ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್, ಜೊತೆಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗೋಲ್ಲ

ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿದ್ದರು ಕೂಡ ಕಳೆದ ಆರು ತಿಂಗಳಿನಿಂದ ರೇಷನ್ ಖರೀದಿ ಮಾಡದೆ ಕಾರ್ಡ್ ಬಳಸದೆ ಇರುವುದರಿಂದ ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು (Cancel) ಸರ್ಕಾರ ತೀರ್ಮಾನಿಸಿದೆ.

ಪಡಿತರ ಚೀಟಿ (ration card) ಇದ್ರೇನೇ ಸರ್ಕಾರದ ಹಲವಾರು ಯೋಜನೆಗಳ ಲಾಭ ಪಡೆಯಬಹುದಾಗಿದೆ, ಅದರಲ್ಲೂ ಗ್ಯಾರಂಟಿ ಯೋಜನೆಗಳ (guarantee schemes) ಬಗ್ಗೆ ಮಾತನಾಡುವುದಾದರೆ ಅನ್ನಭಾಗ್ಯ ಯೋಜನೆ (Annabhagya Yojana) ಹಾಗೂ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಫಲಾನುಭವಿಗಳು ರೇಷನ್ ಕಾರ್ಡ್ ಹೊಂದಿರುವವರೇ ಆಗಿರುತ್ತಾರೆ.

ಕೆಲವೊಮ್ಮೆ ನಮಗೆ ಸುಲಭವಾಗಿ ಸಿಕ್ಕಿದ್ದಕ್ಕೆ ಬೆಲೆ ಇರುವುದಿಲ್ಲ ಎನ್ನುವುದಕ್ಕೆ ಈ ರೇಷನ್ ಕಾರ್ಡ್ ಪ್ರಕರಣಗಳೇ ಸಾಕ್ಷಿಯಾಗಿವೆ. ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line), ದೇಶದಲ್ಲಿ ಜನರ ಹಸಿವನ್ನು ನೀಗಿಸುವ ಸಲುವಾಗಿ ಬಿಪಿಎಲ್ (BPL card) ರೇಷನ್ ಕಾರ್ಡ್ ನೀಡಲಾಗುತ್ತದೆ.

ಗೃಹಜ್ಯೋತಿ ಯೋಜನೆ ಕ್ಯಾನ್ಸಲ್ ಆಗುತ್ತಾ? ಉಚಿತ ವಿದ್ಯುತ್ ಕೊಟ್ಟಿದ್ದೆ ಎದುರಾಯಿತು ಸಂಕಷ್ಟ

ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್, ಜೊತೆಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗೋಲ್ಲ - Kannada News

ಕಾರ್ಡ್ ಇದ್ದು ಬಳಸಿಕೊಂಡಿಲ್ವಾ?

ಹೌದು, ಎಷ್ಟೋ ಜನರಿಗೆ ಊಟಕ್ಕೂ ಇಲ್ಲದ ಸಮಯದಲ್ಲಿ ರೇಷನ್ ಕಾರ್ಡ್ ಇದ್ರೆ ಸರ್ಕಾರದಿಂದ ಉಚಿತವಾಗಿ ಸಿಗುವ ಪಡಿತರ ತೆಗೆದುಕೊಳ್ಳಬಹುದು ಆದರೆ ಇಂದು ಅದೆಷ್ಟೋ ಜನ ಬಿಪಿಎಲ್ ರೇಷನ್ ಕಾರ್ಡ್ (Ration Card) ಹೊಂದಿದ್ದರು ಕೂಡ ಕಳೆದ ಆರು ತಿಂಗಳಿನಿಂದ ರೇಷನ್ ಖರೀದಿ ಮಾಡದೆ ಕಾರ್ಡ್ ಬಳಸದೆ ಇರುವುದರಿಂದ ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು (Cancel) ಸರ್ಕಾರ ತೀರ್ಮಾನಿಸಿದೆ.

ರೇಷನ್ ಕಾರ್ಡ್ ರದ್ದಾಗುತ್ತೆ!

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ 5 ಕೆಜಿ ಉಚಿತ ಅಕ್ಕಿ ಹಾಗೂ ಇತರ ಪಡಿತರಗಳು ಕೂಡ ಸಿಗುತ್ತವೆ, ಈಗಂತೂ ಅನ್ನಭಾಗ್ಯ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ 5 ಕೆಜಿ ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ವರ್ಗಾವಣೆ (DBT) ಮಾಡುತ್ತಿದೆ.

ಆದರೆ ಅದೆಷ್ಟೋ ಜನ ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಅದರ ಬಳಕೆ ಮಾಡಿಕೊಳ್ಳುತ್ತಿಲ್ಲ. ಇದರಿಂದಾಗಿ ನಿಜವಾಗಿ ಬಿಪಿಎಲ್ ಕಾರ್ಡ್ ಯಾರಿಗೆ ಅಗತ್ಯ ಇದೆಯೋ ಅಂತವರಿಗೆ ವಂಚನೆ ಆಗುತ್ತಿದೆ ಎಂಬುದನ್ನು ಸರ್ಕಾರ ಗಮನಿಸಿದೆ.

