ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಮತ್ತೊಂದು ಕೊಡುಗೆ! ಬಡ್ಡಿಯೇ ಇಲ್ಲದೆ 2 ಲಕ್ಷ ಸಾಲ ಸೌಲಭ್ಯ
ಮಹಿಳೆಯರು ತಮ್ಮದೇ ಆಗಿರುವ ಸ್ವಂತ ಉದ್ಯಮ (own business) ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸರ್ಕಾರ ಬಡ್ಡಿಯೇ ಇಲ್ಲದೆ ಸಾಲ ಸೌಲಭ್ಯಗಳನ್ನು (Loan without interest) ಈ ಯೋಜನೆಯ ಮೂಲಕ ನೀಡುತ್ತದೆ.
ಮಹಿಳಾ ಸಬಲೀಕರಣ (women empowerment) ಎನ್ನುವ ವಿಚಾರಕ್ಕೆ ಸಂಬಂಧಪಟ್ಟಹಾಗೆ ಕೇಂದ್ರ ಸರ್ಕಾರ (Central government) ಹಾಗೂ ರಾಜ್ಯ ಸರ್ಕಾರ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು (government schemes) ಜಾರಿಗೆ ತರುತ್ತಲೇ ಇರುತ್ತವೆ
ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿಗಳಾಗಿರಬೇಕು (independent women) ಯಾವುದೇ ಕಾರಣಕ್ಕೂ ಯಾರ ಮೇಲೆಯೂ ಅವಲಂಬಿತರಾಗಿ ಇರಬಾರದು ಎನ್ನುವ ಕಾರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಅಂತಹ ಯೋಜನೆಗಳಿಂದ ಇಂದು ಲಕ್ಷಾಂತರ ಮಹಿಳೆಯರು ಲಾಭ ಪಡೆದುಕೊಳ್ಳುತ್ತಿದ್ದಾರೆ.
ದಸರಾ (Dasara festival) ಉತ್ಸವದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ರಾಜ್ಯ ಸರ್ಕಾರ ಮಹಿಳೆಯರಿಗಾಗಿ ನೀಡಲಿರುವ ಮತ್ತೊಂದು ಸೌಲಭ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವಿವಾಹಿತ ಮಹಿಳೆಯರಿಗೂ ಸಿಗಲಿದೆ ₹500 ರೂಪಾಯಿ; ಹೊಸ ಯೋಜನೆಗೆ ಇಂದೇ ಅಪ್ಲೈ ಮಾಡಿ
ಬಡ್ಡಿ ರಹಿತ ಸಾಲ – Loan
ಮಹಿಳೆಯರು ತಮ್ಮದೇ ಆಗಿರುವ ಸ್ವಂತ ಉದ್ಯಮ (own business) ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸರ್ಕಾರದ ಈ ಯೋಜನೆ ಬಹಳ ಪ್ರಯೋಜನಕಾರಿಯಾಗಲಿದೆ. ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಸರ್ಕಾರ ಬಡ್ಡಿಯೇ ಇಲ್ಲದೆ ಸಾಲ ಸೌಲಭ್ಯಗಳನ್ನು (Loan without interest) ಸ್ವಉದ್ಯೋಗ ಮಾಡುವ ಮಹಿಳೆಯರಿಗೆ ಈ ಯೋಜನೆಯ ಮೂಲಕ ನೀಡುತ್ತದೆ.
ಎರಡು ಲಕ್ಷ ರೂಪಾಯಿಗಳ ವರೆಗೆ ಬಡ್ಡಿ ರಹಿತ ಸಾಲ ಪಡೆಯಿರಿ!
ಈ ಮೂಲಕ ಮಹಿಳೆಯರು ಸುಲಭವಾಗಿ ಸಣ್ಣ ಪುಟ್ಟ ಸ್ವಂತ ಉದ್ಯಮ ಆರಂಭಿಸಲು ಸಹಾಯವಾಗುತ್ತದೆ. ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಹಾಲಿನ ಉತ್ಪನ್ನಗಳು (diary products), ಬಟ್ಟೆ ವ್ಯಾಪಾರ, ತಯಾರಿಕೆ ಮೊದಲಾದ ಸಣ್ಣ ಪುಟ್ಟ ಉದ್ಯಮವನ್ನು ಆರಂಭಿಸಲು ಸಾಧ್ಯವಿದೆ.
ಮಂಗಳಮುಖಿಯರಿಗೂ ಒಲಿದು ಬಂದ ಗೃಹಲಕ್ಷ್ಮಿ ಯೋಜನೆ ಭಾಗ್ಯ; ಸರ್ಕಾರದ ಮಹತ್ವದ ನಿರ್ಧಾರ
ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಿಷ್ಟು!
“ನಮ್ಮ ಸರ್ಕಾರ ಮಹಿಳೆಯರ ಸ್ವಾವಲಂಬಿ ಬದುಕಿಗೆ ಬೆಂಬಲವಾಗಿ ನಿಂತಿದೆ. ಸ್ತ್ರೀಶಕ್ತಿ ಗುಂಪುಗಳ ಸಹಾಯದ ಮೂಲಕ ಮಹಿಳೆಯರು ಗುಡಿ ಕೈಗಾರಿಕೆ, ಮತ್ತಿತರ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುವುದರ ಮೂಲಕ ಸ್ವಾವಲಂಬಿಗಳಾಗಿದ್ದಾರೆ, ಜೊತೆಗೆ ಕುಟುಂಬದ ಖರ್ಚು ವೆಚ್ಚಗಳ ನಿರ್ವಹಣೆಯನ್ನು ಮಾಡುತ್ತಿದ್ದಾರೆ.
ಸ್ತ್ರೀ ಶಕ್ತಿ ಆರಾಧನೆಯ ನವರಾತ್ರಿಯ ಆಚರಣೆಯ ಸಮಯದಲ್ಲಿ ಸಬಲೀಕರಣಕ್ಕೆ ಬದ್ಧವಾಗಿರುವ ನಮ್ಮ ಸರ್ಕಾರ, ಮಹಿಳೆಯರ ಏಳ್ಗೆಗಾಗಿ ಸದಾ ಶ್ರಮಿಸುತ್ತದೆ” ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ವರ್ಷ ಒಂದಲ್ಲ ಒಂದು ಉಪಯುಕ್ತವಾದ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದ್ದು, ಇದರಿಂದ ಲಕ್ಷಾಂತರ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಿದೆ.
ಸರ್ಕಾರದ ಸಬ್ಸಿಡಿ ಸಾಲದ ಯೋಜನೆ; ಇಂತಹವರಿಗೆ ಸಿಗಲಿದೆ 5 ಲಕ್ಷ ಸಾಲಕ್ಕೆ 2.5 ಲಕ್ಷ ಸಬ್ಸಿಡಿ
Govt Scheme For Interest Free Loan Facility for Women
Follow us On
Google News |