ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ (Central government) ಹಾಗೂ ರಾಜ್ಯ ಸರ್ಕಾರಗಳು ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತವೆ

ಅದರಂತೆ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Yojana) ಈ ವರ್ಷ ಜಾರಿಗೆ ತಂದಿದ್ದು, ಇದರಿಂದ ಸಾಕಷ್ಟು ಮಹಿಳೆಯರಿಗೆ ಪ್ರಯೋಜನವಾಗಿದೆ.

Gruha Lakshmi 3 installments Deposited together, Check your Bank account

ಹೌದು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ರಾಜ್ಯ ಸರ್ಕಾರ ಜಾರಿಗೆ ತಂದಿದೆ, ಈ ಮೂಲಕ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಪ್ರತಿ ತಿಂಗಳು ಜಮಾ ಮಾಡಲಾಗುತ್ತದೆ

ಮೊದಲ ಕಂತಿನ ಹಣವನ್ನು ಅಕ್ಟೋಬರ್ 30 ನೇ ತಾರೀಖಿನಿಂದ ಸರ್ಕಾರ ಬಿಡುಗಡೆ ಮಾಡಿತು, ಇನ್ನು ಈಗ ಹಬ್ಬದ ಕೊಡುಗೆಯಾಗಿ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ, ಇನ್ನೂ ಕೆಲವರು ತಮಗೆ ಒಂದು ಕಂತಿನ ಹಣವು ಕೂಡ ಬಿಡುಗಡೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಜಿಲ್ಲೆಗಳಲ್ಲಿ 3 ದಿನ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! ಹೆಸರು ಸೇರ್ಪಡೆ, ತಿದ್ದುಪಡಿ ಇದ್ರೆ ಮಾಡಿಕೊಳ್ಳಿ

ಸ್ಪಷ್ಟನೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್;

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅಂಕಿ ಅಂಶಗಳ ಸಮೇತ ಮಹಿಳೆಯರ ಖಾತೆಗೆ ಹಣ ಯಾಕೆ ವರ್ಗಾವಣೆ ಆಗಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಈಗಾಗಲೇ ಸುಮಾರು 80% ನಷ್ಟು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದೆ. ಆದರೆ ಇನ್ನೂ 20% ನಷ್ಟು ಮಹಿಳೆಯರಿಗೆ ಹಣ ಸಿಕ್ಕಿಲ್ಲ. ಇದಕ್ಕೆ ಮಹಿಳೆಯರ ಖಾತೆಗೆ ಆಧಾರ್ ಸೀಡಿಂಗ್ ( Aadhaar seeding) ಆಗದೇ ಇರುವುದು ಮಹಿಳೆಯರ ಹೆಸರು ವಿಳಾಸ ರೇಷನ್ ಕಾರ್ಡ್ ಬ್ಯಾಂಕ್ ಖಾತೆ (bank account) ಹಾಗೂ ಆಧಾರ್ ಕಾರ್ಡ್ (Aadhaar Card) ನ ಪ್ರಕಾರ ಮ್ಯಾಚ್ ಆಗದೆ ಇರುವುದು ಪ್ರಮುಖವಾದ ಕಾರಣವಾಗಿದೆ

ಇನ್ನೂ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆ ಹಳೆಯದ್ದು, ಆ ಖಾತೆ ಆಕ್ಟಿವ್ (active) ಆಗಿಲ್ಲ. ಈ ಕಾರಣದಿಂದಲೂ ಕೂಡ ಹಣ ಸಂದಾಯವಾಗಿಲ್ಲ. ಅಷ್ಟೇ ಅಲ್ಲದೆ ಅರ್ಜಿ ಹಾಕಿದ ಸುಮಾರು 3000ಕ್ಕೂ ಹೆಚ್ಚಿನ ಮಹಿಳೆಯರು ಮೃತಪಟ್ಟಿರುವುದರಿಂದ ಅಂಥವರ ಖಾತೆಗೂ ಹಣ ವರ್ಗಾವಣೆ ಆಗುವುದಿಲ್ಲ.

