ದಸರಾ ಆಯುಧ ಪೂಜೆಗೆ ಅರಿಶಿಣ ಕುಂಕುಮ ಬಳಸುವ ಹಾಗಿಲ್ಲ! ಸರ್ಕಾರದ ಕಟ್ಟುನಿಟ್ಟಿನ ಆದೇಶ

ನವರಾತ್ರಿ ಉತ್ಸವ (Navratri festival) ರಾಜ್ಯಾದ್ಯಂತ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ, ಅದರಲ್ಲೂ ಮೈಸೂರಿಗೆ ದಸರಾ (Mysore Dasara) ಅಂಬಾರಿ ನೋಡಲು ಲಕ್ಷಾಂತರ ಜನ ಆಗಮಿಸುತ್ತಿದ್ದಾರೆ.

ನವರಾತ್ರಿ ಉತ್ಸವ (Navratri festival) ರಾಜ್ಯಾದ್ಯಂತ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ, ಅದರಲ್ಲೂ ಮೈಸೂರಿಗೆ ದಸರಾ (Mysore Dasara) ಅಂಬಾರಿ ನೋಡಲು ಲಕ್ಷಾಂತರ ಜನ ಆಗಮಿಸುತ್ತಿದ್ದಾರೆ.

ನವರಾತ್ರಿ ಉತ್ಸವ ಇನ್ನೇನು ಕೊನೆಗೊಳ್ಳುತ್ತಿದೆ, ಕೊನೆಯ ಮೂರು ದಿನಗಳು ಮಾತ್ರ ಬಾಕಿ ಇದ್ದು ಕೊನೆಯ ದಿನ ವಿಜಯದಶಮಿ ಹಾಗೂ ಆಯುಧ ಪೂಜೆಯನ್ನು (Ayudha Puja) ರಾಜ್ಯಾದ್ಯಂತ ನಡೆಸಲಾಗುತ್ತದೆ.

ಈ ಬಾರಿ ಆಯುಧ ಪೂಜೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ (state government) ಮಹತ್ವದ ಆದೇಶ ಒಂದನ್ನು ಹೊರಡಿಸಿದ್ದು ಈ ನಿಯಮ ಪಾಲಿಸುವುದು ಕಡ್ಡಾಯ ಎಂದು ಹೇಳಿದೆ.

ದಸರಾ ಆಯುಧ ಪೂಜೆಗೆ ಅರಿಶಿಣ ಕುಂಕುಮ ಬಳಸುವ ಹಾಗಿಲ್ಲ! ಸರ್ಕಾರದ ಕಟ್ಟುನಿಟ್ಟಿನ ಆದೇಶ - Kannada News

ಇನ್ಮುಂದೆ ಫ್ರೀ ಅಕ್ಕಿ ಸಿಗುತ್ತಾ? ಇಲ್ಲವೇ ಹಣ ಸಿಗುತ್ತಾ? ಅನ್ನಭಾಗ್ಯ ಯೋಜನೆಯ ಕುರಿತು ಬಿಗ್ ಅಪ್ಡೇಟ್

ರಾಸಾಯನಿಕ ವಸ್ತು ಬಳಸುವಂತಿಲ್ಲ!

ನಾಡ ಹಬ್ಬ ದಸರಾ ಆಯುಧ ಪೂಜೆಯ ದಿನ ಅಂಗಡಿ ಮುಂಗಟ್ಟುಗಳಲ್ಲಿ ಕಚೇರಿಗಳಲ್ಲಿ (office) ಬ್ಯಾಂಕ್ಗಳಲ್ಲಿ ಹೀಗೆ ಹಲವು ಕಡೆ ದೇವರನ್ನ ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಕುಂಬಳಕಾಯಿ ಒಡೆದು ಅದರಲ್ಲಿ ಅರಿಶಿಣ ಕುಂಕುಮ, ಸುಣ್ಣ ಹಾಗೂ ಇತರ ಬಣ್ಣಗಳನ್ನು ಹಾಕುವುದು ಸಂಪ್ರದಾಯ.

ಇದರ ಜೊತೆಗೆ ಸಾಂಪ್ರದಾಯಿಕವಾದ ರಂಗೋಲಿಯನ್ನು ಕೂಡ ಬಾಗಿಲಿನ ಎದುರುಗಡೆ ಹಾಕಲಾಗುತ್ತದೆ. ಆದರೆ ಸರ್ಕಾರ ಇದೆಲ್ಲದಕ್ಕೂ ಈಗ ಕಡಿವಾಣ ಹಾಕಿದೆ.

ಎಲ್ಲಿ ಅರಿಶಿಣ ಕುಂಕುಮ ರಾಸಾಯನಿಕ ಬಳಕೆ ನಿಷೇಧಿಸಲಾಗಿದೆ?

Dasara Festivalಸರ್ಕಾರ ಅಧಿಸೂಚನೆ ಹೊರಡಿಸಿರುವಂತೆ ಬೆಂಗಳೂರಿನ ವಿಧಾನಸೌಧ (Vidhana soudha) ವಿಕಾಸ ಸೌಧ (Vikas Soudha) ಬಹು ಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ಮಾಡುವಾಗ ಕಚೇರಿಯ ಮುಂಭಾಗದಲ್ಲಿ ಕಾರಿಡಾರ್ (corridor) ನಲ್ಲಿ ರಾಸಾಯನಿಕ ಮಿಶ್ರಿತ ಬಣ್ಣವನ್ನು (chemical mixed colour) ಬಳಸಬಾರದು ಎಂದು ಆದೇಶ ಹೊರಡಿಸಲಾಗಿದೆ.

ವಿಕಾಸ ಸೌಧ, ವಿಧಾನಸೌಧ ಹಾಗೂ ಬಹು ಮಹಡಿ ಕಟ್ಟಡಗಳು ಪಾರಂಪರಿಕ ಕಟ್ಟಡಗಳ ಮುಂದೆ, ರಂಗೋಲಿ, ಅರಿಶಿನ ಕುಂಕುಮ ಹಾಗೂ ಇತರ ಬಣ್ಣಗಳು, ಜೊತೆಗೆ ಕುಂಬಳಕಾಯಿಯ ಒಳಗೆ ಬಳಸುವ ಅರಿಶಿನ ಕುಂಕುಮ ಸುಣ್ಣ ಮೊದಲಾದವು ರಾಸಾಯನಿಕಗಳಿಂದ ಕೂಡಿದ್ದು ಇದನ್ನು ನೆಲದ ಮೇಲೆ ಚೆಲ್ಲಿದಾಗ ಆ ಬಣ್ಣ ಬೇಗ ಮಾಸುವುದಿಲ್ಲ. ಇದರಿಂದಾಗಿ ಕಟ್ಟಡದ ನೆಲಹಾಸು ಹಾಳಾಗುತ್ತದೆ.

ಕೊನೆಗೂ ಜಮಾ ಆಗಿದೆ ಎರಡನೇ ಕಂತಿನ ಹಣ; ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಪಾರಂಪರಿಕ ಕಟ್ಟಡಗಳಾಗಿರುವ (Heritage buildings) ವಿಧಾನಸೌಧ, ವಿಕಾಸ ಸೌಧ ಹಾಗೂ ಬಹು ಮಹಡಿಯ ಕಟ್ಟಡಗಳನ್ನ ಹಾಳು ಮಾಡದೆ ಅದರ ಸೌಂದರ್ಯವನ್ನು ಯಥಾಸ್ಥಿತಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಸಾರ್ವಜನಿಕನ ಕರ್ತವ್ಯ ಜೊತೆಗೆ ಇಲ್ಲಿ ಕೆಲಸ ಮಾಡುವವರು ಕೂಡ ಈ ಬಗ್ಗೆ ಹೆಚ್ಚಿನ ಗಮನವಹಿಸಬೇಕು.

ಯಾವುದೇ ಕಚೇರಿಯ ಮುಂದೆ ಕುಂಬಳಕಾಯಿ ಒಡೆದು ಆ ಸ್ಥಳವನ್ನು ಗಲೀಜು ಮಾಡುವಂತಿಲ್ಲ. ಆಯುಧ ಪೂಜೆ ಯ ಬಳಿಕ, ಕಟ್ಟಡದಲ್ಲಿ ಹೊತ್ತಿಸಿರುವ ದೀಪ ಲೈಟ್ಸ್ (lights) ಎಲ್ಲವನ್ನು ಸ್ವಿಚ್ ಆಫ್ (switch off) ಮಾಡಿ ಕಟ್ಟಡದಿಂದ ಹೊರಬರಬೇಕು.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನವಹಿಸಬೇಕು. ಇನ್ನು ಪೂಜೆಯಾದ ನಂತರ ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಅದನ್ನ ಸರಿಯಾಗಿ ಡಸ್ಟ್ ಬಿನ್ ನಲ್ಲಿ ಹಾಕಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಈ ರೀತಿಯಾಗಿ ಎಚ್ಚರಿಕೆ ಕೊಡ್ತಾ ಇರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಸರ್ಕಾರ ಸ್ವಚ್ಛತೆಯ (cleanliness) ಬಗ್ಗೆ ನೈರ್ಮಲೀಕರಣದ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದು ಆದರೆ ಎಲ್ಲಾ ಕಚೇರಿಯಲ್ಲಿಯೂ ಇದನ್ನ ಅನುಸರಿಸಿರಲಿಲ್ಲ.

ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿರುವವರಿಗೆ ಬಿಗ್ ಅಪ್ಡೇಟ್! ಕಾರ್ಡ್ ವಿತರಣೆಗೆ ಕಟ್ಟುನಿಟ್ಟಿನ ಕ್ರಮ

ಹಾಗಾಗಿ ಈ ಬಾರಿ ಪಾರಂಪರಿಕ ಕಟ್ಟಡದ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿಯ ಅಥವಾ ಸರ್ಕಾರಿ ನೌಕರರ ಕರ್ತವ್ಯವಾಗಿದ್ದು (Government employees responsibility) ಸ್ವಯಂಪ್ರೇರಣೆಯಿಂದ ಮೇಲಿನ ಎಲ್ಲ ಪ್ರಕಟಣೆಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಆಯುಧ ಪೂಜೆಯನ್ನು ನೆರವೇರಿಸಬೇಕು ಎಂಬುದಾಗಿ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಇಷ್ಟಾಗಿಯೂ ಅಧಿಕಾರಿಗಳು ಸ್ಪಂದಿಸದೆ ಇದ್ದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅನಿವಾರ್ಯವಾಗಿ ಜವಾಬ್ದಾರಿ ನಿಗದಿ ಪಡಿಸಬೇಕಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

Arishina Kumkuma should not be used for Dasara Ayudha Puja

Follow us On

FaceBook Google News

Arishina Kumkuma should not be used for Dasara Ayudha Puja