ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿರುವವರಿಗೆ ಬಿಗ್ ಅಪ್ಡೇಟ್! ಕಾರ್ಡ್ ವಿತರಣೆಗೆ ಕಟ್ಟುನಿಟ್ಟಿನ ಕ್ರಮ

ಸೇವಾ ಕೇಂದ್ರಗಳಲ್ಲಿ ಶೇಕಡ 10% ನಷ್ಟು ಕೂಡ ತಿದ್ದುಪಡಿ (ration card correction) ಮಾಡಲು ಸಾಧ್ಯವಾಗಿರಲಿಲ್ಲ, ಇದಕ್ಕೆ ಮುಖ್ಯ ಕಾರಣ ಸರ್ವರ್ ಸಮಸ್ಯೆ (server problem).

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ (Karnataka government guarantee schemes) ರೇಷನ್ ಕಾರ್ಡ್ (ration card) ಎನ್ನುವುದು ಕಡ್ಡಾಯವಾಗಿ ಬೇಕಾಗಿರುವ ದಾಖಲೆ ಎನ್ನುವುದು ಎಲ್ಲರಿಗೂ ಗೊತ್ತು

ಆದರೆ ಎಲ್ಲರ ಬಳಿಯೂ ರೇಷನ್ ಕಾರ್ಡ್ ಇಲ್ಲ ಅಥವಾ ಇದ್ದರೂ ಆ ರೇಷನ್ ಕಾರ್ಡ್ ನಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಾಗಿರುವುದು ಅನಿವಾರ್ಯ, ಇಂತಹ ಸಂದರ್ಭದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಕೂಡ ಸರ್ಕಾರ ಈಗಾಗಲೇ ಮೂರು ಬಾರಿ ಅವಕಾಶಗಳನ್ನು ಮಾಡಿಕೊಟ್ಟಿದೆ.

ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ! ರಾಜ್ಯ ಸರ್ಕಾರದಿಂದ ಹಬ್ಬಕ್ಕೆ ಬಂಪರ್ ಗಿಫ್ಟ್

ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿರುವವರಿಗೆ ಬಿಗ್ ಅಪ್ಡೇಟ್! ಕಾರ್ಡ್ ವಿತರಣೆಗೆ ಕಟ್ಟುನಿಟ್ಟಿನ ಕ್ರಮ - Kannada News

ಮತ್ತೆ ತಿದ್ದುಪಡಿಗೆ ಅವಕಾಶ!

ಸೆಪ್ಟೆಂಬರ್ ತಿಂಗಳಿನಿಂದಲೂ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿ ಕೊಟ್ಟಿತ್ತು, ಅದರಲ್ಲೂ ಈ ಬಾರಿ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಮೂರು ವಲಯಗಳಾಗಿ ವಿಂಗಡಿಸಿ ಎಲ್ಲಾ ಪ್ರದೇಶಗಳಿಗೂ ಆಯಾ ದಿನಾಂಕವನ್ನು ಫಿಕ್ಸ್ ಮಾಡಿ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿತ್ತು

ಆದರೆ ಸೇವಾ ಕೇಂದ್ರಗಳಲ್ಲಿ ಶೇಕಡ 10% ನಷ್ಟು ಕೂಡ ತಿದ್ದುಪಡಿ (ration card correction) ಮಾಡಲು ಸಾಧ್ಯವಾಗಿರಲಿಲ್ಲ, ಇದಕ್ಕೆ ಮುಖ್ಯ ಕಾರಣ ಸರ್ವರ್ ಸಮಸ್ಯೆ (server problem). ಇದರಿಂದಾಗಿ ಸರ್ಕಾರ 19, 20, 21 ಅಕ್ಟೋಬರ್ ಕೆಲವು ಪ್ರದೇಶಗಳಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ.

ಇಂಥವರಿಗೆ ಸಿಗೋದಿಲ್ಲ ರೇಷನ್!

ಇನ್ನು ರೇಷನ್ ಕಾರ್ಡ್ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಂದಾಗಿದೆ, ಈಗಾಗಲೇ ಆಹಾರ ಇಲಾಖೆ ಸಾರ್ವಜನಿಕರಿಗೆ ಮಾಹಿತಿಯನ್ನು ಕೂಡ ನೀಡಿದೆ.

ರೇಷನ್ ಕಾರ್ಡ್ ಹೊಂದಿದ್ದು ಕಳೆದ ಆರು ತಿಂಗಳಿನಿಂದ ಯಾರು ಪಡಿತರ ತೆಗೆದುಕೊಂಡಿಲ್ಲವೋ ಅಂತವರ ಕಾರ್ಡ್ ಅನ್ನು ನೇರವಾಗಿ ಅಮಾನ್ಯಗೊಳಿಸಲಾಗುವುದು. (Ration card cancellation)

ರೇಷನ್ ಕಾರ್ಡ್ ಅನ್ನು ನೀಡುವುದು, ಜನರ ಹಸಿವನ್ನು ನೀಗಿಸಲು, ಪಡಿತರ ಪಡೆದುಕೊಳ್ಳುವ ಸಲುವಾಗಿ.. ಆದರೆ ಅದೆಷ್ಟೋ ಜನ ಕೇವಲ ಸರ್ಕಾರದ ಇತರ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದಕ್ಕೆ ರೇಷನ್ ಕಾರ್ಡ್ ಹೊಂದಿರುತ್ತಾರೆ.. ಇದು ಸರಿಯಲ್ಲ ಈ ಕಾರಣದಿಂದ, ಸರ್ಕಾರ ಈಗಾಗಲೇ ಆಹಾರ ಇಲಾಖೆಗೂ ಕೂಡ ಮಾಹಿತಿ ನೀಡಿದ್ದು ಯಾರು ನಕಲಿ ರೇಷನ್ ಕಾರ್ಡ್ ಹೊಂದಿರುತ್ತಾರೆ ಅಥವಾ ಬಿಪಿಎಲ್ ಕಾರ್ಡ್ (BPL card) ಹೊಂದಿದ್ದು ಕೂಡ ಕಳೆದ ಆರು ತಿಂಗಳಿನಿಂದ ಪಡಿತರ ಪಡೆದುಕೊಂಡಿಲ್ಲವೊ ಅಂತವರ ರೇಷನ್ ಕಾರ್ಡ್ ಅನ್ನು ಕೂಡಲೇ ರದ್ದು ಪಡಿಸುವಂತೆ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆಗೆ ಅಗಸ್ಟ್ ನಂತರ ಅರ್ಜಿ ಹಾಕಿದವರಿಗೆ ಬಿಗ್ ಅಪ್ಡೇಟ್! ಯಾವಾಗ ಬರಲಿದೆ ಹಣ ಗೊತ್ತಾ

ಹೊಸ ರೇಷನ್ ಕಾರ್ಡ್ ಬಿಡುಗಡೆ!

BPL Ration Cardಇನ್ನು ಈಗಾಗಲೇ ಸರ್ಕಾರಕ್ಕೆ ಎರಡು ಲಕ್ಷಕ್ಕೂ ಹೆಚ್ಚಿನ ಹೊಸ ರೇಷನ್ ಕಾರ್ಡ್ ಅರ್ಜಿಗಳು ಸಂದಾಯ ಆಗಿರುವುದರಿಂದ ಈಗ ಮತ್ತೆ ಹೊಸ ಅರ್ಜಿಗಳನ್ನು ತೆಗೆದುಕೊಳ್ಳುತ್ತಿಲ್ಲ, ಹಾಗೂ ಈಗಾಗಲೇ ಸಂದಾಯವಾಗಿರುವ ಅರ್ಜಿಗಳ ಪೈಕಿ ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ ಅಂತವರಿಗೆ ಮಾತ್ರ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು.

ಅಷ್ಟೇ ಅಲ್ಲದೆ, ಇನ್ನು ಮುಂದೆ ರೇಷನ್ ಕಾರ್ಡ್ ಕೊಡುವಾಗ ಆಹಾರ ಇಲಾಖೆಯ ಅಧಿಕಾರಿಗಳು ಫಲಾನುಭವಿಗಳ ಪ್ರದೇಶಕ್ಕೆ ಹೋಗಿ ಸ್ಥಳ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಈ ಜಿಲ್ಲೆಗಳಲ್ಲಿ 3 ದಿನ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! ಹೆಸರು ಸೇರ್ಪಡೆ, ತಿದ್ದುಪಡಿ ಇದ್ರೆ ಮಾಡಿಕೊಳ್ಳಿ

ರಸೀದಿ ಕಡ್ಡಾಯ!

ಪಡಿತರ ವಿತರಣೆ ಸಂದರ್ಭದಲ್ಲಿ ಆಗುತ್ತಿರುವ ವಂಚನೆಯನ್ನು ತಪ್ಪಿಸುವ ಸಲುವಾಗಿ ರೇಷನ್ ಕಾರ್ಡ್ ಮೂಲಕ ರೇಷನ್ ಪಡೆದುಕೊಳ್ಳುವಾಗ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿಯೊಬ್ಬರಿಗೂ ಅವರು ಪಡೆದುಕೊಂಡ ಪಡಿತರಕ್ಕೆ ರಶೀದಿ ಕೊಡುವುದು ಕಡ್ಡಾಯ. ಈ ರೀತಿ ರಸೀದಿ ಕೊಡುವುದರಿಂದ ಪಾರದರ್ಶಕತೆ (transparency) ಇರುತ್ತದೆ ಎನ್ನುವುದು ಸರ್ಕಾರದ ನಂಬಿಕೆ.

ನಿಮ್ಮ ಖಾತೆ ಹಣ ಸಂದಾಯವಾಗಿದೆಯೇ?

ಇನ್ನು ಸರ್ಕಾರ ಮೂರನೇ ಕಂತಿನ ಅನ್ನ ಭಾಗ್ಯ ಯೋಜನೆಯ (Annabhagya scheme) ಹಣವನ್ನು ಕೂಡ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಿದೆ. ಆದರೆ ಇನ್ನೂ ಸಾಕಷ್ಟು ಜನರ ಖಾತೆಗೆ ಹಣ ವರ್ಗಾವಣೆ (Money Transfer) ಆಗಿಲ್ಲ ಅಕ್ಟೋಬರ್ (October) ಕೊನೆಯ ಒಳಗೆ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುವುದು ಎಂದು ಸರ್ಕಾರ ತಿಳಿಸಿದೆ.

Big update for new ration card applicants! Strict action for distribution of Card

Follow us On

FaceBook Google News

Big update for new ration card applicants! Strict action for distribution of Card