ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಸಿಗುತ್ತೆ ಪ್ರತಿ ತಿಂಗಳು ₹5000, ಅರ್ಜಿ ಹಾಕಲು ಜನರ ನೂಕುನುಗ್ಗಲು

Story Highlights

ಒಂದು ಸಾರಿ ಹೂಡಿಕೆ ಮಾಡಿದ್ರೆ ಸಾಕು, ಪ್ರತಿ ತಿಂಗಳು ಸಿಗಲಿದೆ ₹5000! ಪೋಸ್ಟ್ ಆಫೀಸ್ ಇಂದ ಸೂಪರ್ ಸ್ಕೀಮ್

ನೀವು ಹಣ ಹೂಡಿಕೆ ಮಾಡಿ ಒಳ್ಳೆಯ ಆದಾಯ ಪಡೆಯಬೇಕು ಎಂದರೆ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ (Post Office Savings Scheme) ಮಾಡುವುದು ಒಳ್ಳೆಯ ಆಯ್ಕೆ ಆಗಿದೆ. ಹೂಡಿಕೆ ಮಾಡುವುದಕ್ಕೆ ಅನೇಕ ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿದೆ. ಅವುಗಳ ಪೈಕಿ ಅಂಚೆಕಛೇರಿ ಮಾಸಿಕ ಉಳಿತಾಯ ಯೋಜನೆ ಕೂಡ ಒಂದು.

ಈ ಯೋಜನೆಯಲ್ಲಿ ನೀವು ಒಂದು ಸಾರಿ ಹೂಡಿಕೆ (Investment) ಮಾಡಿದರೆ ಸಾಕು, ಪ್ರತಿ ತಿಂಗಳು ₹5000 ವರೆಗು 5 ವರ್ಷಗಳ ಕಾಲ ಆದಾಯ ಪಡೆಯಬಹುದು. ಈ ಲಾಭ ಗಳಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ..

ಗೋಲ್ಡ್ ಲೋನ್ ತಗೊಂಡು ಕಟ್ಟದೇ ಇದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ಅಪ್ಡೇಟ್

ಪೋಸ್ಟ್ ಆಫೀಸ್ ಮಂತ್ಲಿ ಸ್ಕೀಮ್:

ಪೋಸ್ಟ್ ಆಫೀಸ್ ನ ಈ ಒಂದು ಯೋಜನೆಯಲ್ಲಿ ನೀವು ₹1000 ರೂಪಾಯಿ ಇಂದ ಹೂಡಿಕೆ ಶುರು ಮಾಡಬಹುದು. ಯಾರೇ ಆದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು, ಇದರಲ್ಲಿ ನಿಮಗೆ 7.4% ವರೆಗು ಬಡ್ಡಿ ನಿಗದಿ ಆಗಿದೆ.

10 ವರ್ಷ ಮೇಲ್ಪಟ್ಟ ಮಕ್ಕಳು ಅಥವಾ ವಿಶೇಷ ಮಕ್ಕಳ ಹೆಸರಿನಲ್ಲಿ ಅವರ ತಂದೆ ತಾಯಿ ಈ ಒಂದು ಯೋಜನೆಯಲ್ಲಿ ಖಾತೆ ತೆರೆದು, ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು.

ಈ ಯೋಜನೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡಬಹುದು?

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಸಿಂಗಲ್ ಖಾತೆ ಮತ್ತು ಜಂಟಿ ಖಾತೆ (Joint Account) ಎರಡನ್ನು ಕೂಡ ತೆರೆಯಬಹುದು. ಸಿಂಗಲ್ ಖಾತೆಯಲ್ಲಿ 9 ಲಕ್ಷದವರೆಗೂ ಹೂಡಿಕೆ ಮಾಡಬಹುದು, ಹಾಗೆಯೇ ಜಾಯಿಂಟ್ ಅಕೌಂಟ್ ತೆರೆಯುವುದಾದರೆ, 15 ಲಕ್ಷದವರೆಗು ಹೂಡಿಕೆ ಮಾಡಬಹುದು.

