕಾರದಿಂದ ಹಬ್ಬಕ್ಕೆ ಬಂಪರ್ ಗಿಫ್ಟ್

ಸರ್ಕಾರದಿಂದ ಸಿಕ್ಕಿದೆ ಸಂದೇಶ

Gruha Lakshmi Yojaneಹೌದು, ಸರ್ಕಾರದಿಂದ 2ನೇ ಕಂತಿನ ಹಣ ಜಮಾ ಆಗಿರುವುದಕ್ಕೆ ಕೆಲವರಿಗೆ ಸಂದೇಶ ಬಂದಿದೆ, ಅಲ್ಲದೆ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ (bank passbook entry) ಎಂಟ್ರಿ ಮಾಡಿಸಿದಾಗ ಜಮಾ ಆಗಿರುವುದು ತಿಳಿದು ಬಂದಿದೆ.

ಅಗಸ್ಟ್ 30 ರ ನಂತರ ಮೊದಲಿಗೆ ಯಾರೆಲ್ಲರ ಖಾತೆಗೆ ಹಣ ಜಮಾ ಆಗಿತ್ತೋ ಅಂತವರಿಗೆ ಎರಡನೇ ಕಂತಿನ ಹಣ ಕೂಡ ಜಮಾ ಆಗಿದೆ. ಆದರೆ ಇದು ಒಂದೇ ದಿನದಲ್ಲಿ ನಡೆಯುವ ಪ್ರಕ್ರಿಯೆ ಅಲ್ಲ, ಹಾಗಾಗಿ ಪ್ರತಿದಿನ ಇಂತಿಷ್ಟು ಜನರಿಗೆ ಎಂದು ಹಣ ಜಮಾ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಅಗಸ್ಟ್ ನಂತರ ಅರ್ಜಿ ಹಾಕಿದವರಿಗೆ ಬಿಗ್ ಅಪ್ಡೇಟ್! ಯಾವಾಗ ಬರಲಿದೆ ಹಣ ಗೊತ್ತಾ

ಬ್ಯಾಂಕುಗಳಿಗೂ ಕೂಡ ಹಣ ರಿಲೀಸ್ ಮಾಡಲು ಅದರದ್ದೇ ಆದ ಮಿತಿಗಳು ಇರುತ್ತವೆ. ಹಾಗಾಗಿ ದಿನದಲ್ಲಿ ಎರಡು, ಮೂರು ಲಕ್ಷ ಮಹಿಳೆಯರಿಗೆ ಮಾತ್ರ ಡಿ ಬಿ ಟಿ ಮಾಡಲಾಗುತ್ತದೆ. ಹಾಗಾಗಿ ಯಾವ ಮಹಿಳೆಯರು ಕೂಡ ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ, ಪ್ರತಿಯೊಬ್ಬರ ಖಾತೆಗೂ ಹಣ ಜಮಾ ಆಗುತ್ತದೆ.

ಇನ್ನು ಮೊದಲ ಕಂತಿನ ಹಣ ಯಾರಿಗೆ ಜಮಾ ಆಗಿಲ್ಲವೋ ಅಂತವರ ಖಾತೆ ಸರಿ ಹೋದರೆ ಅವರ ಖಾತೆಗೂ ಕೂಡ ಹಣ ಜಮಾ ಆಗುತ್ತಿದೆ. ಅದು ಅಲ್ಲದೆ ತಡವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೂ ಕೂಡ ರೂ.2000ಗಳನ್ನು ಅಕ್ಟೋಬರ್ (October) ತಿಂಗಳಿನಲ್ಲಿ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi Hebbalkar) ತಿಳಿಸಿದ್ದಾರೆ.

The second installment is finally deposited, Check Gruha Lakshmi Yojana Status

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories