ಮಹಿಳಾ ಸಬಲೀಕರಣಕ್ಕಾಗಿ (women empowerment) ರಾಜ್ಯ ಸರ್ಕಾರ, ಉಚಿತ ಬಸ್ (free bus) ಪ್ರಯಾಣಕ್ಕಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಅಡಿಯಲ್ಲಿ 2000 ಹಾಗೂ ಮಹಿಳೆಯರ ಸ್ವಉದ್ಯೋಗಕ್ಕೆ ಬಡ್ಡಿ ರಹಿತ ಸಾಲ (loan without interest) ಸೌಲಭ್ಯವನ್ನು ಕೂಡ ನೀಡಲು ಮುಂದಾಗಿದೆ.

ಇದರ ಜೊತೆಗೆ ಮತ್ತೊಂದು ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ತ್ರಿಲಿಂಗಿ (transgender) ಅಲ್ಪಸಂಖ್ಯಾತರಿಗೂ (minorities) ಕೂಡ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಪ್ರಯೋಜನ ನೀಡಲು ಸರ್ಕಾರ ಒಂದಾಗಿದೆ.

Gruha Lakshmi Scheme For Transgender or Mangalamukhi, Key Decision by Karnataka Govt

ಸರ್ಕಾರದ ಸಬ್ಸಿಡಿ ಸಾಲದ ಯೋಜನೆ; ಇಂತಹವರಿಗೆ ಸಿಗಲಿದೆ 5 ಲಕ್ಷ ಸಾಲಕ್ಕೆ 2.5 ಲಕ್ಷ ಸಬ್ಸಿಡಿ

ಮಂಗಳಮುಖಿಯರಿಗೂ (transgender) ಗೃಹಲಕ್ಷ್ಮಿ ಯೋಜನೆ 2000ರೂ. ಜಮಾ ಮಾಡಲಿದೆ ಸರ್ಕಾರ!

ಈ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾಕಷ್ಟು ಮಹತ್ವದ ನಿರ್ಧಾರಗಳನ್ನು ಸರ್ಕಾರ ಕೈಗೊಂಡಿದೆ, ಇದರಲ್ಲಿ ಮಹಿಳೆಯ ಸಬಲೀಕರಣಕ್ಕೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರುವುದು ಹಾಗೂ ಅದಕ್ಕಾಗಿ ಹಣವನ್ನು ಮೀಸಲಿಡುವುದು ಕೂಡ ಬಹಳ ಮುಖ್ಯವಾಗಿರುವ ವಿಚಾರವಾಗಿತ್ತು.

ಕಳೆದ ಆಗಸ್ಟ್ ತಿಂಗಳ ಕೊನೆಯಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರ ಅಧಿಕೃತವಾಗಿ ಜಾರಿಗೆ ತಂದಿತ್ತು. ಈ ಮೂಲಕ ಫಲಾನುಭವಿ ಮಹಿಳೆಯರ ಖಾತೆಗೆ (Bank Account) 2,000ಗಳನ್ನು ಜಮಾ ಮಾಡಲಾಗಿದೆ.

ಇನ್ನು ಸೆಪ್ಟೆಂಬರ್ ತಿಂಗಳಿನ ಎರಡನೇ ಕಂತಿನ ಹಣವನ್ನು ಕೂಡ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದು ಸಾಕಷ್ಟು ಮಹಿಳೆಯರ ಖಾತೆಗೆ ಹಣ (direct bank transfer) ಸಂದಾಯವಾಗಿದೆ.

ಇನ್ನು ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದ್ದು ಅಕ್ಟೋಬರ್ ಕೊನೆಯವರೆಗೆ ಪ್ರತಿಯೊಬ್ಬ ಮಹಿಳಾ ಫಲಾನುಭವಿಗಳ ಖಾತೆಗೆ (Bank Account) ಎರಡು ಕಂತುಗಳ ಹಣ ವರ್ಗಾವಣೆ (Money Transfer) ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇನ್ನು ಸಚಿವ ಸಂಪುಟ ಸಭೆಯಲ್ಲಿ ಮುಖ್ಯವಾಗಿ ಮಂಗಳಮುಖಿಯರಿಗೂ ಕೂಡ ರೂ.2000ಗಳನ್ನು ಕೊಡಬೇಕು ಎನ್ನುವುದಾಗಿ ಚರ್ಚೆ ನಡೆಸಿ ಸರ್ಕಾರ ಇದಕ್ಕೆ ಅನುಮೋದನೆ ನೀಡಿದೆ.

ಇನ್ಮುಂದೆ ಫ್ರೀ ಅಕ್ಕಿ ಸಿಗುತ್ತಾ? ಇಲ್ಲವೇ ಹಣ ಸಿಗುತ್ತಾ? ಅನ್ನಭಾಗ್ಯ ಯೋಜನೆಯ ಕುರಿತು ಬಿಗ್ ಅಪ್ಡೇಟ್

Gruha Lakshmi Yojaneರಾಜ್ಯದಲ್ಲಿ ಒಟ್ಟು ಮೂರರಿಂದ ನಾಲ್ಕು ಲಕ್ಷ ಮಂಗಳಮುಖಿಯರು ಇದ್ದಾರೆ, ಅದರಲ್ಲಿ ಸುಮಾರು 41,312ರಷ್ಟು ಮತದಾರರು (voters) ಇದ್ದಾರೆ. ಇನ್ನು ಸಾಕಷ್ಟು ಜನರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ.

ನಮಗೂ ಕೂಡ ಮತದಾನದ ಹಕ್ಕಿದೆ ನಾವು ಕೂಡ ಮತ ಚಲಾಯಿಸುತ್ತೇವೆ ನಾವು ರಾಜ್ಯದಲ್ಲಿ ಇತರ ಮಹಿಳೆಯರಂತೆಯೇ ಜೀವನ ನಡೆಸುತ್ತಿದ್ದೇವೆ ಆದರೆ ಸರ್ಕಾರದ ಯೋಜನೆ ವಿಚಾರ ಬಂದಾಗ ನಮ್ಮನ್ನ ಮಾತ್ರ ಬದಿಯಲ್ಲಿ ಇಡುವುದು ಸರಿಯಲ್ಲ ಎಂದು ಪದ್ಮಶ್ರೀ ಮಂಜಮ್ಮ ಜೋಗತಿ (manjamma jogathi) ಸರ್ಕಾರಕ್ಕೆ ಪ್ರಶ್ನೆ ಮಾಡಿದರು

ಅಲ್ಪಸಂಖ್ಯಾತ ಮಂಗಳಮುಖಿಯರ ಮನವಿಯನ್ನು ಪರಿಗಣಿಸಿರುವ ಸರ್ಕಾರ ಈಗ ಅಂತವರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ನೀಡಲು ಮುಂದಾಗಿದೆ.

ಕೊನೆಗೂ ಜಮಾ ಆಗಿದೆ ಎರಡನೇ ಕಂತಿನ ಹಣ; ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಸರ್ಕಾರ ಯಾವುದೇ ಯೋಜನೆಯನ್ನು ಜಾರಿಗೆ ತಂದರು ಅದು ಮಹಿಳೆಯರಿಗೆ ಹೇಗೆ ಸಿಗುತ್ತದೆಯೋ ಅದೇ ರೀತಿ ನಮಗೂ ಕೂಡ ಸಿಗಬೇಕು. ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣ ನಮಗೂ ಸಿಗಬೇಕು ಅದರಂತೆಯೇ ಗೃಹಲಕ್ಷ್ಮಿ ಯೋಜನೆಯ ಹಣವೂ ಕೂಡ ನಮಗೆ ಸಂದಾಯವಾಗಬೇಕು ಎಂದು ಮಂಗಳಮುಖಿಯರ ಪರವಾಗಿ ಮಂಜಮ್ಮ ಜೋಗತಿ ಸರ್ಕಾರದ ಮೊರೆ ಹೋಗಿದ್ದರು.

ಎಲ್ಲರ ಮನವಿಯನ್ನು ಪರಿಗಣಿಸಿ ಸರ್ಕಾರ ಈಗ ಮಂಗಳಮುಖಿಯರನ್ನು ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಪರಿಗಣಿಸಿದೆ.

ಇದುವರೆಗೆ ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವೋ ಅಂಥವರು ಮತ್ತೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (ration card correction) ಮಾಡಲು ಸರ್ಕಾರ ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಮಾಡಿಕೊಂಡು ಮಹಿಳೆಯ ಹೆಸರಿನಲ್ಲಿ ರೇಷನ್ ಕಾರ್ಡ್ (Ration Card) ಮಾಡಿಕೊಂಡರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Gruha Lakshmi Scheme For Transgender or Mangalamukhi, Key Decision by Karnataka Govt