ಒಂದು ವೇಳೆ ನೀವು ಸಿಂಗಲ್ ಅಕೌಂಟ್ ತೆರೆದು, ಇದರಲ್ಲಿ 9 ಲಕ್ಷದವರೆಗು 5 ವರ್ಷಗಳ ಕಾಲಕ್ಕೆ ಹೂಡಿಕೆ ಮಾಡಿದರೆ, 7.40% ಬಡ್ಡಿದರರಲ್ಲಿ ತಿಂಗಳಿಗೆ ₹5,550 ರೂಪಾಯಿ ಬಡ್ಡಿ ಪ್ರತಿ ತಿಂಗಳು ಕೂಡ ಸಿಗುತ್ತದೆ.

ಹಳೆಯ ಕೆನರಾ ಬ್ಯಾಂಕ್ ಅಕೌಂಟ್ ಗ್ರಾಹಕರಿಗೆ ಮಾತ್ರ ಸಿಗಲಿದೆ 10 ಲಕ್ಷ ತನಕ ಲೋನ್! ಇಲ್ಲಿದೆ ಡೀಟೇಲ್ಸ್

Post Office Scheme5 ವರ್ಷದ ಅವಧಿ ಮುಗಿದ ನಂತರ ಬಡ್ಡಿ ಜೊತೆಗೆ ನೀವು ಹೂಡಿಕೆ ಮಾಡಿರುವ ಹಣವನ್ನು ಸೇರಿಸಿ ಒಟ್ಟಿಗೆ ರಿಟರ್ನ್ಸ್ ಪಡೆಯಬಹುದು. ಅಥವಾ ಎಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸೇವೆ (ECS) ಇಂದ ನಿಮ್ಮ ಸೇವಿಂಗ್ಸ್ ಅಕೌಂಟ್ ಗೆ (Bank Account) ಟ್ರಾನ್ಸ್ಫರ್ ಮಾಡಿಸಿಕೊಳ್ಳಬಹುದು.

ಈ ಯೋಜನೆಯಲ್ಲಿ ನೀವು ಖಾತೆ ತೆರೆದು 1 ತಿಂಗಳ ನಂತರ ಬಡ್ಡಿ ಕೊಡಲಾಗುತ್ತದೆ. ಅಕಸ್ಮಾತ್ ಅವಧಿ ಮುಗಿಯುವುದಕ್ಕಿಂತ ಮೊದಲೇ ಅಕೌಂಟ್ ಕ್ಲೋಸ್ ಮಾಡಿದರೆ, ನೀವು ಹೂಡಿಕೆ ಮಾಡಿರುವ ಮೊತ್ತದಿಂದ ಹಣವನ್ನು ಕಟ್ ಮಾಡಲಾಗುತ್ತದೆ. ಹೂಡಿಕೆ ಮಾಡಿ 5 ವರ್ಷಗಳ ನಂತರ ಅಕೌಂಟ್ ಕ್ಲೋಸ್ ಮಾಡಬಹುದು.

ಗೂಗಲ್ ಪೇ ಬಳಸುತ್ತಿದ್ದು 100 ರೂಪಾಯಿಗಿಂತ ಹೆಚ್ಚು ವಹಿವಾಟು ಮಾಡಿದ್ರೆ ಸಿಗುತ್ತೆ 5 ಲಕ್ಷ ಪರ್ಸನಲ್ ಲೋನ್

ತೆರಿಗೆ ಪ್ರಯೋಜನ ಸಿಗುವುದಿಲ್ಲ;

ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಸೆಕ್ಷನ್ 80ಸಿ ಅನುಸಾರ ನಿಮಗೆ ತೆರಿಗೆ ಪ್ರಯೋಜನ ಸಿಗುವುದಿಲ್ಲ ಎನ್ನುವುದು ಪ್ರಮುಖ ವಿಚಾರ ಆಗಿದ್ದು, ಇದನ್ನು ಕೂಡ ನೆನಪಿಟ್ಟುಕೊಳ್ಳಿ.

ಹಾಗೆಯೇ ಈ ಯೋಜನೆಯಲ್ಲಿ ನೀವು 9 ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹5500 ರೂಪಾಯಿ ಬಡ್ಡಿ ರೂಪದಲ್ಲಿ ಸಿಗುತ್ತದೆ, ₹5000 ಬಡ್ಡಿ ಬರಬೇಕು ಎಂದರೆ, ಇದೇ ಯೋಜನೆಯಲ್ಲಿ ₹8,11,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಈ ಉತ್ತಮವಾದ ಯೋಜನೆಯ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಿ.

In this post office scheme you get 5000 every month, people Rush to apply

Related Stories