ನಿಮ್ಮ ಜಮೀನು, ಮನೆ ಅಥವಾ ಸೈಟ್ ಪ್ರಸ್ತುತ ಎಷ್ಟು ಬೆಲೆಬಾಳುತ್ತೆ, ಈಗಿನ ಬೆಲೆ ಎಷ್ಟು? ಚೆಕ್ ಮಾಡಿಕೊಳ್ಳಿ
ನೀವು ಯಾವುದೇ ಒಂದು ಜಮೀನನ್ನು ಖರೀದಿ ಮಾಡಲು ಬಯಸಿದರೆ, ರಿಜಿಸ್ಟರ್ ಮಾಡಿಸುವುದಕ್ಕಿಂತ ಮೊದಲು ಜಾಗದ ಬಗ್ಗೆ ಪೂರ್ತಿಯಾಗಿ ತನಿಖೆ ಮಾಡಿ. ಕೆಲವೊಮ್ಮೆ ಹೆಚ್ಚಿನ ಜನರ ಹೆಸರಿನಲ್ಲಿ ಜಾಗ ರಿಜಿಸ್ಟರ್ ಆಗುವುದನ್ನು ನೋಡಿರುತ್ತೀರಿ.
ನೀವು ಯಾವುದೇ ಜಮೀನು ಖರೀದಿ (Buy Property) ಮಾಡಬೇಕು ಎಂದರೆ ಅಥವಾ ನಿಮ್ಮ ಆಸ್ತಿಯನ್ನು ಮಾರಾಟ ಮಾಡಬೇಕು ಎಂದರೆ ಅದರ ನಿಜವಾದ ಮೌಲ್ಯವನ್ನು ತಿಳಿದುಕೊಂಡು, ಅದಕ್ಕೆ ಅನುಗುಣವಾಗಿ ಖರೀದಿ ಅಥವಾ ಮಾರಾಟ ಮಾಡುವುದು ಒಳ್ಳೆಯದು.
ಜಾಗದ ಮೇಲೆ ಆಗುವ ತೆರಿಗೆ ಅಕ್ರಮ ಅಥವಾ ಇನ್ನಿತರ ರೀತಿಯ ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರವೇ ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. ಸರ್ಕಾರವೇ ಈ ಒಂದು ಮೌಲ್ಯವನ್ನು ನಿಗದಿ ಪಡಿಸಲಿದ್ದು, ಅದನ್ನು ಹೇಗೆ ತಿಳಿಯುವುದು ಎಂದು ಇಂದು ಪೂರ್ತಿಯಾಗಿ ತಿಳಿಯೋಣ..
ನೈಜ ಬೆಲೆ ನಿಗದಿ ಮಾಡಲು ಬೇಕಾಗುವ ನಿಯಮಗಳು:
*ಭೂಮಿಯ ಮಣ್ಣಿನ ಕ್ವಾಲಿಟಿ ಹೇಗಿದೆ ಎನ್ನುವುದರ ಅನುಸಾರ
*ಯಾವ ಮಣ್ಣು, ಕಪ್ಪು ಮಣ್ಣು, ಕೆಂಪು ಮಣ್ಣು ಯಾವುದಿದೆ ಎನ್ನುವುದರ ಮೇಲೆ
*ಕಮರ್ಶಿಯಲ್ ಆಗಿ ಜಾಗ ಹೇಗಿದೆ ಎನ್ನುವುದರ ಮೇಲೆ
*ಮುಂದೆ ಯಾವ ರೀತಿ ಬದಲಾವಣೆ ಆಗುತ್ತದೆ ಎನ್ನುವುದರ ಮೇಲೆ
*ಜಾಗದ ಖುಷ್ಕಿ, ಭಾಗಾಯುತ, ತರಿ ಇದರ ಆಧಾರದ ಮೇಲೆ ನೈಜ ಬೆಲೆ ನಿಗದಿ ಮಾಡಲಾಗುತ್ತದೆ.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಸಿಗುತ್ತೆ ಪ್ರತಿ ತಿಂಗಳು ₹5000, ಅರ್ಜಿ ಹಾಕಲು ಜನರ ನೂಕುನುಗ್ಗಲು
ಖುಷ್ಕಿ ಜಮೀನಿನ ಮೌಲ್ಯ ಕಡಿಮೆ:
ಒಂದು ಜಾಗದಲ್ಲಿ ಮಣ್ಣು ಹೇಗಿದೆ ಎನ್ನುವುದನ್ನು ಪರಿಗಣಿಸಿ, ಅಲ್ಲಿ ಯಾವ ಬೆಳೆ ಬೆಳೆಯುವುದು ಒಳ್ಳೆಯದು, ಯಾವ ತಳಿ ಒಳ್ಳೆಯದು, ಯಾವ ಪದ್ಧತಿ ಇಂದ ವ್ಯವಸಾಯ ಮಾಡಬೇಕು.
ಉದಾಹರಣೆಗೆ ದಕ್ಷಿಣ ಕರ್ನಾಟಕ ಜಿಲ್ಲೆಯಲ್ಲಿ ಇರುವುದು ಕೆಂಪು ಮಣ್ಣಿರುವ ಭೂಮಿ, ಈ ಮಣ್ಣಿನಲ್ಲಿ ವ್ಯವಸಾಯಕ್ಕೆ ಬೇಕಾಗುವ ಹಾಗೆ ಬೆಳೆಗಳಿಗೆ ಬೇಕಾಗುವ ಹಾಗೆ ಮಳೆ ನೀರನ್ನು ಈ ಮಣ್ಣು ಹಿಡಿದುಕೊಳ್ಳುವುದು ಹೆಚ್ಚಿನ ಸಮಯದವರೆಗು ಸಾಧ್ಯ ಆಗುವುದಿಲ್ಲ.
ಹಾಗೆಯೇ ಎರಡು ಮಳೆ ಬರದೇ ಹೋದರೆ, ನೀರಿನ ಕೊರತೆ ಇಂದ ಬೆಳೆ ಹಾಳಾಗುತ್ತದೆ. ಈ ಕಾರಣಕ್ಕೆ ನೀರು ಹಾಗೂ ಮಣ್ಣಿನ ಸಂರಕ್ಷಣೆ ಬಗ್ಗೆ ಹೆಚ್ಚು ಸಮಯ ಕೊಡಬೇಕು ಎನ್ನುವ ಕಾರಣಕ್ಕೆ, ಈ ಖುಷ್ಕಿ ಜಮೀನಿಗೆ ಬೆಲೆ ಕಡಿಮೆ.
ಜಮೀನಿನ ನಿಜವಾದ ಮೌಲ್ಯದಿಂದ ಜನರಿಗೆ ಸಿಗುವ ಲಾಭವೇನು?
*ಟ್ಯಾಕ್ಸ್ ಕಡಿಮೆ ಆಗುತ್ತದೆ; ಜಾಗದ ಮೌಲ್ಯ (Property Value) 3 ಲಕ್ಷ ಇದ್ದು, ಮಾರ್ಕೆಟ್ ಬೆಲೆ 8 ಲಕ್ಷವಾದರೆ, 5 ಲಕ್ಷ ತೆರಿಗೆ ಉಳಿತಾಯ ಮಾಡಬಹುದು.
*ಲ್ಯಾನ್ಡ್ ಮಾಫಿಯಾ ನಡೆಯುವುದು ಕಡಿಮೆ ಆಗುತ್ತದೆ, ಇದರಿಂದ ಮೋಸ ನಡೆಯುವುದು ಕಡಿಮೆ ಆಗುತ್ತದೆ.
*ಖರೀದಿ ಮಾಡುವವರು ಮತ್ತು ಮಾರಾಟ ಮಾಡುವವರ ಸಂಬಂಧ ಚೆನ್ನಾಗಿರುತ್ತದೆ.
*ವಂಚನೆಯ ಹಣ ವರ್ಗಾವಣೆ ಇಲ್ಲದೇ, ರಿಜಿಸ್ಟ್ರೇಷನ್ (Property Registration) ಮಾಡಿಸಿಕೊಳ್ಳಬಹುದು.
ಗೋಲ್ಡ್ ಲೋನ್ ತಗೊಂಡು ಕಟ್ಟದೇ ಇದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ಅಪ್ಡೇಟ್
ಜಾಗ ಖರೀದಿಗಿಂತ ಮೊದಲು ಈ ರೀತಿ ಮಾಡಿ;
ನೀವು ಯಾವುದೇ ಒಂದು ಜಮೀನನ್ನು ಖರೀದಿ ಮಾಡಲು ಬಯಸಿದರೆ, ರಿಜಿಸ್ಟರ್ ಮಾಡಿಸುವುದಕ್ಕಿಂತ ಮೊದಲು ಜಾಗದ ಬಗ್ಗೆ ಪೂರ್ತಿಯಾಗಿ ತನಿಖೆ ಮಾಡಿ. ಕೆಲವೊಮ್ಮೆ ಹೆಚ್ಚಿನ ಜನರ ಹೆಸರಿನಲ್ಲಿ ಜಾಗ ರಿಜಿಸ್ಟರ್ ಆಗುವುದನ್ನು ನೋಡಿರುತ್ತೀರಿ. ಈ ರೀತಿ ಆದರೆ ಇಬ್ಬರಿಗೂ ಆಸ್ತಿ ಸಿಗುವುದಕ್ಕೆ ಸಮಸ್ಯೆ ಆಗುತ್ತದೆ. ಹಾಗಾಗಿ ಹುಷಾರಾಗಿರಿ.
ಹಳೆಯ ಕೆನರಾ ಬ್ಯಾಂಕ್ ಅಕೌಂಟ್ ಗ್ರಾಹಕರಿಗೆ ಮಾತ್ರ ಸಿಗಲಿದೆ 10 ಲಕ್ಷ ತನಕ ಲೋನ್! ಇಲ್ಲಿದೆ ಡೀಟೇಲ್ಸ್
ಆನ್ಲೈನ್ ನಲ್ಲೇ ಸಿಗಲಿದೆ ಮಾಹಿತಿ:
ಈ ಮೊದಲು ನೀವು ಜಾಗ, ಜಮೀನು ಖರೀದಿ ಮಾಡುವುದಕ್ಕೆ ದಾಖಲೆಗಳನ್ನು ಓನರ್ ಇಂದಲೇ ಪಡೆಯಬೇಕಿತ್ತು, ಆದರೆ ಈಗ ಭೂ ಇಲಾಖೆ ಜಾರಿಗೆ ತಂದಿರುವ ಹೊಸ ಸೌಲಭ್ಯದ ಅನುಸಾರ, ಆನ್ಲೈನ್ ಮೂಲಕವೇ ಆ ಜಮೀನು, ಓನರ್ ಎಲ್ಲದರ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಇದರಿಂದ ನೀವು ಎಲ್ಲಾ ದಾಖಲೆಗಳನ್ನು ಪಡೆದುಕೊಳ್ಳಬಹುದು. ಕಂದಾಯ ಇಲಾಖೆಯ ವೆಬ್ಸೈಟ್ ಮೂಲಕ ಈ ದಾಖಲೆಗಳನ್ನು ನಿಮ್ಮ ಮನೆಯಲ್ಲೇ ಕೂತು ಸುಲಭವಾಗಿ ಪಡೆದುಕೊಳ್ಳಬಹುದು. ಒಂದೆರಡೇ ನಿಮಿಷಗಳಲ್ಲಿ ಜಮೀನಿನ ದಾಖಲೆಗಳು, ಓನರ್ ದಾಖಲೆಗಳು, ಭೂಮಿಯ ಅಳತೆ, ನಕಲು, ಇದೆಲ್ಲವನ್ನು ಪಡೆದು ಚೆಕ್ ಮಾಡಿ.
ಆನ್ಲೈನ್ ಚೆಕ್ ಮಾಡುವುದು ಹೇಗೆ?
https://kaverionline.karnataka.gov.in/KnowYourValuation/KnowYourValuation ಸರ್ಕಾರದ ಈ ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ. ಇಲ್ಲಿ ನಿಮ್ಮ ಜಿಲ್ಲೆ ಹಾಗೂ ತಹಸೀಲ್ದಾರ್ ಹೆಸರನ್ನು ಸೆಲೆಕ್ಟ್ ಮಾಡಿ.
ಗೂಗಲ್ ಪೇ ಬಳಸುತ್ತಿದ್ದು 100 ರೂಪಾಯಿಗಿಂತ ಹೆಚ್ಚು ವಹಿವಾಟು ಮಾಡಿದ್ರೆ ಸಿಗುತ್ತೆ 5 ಲಕ್ಷ ಪರ್ಸನಲ್ ಲೋನ್
ಬಳಿಕ ಜಾಗ ಇರುವ ಗ್ರಾಮದ ಹೆಸರನ್ನು ಸೆಲೆಕ್ಟ್ ಮಾಡಿ, ನಂತರ ಓನರ್ ಹೆಸರನ್ನು ಬಳಸಿ ಮಾಹಿತಿ ಹುಡುಕುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಓನರ್ ಹೆಸರಿನ ಮೊದಲ ಅಕ್ಷರವನ್ನು ಎಂಟರ್ ಮಾಡುವ ಮೂಲಕ ಮಾಹಿತಿ ಸೆಲೆಕ್ಟ್ ಮಾಡಿ, ಲಿಸ್ಟ್ ನಲ್ಲಿ ಮಾಲೀಕರ ಹೆಸರನ್ನು ಸೆಲೆಕ್ಟ್ ಮಾಡಿ, ಬಳಿಕ ಕ್ಯಾಪ್ಚ ಕೋಡ್ ಹಾಕಿ,
ಇದೆಲ್ಲವೂ ಆದ ನಂತರ ವಿವರಗಳು ಇರುವ ಹೊಸ ಪೇಜ್ ಓಪನ್ ಆಗುತ್ತದೆ. ಈಗ ಓನರ್ ಹೆಸರಲ್ಲಿ ಎಷ್ಟು ಜಮೀನಿದೆ, ಅದರ ಮೌಲ್ಯ ಎಷ್ಟಿರುತ್ತದೆ ಇದೆಲ್ಲವನ್ನು ಕೂಡ ತಿಳಿದುಕೊಳ್ಳಬಹುದು.
How much is your Property land, house or site currently worth