ಎರಡೂ ಕಂತಿನ ಗೃಹಲಕ್ಷ್ಮಿ ಹಣ ಬಂದಿಲ್ವಾ? ಇವರನ್ನು ಸಂಪರ್ಕಿಸಿ, ನಾಳೆಯೇ ಹಣ ಬರುತ್ತೆ

ನವರಾತ್ರಿ, ದಸರಾ, ದೀಪಾವಳಿ ಹಬ್ಬದ (festival season) ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗೆ ಎರಡು ಸಾವಿರ ರೂಪಾಯಿಗಳನ್ನು ಜಮಾ ಮಾಡಿ ಹಬ್ಬದ ಉಡುಗೊರೆ ನೀಡಿದೆ. ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಎರಡನೇ ಕಂತಿನ ಹಣವು ಕೂಡ ಮಹಿಳೆಯರ ಕೈ ಸೇರಿದೆ.

ಎರಡನೇ ಕಂತಿನ ಹಣ ಬಿಡುಗಡೆ

ಮೊದಲ ಕಂತಿನ ಹಣವನ್ನು ಆಗಸ್ಟ್ 30ರಂದು ಸರ್ಕಾರ ಬಿಡುಗಡೆ ಮಾಡಿತ್ತು, ಅದಾದ ಬಳಿಕ ಎರಡನೇ ಕಂತಿನ ಹಣ ಅಂದರೆ ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ ಆಗುತ್ತದೆ ಎಂದು ಮಹಿಳೆಯರು ಕಾದು ಕುಳಿತಿದ್ದರು. ಎರಡನೇ ಕಂತಿನ ಹಣವನ್ನು (Gruha lakshmi scheme) ಕೂಡ ಈಗ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ವರ್ಗಾವಣೆ ಮಾಡಲಾಗಿದೆ (DBT).

ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್, ಜೊತೆಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗೋಲ್ಲ

ಅಕ್ಟೋಬರ್ 17ನೇ ತಾರೀಖಿನಿಂದ ಗೃಹಿಣಿಯರ ಖಾತೆಗೆ 2ನೇ ಕಂತಿನ ಹಣ ಜಮಾ ಆಗುತ್ತಿದೆ, ಇನ್ನೂ ಸಾಕಷ್ಟು ಮಹಿಳೆಯರಿಗೆ ಹಣ ಬರಲಿಕ್ಕಿದೆ. ಅಕ್ಟೋಬರ್ 31ರ ಒಳಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುವುದು ಎಂದು ಸರ್ಕಾರ ತಿಳಿಸಿದೆ.

ನಿಮ್ಮ ಖಾತೆಗೆ ಇನ್ನೂ ಹಣ ಬಂದಿಲ್ವಾ ಹಾಗಾದ್ರೆ ಇವರನ್ನು ಸಂಪರ್ಕಿಸಿ?

ಎರಡನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿದೆ, ಆದರೆ ಇನ್ನೂ ಕೂಡ ಮೊದಲ ಕಂತಿನ ಹಣವನ್ನೇ ಪಡೆದುಕೊಳ್ಳದೆ ಇರುವ ಅರ್ಜಿದಾರರು ಕೂಡ ಇದ್ದಾರೆ. ಹೌದು ಸರ್ಕಾರ ಸುಮಾರು 85%ದಷ್ಟು ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Transfer) ಮಾಡಿದೆ, ಆದರೆ ಇನ್ನೂ ಸಾಕಷ್ಟು ಜನ ಅರ್ಜಿ ಹಾಕಿದರು ಕೂಡ ಹಣ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಇದಕ್ಕೆ ಮುಖ್ಯವಾಗಿರುವ ಕಾರಣ ಫಲಾನುಭವಿ ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳು. ನಿಮ್ಮ ಖಾತೆಯಲ್ಲಿ ಒಂದು ಸಣ್ಣ ಹೆಸರಿನ ವ್ಯತ್ಯಾಸವಾದರೂ ಕೂಡ ಹಣ ವರ್ಗಾವಣೆ ಆಗುವುದಿಲ್ಲ.

ಎನ್ ಪಿ ಸಿ ಐ, ಆಧಾರ್ ಮ್ಯಾಪಿಂಗ್, ರೇಷನ್ ಕಾರ್ಡ್ (ration card correction) ನಲ್ಲಿ ಹೆಸರು ಬದಲಾವಣೆ, ಬ್ಯಾಂಕ್ ಖಾತೆಯನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳುವುದು ಈ ಮೊದಲಾದ ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕು.

ಒಂದು ವೇಳೆ ಈ ಕೆಲಸಗಳು ಸರಿಯಾಗಿ ಆಗದೆ ಇದ್ದಲ್ಲಿ ಅಂತವರ ಖಾತೆಗೆ ಹಣ ಜಮಾ ಆಗುವುದಿಲ್ಲ. ಹಾಗಾದ್ರೆ ಅರ್ಜಿದಾರರು ತಮ್ಮ ಖಾತೆಗೂ ಹಣ ಬರುವಂತೆ ಏನು ಮಾಡಬೇಕು?