ಈ ಕಾರಣಕ್ಕಾಗಿ ಆರು ತಿಂಗಳಿನಿಂದ ಯಾರು ಪಡಿತರ ತೆಗೆದುಕೊಂಡಿಲ್ಲವೋ ಅಂತವರ ರೇಷನ್ ಕಾರ್ಡ್ ಅನ್ನು ತಕ್ಷಣವೇ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಒಟ್ಟು ಇರುವ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳು 11695029. ಇದರಲ್ಲಿ ಸುಮಾರು 3.26 ಲಕ್ಷ ಪಡಿ ಬಿಪಿಎಲ್ ಪಡಿತರ ಹೊಂದಿರುವವರು ಕಳೆದ ಆರು ತಿಂಗಳಿನಿಂದ ಪಡಿತರವನ್ನೇ ತೆಗೆದುಕೊಂಡಿಲ್ಲ. ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು (ration card cancellation) ಸರ್ಕಾರ ನಿರ್ಧರಿಸಿದೆ.

ಗೃಹಲಕ್ಷ್ಮಿ ಯೋಜನೆ 2ನೇ ಕಂತು ಬಿಡುಗಡೆ ಆದ್ರೂ ನಿಮಗಿನ್ನು ಬಂದೇ ಇಲ್ವಾ? ಅದಕ್ಕೆ ಇಲ್ಲಿದೆ ಕಾರಣ

ರೇಷನ್ ಕಾರ್ಡ್ ರದ್ದತಿ ಮಾತ್ರವಲ್ಲ ಸೌಲಭ್ಯವು ಸಿಗುವುದಿಲ್ಲ!

Ration card of such people can be canceled and no government facilities are availableಪಡಿತರ ಚೀಟಿಯನ್ನು ಪಡಿತರ ತೆಗೆದುಕೊಳ್ಳುವುದಕ್ಕೆ ಬಳಸದೆ ಇರುವ ಕುಟುಂಬದ ಪಡಿತರ ಚೀಟಿಯನ್ನು ಸರ್ಕಾರ ರದ್ದು ಪಡಿಸಲಿದೆ ಇನ್ನು ಈ ರದ್ದುಪಡಿಗೂ ಮುನ್ನ ಸರ್ಕಾರ ಯಾವುದೇ ರೀತಿಯ ನೋಟಿಸ್ ಕೊಡುವುದಿಲ್ಲ, ನೇರವಾಗಿ ರೇಷನ್ ಕಾರ್ಡ್ ರದ್ದಾಗುತ್ತದೆ.

ಇನ್ನೊಂದು ಶಾಕಿಂಗ್ ವಿಷಯ ಅಂದ್ರೆ ರೇಷನ್ ಕಾರ್ಡ್ ರದ್ದಾಗುವುದರ ಜೊತೆಗೆ ಬಿಪಿಎಲ್ ಕಾರ್ಡ್ (BPL Card) ಅಡಿಯಲ್ಲಿ ಯಾರು ಸರ್ಕಾರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೋ ಇಂಥವರಿಗೆ ಸರ್ಕಾರದ ಸೌಲಭ್ಯಗಳು ಕೂಡ ಸಿಗದೇ ಹೋಗಬಹುದು.

ನಿಮ್ಮ ತೋಟ ಅಥವಾ ಜಮೀನಿಗೆ ಹೋಗಲು ರಸ್ತೆ ಇಲ್ಲವೇ? ಬಂತು ರೈತರಿಗಾಗಿ ಹೊಸ ರೂಲ್ಸ್

ಇನ್ನು ಒಂದು ವೇಳೆ ಪಡಿತರ ಚೀಟಿ ರದ್ದಾದ ನಂತರ ಮತ್ತೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ, ಆದರೆ ತೀವ್ರವಾಗಿ ಕಾಯಿಲೆಯಿಂದ (illness) ಬಳಲುತ್ತಿರುವವರು ಪಿಂಚಣಿಯ (pension) ಅತಿ ಅಗತ್ಯ ಇರುವಂತವರು ಮಾತ್ರ ಕೆಲವು ಶರತ್ತುಗಳ (conditions) ಆಧಾರದ ಮೇಲೆ ಮತ್ತೆ ಅರ್ಜಿ ಸಲ್ಲಿಸಿ ಪಡಿತರ ಚೀಟಿ ಪಡೆದುಕೊಳ್ಳಬಹುದಾಗಿದೆ.

ಪಡಿತರ ಕಾರ್ಡ್ ಗಳಿಂದಾಗಿ ಸರ್ಕಾರಕ್ಕೆ 60 ಕೋಟಿಗೂ ಹೆಚ್ಚಿನ ಉಳಿತಾಯವಾಗಲಿದೆ, ಆದರೆ ಲಕ್ಷಾಂತರ ಕುಟುಂಬದವರು ಇನ್ನೂ ಮುಂದೆ ಪಡಿತರವಾಗಲಿ ಅಥವಾ ಸರಕಾರದ ಇತರ ಸೌಲಭ್ಯವಾಗಲಿ ಪಡೆದುಕೊಳ್ಳಲು ಸಾಧ್ಯವಾಗದೆ ಸಮಸ್ಯೆ ಎದುರಿಸಬೇಕಾಗಬಹುದು.

Ration card of such people can be canceled and no government facilities are available

Follow us On

FaceBook Google News

Ration card of such people can be canceled and no government facilities are available