ಸದ್ಯದಲ್ಲಿ ಈ ಎಲ್ಲಾ ಸಮಸ್ಯೆಗಳು ಪರಿಹಾರವಾದ ನಂತರ ಪ್ರತಿಯೊಬ್ಬರ ಖಾತೆಗೂ ಹಣ ವರ್ಗಾವಣೆ (Money Bank Transfer) ಮಾಡಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.

ಉಚಿತ ಸೈಕಲ್ ವಿತರಣೆ ಕುರಿತು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ

ತಡವಾಗಿ ಅರ್ಜಿ ಹಾಕಿದವರ ಖಾತೆಗೆ ಹಣ ಬರುವುದು ಯಾವಾಗ?

Gruha Lakshmi Yojanaಈ ನಡುವೆ ಅಗಸ್ಟ್ ತಿಂಗಳಿಗಿನಲ್ಲಿ ಅರ್ಜಿಯನ್ನ ಸಲ್ಲಿಸದೆ ಸೆಪ್ಟೆಂಬರ್ ತಿಂಗಳಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರೆ ಅಂತವರ ಖಾತೆಗೆ ಹಣ ಬಿಡುಗಡೆ ಆಗುವುದು ಬಹುತೇಕ ತಡ ಆಗಬಹುದು. ಅಥವಾ ಅಂಥವರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗದೇ ಇರಬಹುದು.

ಆದರೆ ಸಪ್ಟೆಂಬರ್ (September) ತಿಂಗಳಿನಲ್ಲಿ ಬಿಡುಗಡೆ ಆಗಬೇಕಿದ್ದ ಎರಡನೇ ಕಂತಿನ ಹಣ ಅಕ್ಟೋಬರ್ (October month) ತಿಂಗಳ ಕೊನೆಯ ಒಳಗೆ ಎಲ್ಲರ ಖಾತೆಗೂ ಜಮಾ ಆಗಲಿದೆ. ಹಾಗಾಗಿ ತಡವಾಗಿ ಅರ್ಜಿ ಸಲ್ಲಿಸಿದವರಿಗೆ ಅಕ್ಟೋಬರ್ ತಿಂಗಳಿನಿಂದ ಅವರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯಲಿದೆ.

ಅನ್ನಭಾಗ್ಯ ಯೋಜನೆಯ ಹಣ ಇನ್ನೂ ನಿಮ್ಮ ಖಾತೆಗೆ ಯಾಕೆ ಬಂದಿಲ್ಲ ಗೊತ್ತಾ? ಇಲ್ಲಿದೆ ಪಕ್ಕಾ ಕಾರಣ

ಫಲಾನುಭವಿ ಮಹಿಳೆಯರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಬಹಳ ಮುಖ್ಯ, ಒಂದು ವೇಳೆ ಅದು ಸಾಧ್ಯವಾಗದೆ ಇದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಅಂಗನವಾಡಿ ಶಿಕ್ಷಕ ಅಥವಾ ಸಹಾಯಕಿಯರ ಸಹಾಯ ಪಡೆದುಕೊಳ್ಳಬಹುದು.

ಈಗಾಗಲೇ ಯಾರ ಖಾತೆಗೆ ಹಣ ಸಂದಾಯವಾಗಿಲ್ಲವೂ ಅಂಥವರ ಹೆಸರು ಹಾಗೂ ಕಾರಣವನ್ನು ಹೊಂದಿರುವ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ. ಹಾಗಾಗಿ ಸ್ಥಳೀಯ ಸಿಡಿಪಿಓ ಅಧಿಕಾರಿಗಳ ಬಳಿ ನೇರವಾಗಿ ಸಂಪರ್ಕ ಮಾಡಿ ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Big update for those who applied for Gruha Lakshmi Yojana after August