ಇದಕ್ಕೆ ಕೆಲವು ಪ್ರಮುಖ ಪರಿಹಾರಗಳನ್ನು ಕೂಡ ಸರ್ಕಾರ ಸೂಚಿಸಿದೆ. ಈಗಾಗಲೇ ಅರ್ಜಿ ಇದ್ದಾರರಿಗೆ ಹಣ ಬಾರದೆ ಇದ್ದಲ್ಲಿ ಅಂತವರ ಹೆಸರುಗಳ ಲಿಸ್ಟ್ ಅನ್ನು ಅಂಗನವಾಡಿ ಶಿಕ್ಷಕರಿಗೆ ಸರ್ಕಾರ ಕಳುಹಿಸಿಕೊಟ್ಟಿದೆ.

ಗೃಹಜ್ಯೋತಿ ಯೋಜನೆ ಕ್ಯಾನ್ಸಲ್ ಆಗುತ್ತಾ? ಉಚಿತ ವಿದ್ಯುತ್ ಕೊಟ್ಟಿದ್ದೆ ಎದುರಾಯಿತು ಸಂಕಷ್ಟ

Karnataka Gruha Lakshmi Schemeಅಲ್ಲದೆ ಅಂಗನವಾಡಿ ಶಿಕ್ಷಕರು ಕೂಡ ತಮ್ಮ ಗ್ರಾಮದಲ್ಲಿ ಯಾವ ಮಹಿಳೆಗೆ ಹಣ ಬಂದಿಲ್ಲ ಎಂಬುದರ ಲಿಸ್ಟ್ ಅನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹಾಗಾಗಿ ನಿಮ್ಮ ಖಾತೆಗೆ ಹಣ ಬಾರದೇ ಇದ್ದರೆ ಸರ್ಕಾರದ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಅಂಗನವಾಡಿ ಸಹಾಯಕಿಯರು ಅಥವಾ ಶಿಕ್ಷಕರ ಸಹಾಯ ಪಡೆದು ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು. ನಿಮ್ಮ ಖಾತೆಯಲ್ಲಿ ಯಾವ ಸಮಸ್ಯೆ ಇದೆ ಯಾವ ರೀತಿ ಸರಿ ಮಾಡಿಕೊಳ್ಳಬೇಕು. ಎಂಬಿತ್ಯಾದಿ ಮಾಹಿತಿಗಳನ್ನು ಅವರೇ ನೀಡುತ್ತಾರೆ.

ಗೃಹಲಕ್ಷ್ಮಿ ಯೋಜನೆ 2ನೇ ಕಂತು ಬಿಡುಗಡೆ ಆದ್ರೂ ನಿಮಗಿನ್ನು ಬಂದೇ ಇಲ್ವಾ? ಅದಕ್ಕೆ ಇಲ್ಲಿದೆ ಕಾರಣ

ಇನ್ನು ಎರಡನೆಯದಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಡಿಪಿಓ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಇವರ ಬಳಿಯೂ ಯಾರ ಖಾತೆಗೆ ಹಣ ಬಂದಿಲ್ಲ ಎನ್ನುವ ಲಿಸ್ಟ್ ಇರುತ್ತದೆ, ಹಾಗಾಗಿ ನೀವು ಇವರ ಬಳಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು. ಇದಕ್ಕಾಗಿ ಸ್ಥಳೀಯ ಸಿಡಿಪಿಓ ಅಧಿಕಾರಿಗಳ ಕಚೇರಿಗೆ ಹೋಗಬೇಕಾಗುತ್ತದೆ. ಅಂಗನವಾಡಿ ಶಿಕ್ಷಕರ ಬಳಿ ಸಿಡಿಪಿಓ (CDPO) ಕಚೇರಿ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಅದೇ ರೀತಿ ಶಿಶು ಅಭಿವೃದ್ಧಿ ಇಲಾಖೆಯ ಸ್ಥಳೀಯ ಅಧಿಕಾರಿಗಳ ಬಳಿಯೂ ಕೂಡ ನೀವು ಗೃಹಲಕ್ಷ್ಮಿ ಹಣ ಬಾರದೆ ಇದ್ದಲ್ಲಿ ಅವರ ಸಹಾಯ ಪಡೆದುಕೊಳ್ಳಬಹುದು. ಸದ್ಯ ಆನ್ಲೈನ್ ಮೂಲಕ ಅನ್ನಭಾಗ್ಯ ಯೋಜನೆಯ (AnnaBhagya scheme) ಸ್ಟೇಟಸ್ ಚೆಕ್ (status check) ಮಾಡಿದಂತೆ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಲು ಸಾಧ್ಯವಿಲ್ಲ.

ನಿಮ್ಮ ತೋಟ ಅಥವಾ ಜಮೀನಿಗೆ ಹೋಗಲು ರಸ್ತೆ ಇಲ್ಲವೇ? ಬಂತು ರೈತರಿಗಾಗಿ ಹೊಸ ರೂಲ್ಸ್

ಆದರೆ ನವೆಂಬರ್ ಮೊದಲ ವಾರದಿಂದ ಡಿ ಬಿ ಟಿ ಕರ್ನಾಟಕ (DBT Karnataka) ಅಪ್ಲಿಕೇಶನ್ ಹೊಸದಾಗಿ ಬಿಡುಗಡೆ ಆಗಲಿದ್ದು ಇದರಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.

if Gruha Lakshmi Scheme Money Has not received, try this way

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories