ಸರ್ಕಾರದ ಸಬ್ಸಿಡಿ ಸಾಲದ ಯೋಜನೆ; ಇಂತಹವರಿಗೆ ಸಿಗಲಿದೆ 5 ಲಕ್ಷ ಸಾಲಕ್ಕೆ 2.5 ಲಕ್ಷ ಸಬ್ಸಿಡಿ
ಅಲ್ಪಸಂಖ್ಯಾತ ಕುಟುಂಬದವರು 5 ಲಕ್ಷಗಳ ವರೆಗೆ ಸಾಲ ಸೌಲಭ್ಯವನ್ನು (loan) ಸಾಂತ್ವನ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದು. ಇದರಲ್ಲಿ 2.5 ಲಕ್ಷ ರೂಪಾಯಿಗಳನ್ನು ಸರ್ಕಾರ ಸಬ್ಸಿಡಿ (subsidy) ಆಗಿ ನೀಡುತ್ತದೆ.
ಒಂದಾದ ಮೇಲೆ ಒಂದರಂತೆ ವಿವಿಧ ಯೋಜನೆಗಳನ್ನು (guarantee schemes) ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿದೆ ಈ ಎಲ್ಲಾ ಯೋಜನೆಗಳ ಮೂಲಕ ರಾಜ್ಯದ ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಹೆಚ್ಚಿನ ಪ್ರಯೋಜನ ಆಗುತ್ತಿದೆ ಎನ್ನಬಹುದು, ಅದರಲ್ಲೂ ಮಹಿಳೆಯರ ಸಬಲೀಕರಣಕ್ಕಾಗಿ ಕೂಡ ಸರ್ಕಾರ ಶ್ರಮಿಸುತ್ತಿದ್ದು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ರಾಜ್ಯದ ಜನತೆಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು (guarantee schemes) ಈಗಾಗಲೇ ಸರ್ಕಾರ ಜಾರಿಗೆ ತಂದಿದ್ದು ಬಹುತೇಕ ಯಶಸ್ವಿಯಾಗಿದೆ ಎನ್ನಬಹುದು. ಇದರ ಜೊತೆಗೆ ಈಗ ಮಹಿಳಾ ಸಬಲೀಕರಣಕ್ಕಾಗಿ (women empowerment) ಬಡ್ಡಿ ರಹಿತ ಸಾಲವನ್ನು (loan without interest) ಕೂಡ ಸರ್ಕಾರ ನೀಡುತ್ತಿದೆ.
ಅಷ್ಟೇ ಅಲ್ಲದೆ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ (For upliftment of minorities) ಸರ್ಕಾರ ಸಹಾಯಧನ ನೀಡಲು ಮುಂದಾಗಿದೆ.
ದಸರಾ ಆಯುಧ ಪೂಜೆಗೆ ಅರಿಶಿಣ ಕುಂಕುಮ ಬಳಸುವ ಹಾಗಿಲ್ಲ! ಸರ್ಕಾರದ ಕಟ್ಟುನಿಟ್ಟಿನ ಆದೇಶ
ಸಾಂತ್ವಾನ ಯೋಜನೆ!
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ (Karnataka Minority Development Corporation) ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಾಂತ್ವನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ 5 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ಸರ್ಕಾರ ನೀಡಲಿದೆ.
ಸಚಿವ ಜಮೀರ್ ಅಹಮದ್ (Jamir Ahmad) ಸಾಂತ್ವಾನ ಯೋಜನೆಗೆ ಚಾಲನೆ ನೀಡಿದ್ದು, ಈ ಮೂಲಕ ಕರ್ನಾಟಕದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದಿದ್ದಾರೆ.
ಸಾಂತ್ವನ ಯೋಜನೆಯ ಮುಖ್ಯ ಉದ್ದೇಶ ಅಲ್ಪಸಂಖ್ಯಾತರಿಗೆ ಆರ್ಥಿಕ ಸಹಾಯ (financial support) ಒದಗಿಸುವುದು. ಅಗ್ನಿ ದುರಂತ, ಪ್ರಕೃತಿ ವಿಕೋಪ, ಕೋಮು ಗಲಭೆ ಮೊದಲಾದ ಕಾರಣಗಳಿಂದ ನಷ್ಟ ಅನುಭವಿಸಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರಂಭಗೊಂಡಿದೆ ಸಾಂತ್ವನ ಯೋಜನೆ.
ಇನ್ಮುಂದೆ ಫ್ರೀ ಅಕ್ಕಿ ಸಿಗುತ್ತಾ? ಇಲ್ಲವೇ ಹಣ ಸಿಗುತ್ತಾ? ಅನ್ನಭಾಗ್ಯ ಯೋಜನೆಯ ಕುರಿತು ಬಿಗ್ ಅಪ್ಡೇಟ್
ಸಾಂತ್ವನ ಯೋಜನೆಯ ಅಡಿಯಲ್ಲಿ ಸಿಗಲಿದೆ ಸಾಲ ಸೌಲಭ್ಯ – Loan
ಸಂತ್ರಸ್ತ ಅಲ್ಪಸಂಖ್ಯಾತ ಕುಟುಂಬದವರು 5 ಲಕ್ಷಗಳ ವರೆಗೆ ಸಾಲ ಸೌಲಭ್ಯವನ್ನು (loan) ಸಾಂತ್ವನ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದು. ಇದರಲ್ಲಿ 2.5 ಲಕ್ಷ ರೂಪಾಯಿಗಳನ್ನು ಸರ್ಕಾರ ಸಬ್ಸಿಡಿ (subsidy) ಆಗಿ ನೀಡುತ್ತದೆ.
ಇನ್ನು ಉಳಿದ ಹಣಕ್ಕೆ ಕೇವಲ 3% ಬಡ್ಡಿ ದರದಲ್ಲಿ ಸಾಲ ಮರುಪಾವತಿ ಮಾಡಿದರೆ ಆಯ್ತು. ಉಳಿದ ಹಣವನ್ನು ಸರ್ಕಾರವೇ ಭರಿಸುತ್ತದೆ.
ಸಾಂತ್ವಾನ ಯೋಜನೆಯ ಮೂಲಕ ಅಲ್ಪಸಂಖ್ಯಾತರು ಸಾಲ ಸೌಲಭ್ಯವನ್ನು ಪಡೆದುಕೊಂಡು ಪ್ರಕೃತಿ ವಿಕೋಪ, ಕೋಮುಗಲಭೆ, ಅಗ್ನಿ ದುರಂತ ಮೊದಲಾದವುಗಳಿಂದ ತೊಂದರೆ ಅನುಭವಿಸಿದ್ದರೆ ತಮ್ಮದೇ ಆಗಿರುವ ಉದ್ಯಮವನ್ನು ಆರಂಭಿಸಲು ಈ ಯೋಜನೆ ಸಹಾಯಕವಾಗಲಿದೆ.
ಕೊನೆಗೂ ಜಮಾ ಆಗಿದೆ ಎರಡನೇ ಕಂತಿನ ಹಣ; ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಇದರಿಂದಾಗಿ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿ ಕೂಡ ಆಗಲಿದೆ. ಸಾಂತ್ವನ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಳ್ಳಿ. ಆನ್ಲೈನ್ (online) ಮೂಲಕ ಅಲ್ಪಸಂಖ್ಯಾತರ ಅಧಿಕೃತ ವೆಬ್ಸೈಟ್ನಲ್ಲಿ (official website) ಸಾಂತ್ವನ ಯೋಜನೆಗೆ ಅಪ್ಲೈ ಮಾಡಬಹುದು.
Government Subsidy Loan Scheme, Such people will get 2.5 lakh subsidy for 5 lakh loan