ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ದೇವಾಲಯಗಳಿಗೂ ವಿಸ್ತರಣೆ! ದೇವರಿಗೂ ಉಚಿತ ವಿದ್ಯುತ್

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ (government guarantee schemes) ಬಗ್ಗೆ ರಾಜ್ಯಾದ್ಯಂತ ಚರ್ಚೆಗಳು ನಡೆಯುತ್ತಿದೆ. ಎಷ್ಟೋ ಜನ ಯೋಜನೆಗಳಿಂದ ಸಮಾಧಾನಪಟ್ಟಿಕೊಂಡಿದ್ದರೆ ಇನ್ನೊಂದಿಷ್ಟು ಜನರಿಗೆ ಅಸಮಾಧಾನ ಆಗಿದೆ.
ಯಾಕಂದ್ರೆ ರಾಜ್ಯದ ಪ್ರತಿಯೊಬ್ಬರಿಗೂ ಕೂಡ ಎಲ್ಲ ಯೋಜನೆಗಳು ಲಭ್ಯ ಆಗುವುದಿಲ್ಲ, ಈ ಯೋಜನೆಗಳು ಲಭ್ಯವಾಗಬೇಕು ಅಂದ್ರೆ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು. ಆದರೆ ಗೃಹಜ್ಯೋತಿ ಯೋಜನೆ (Gruha jyothi scheme) ಒಂದನ್ನು ಹೊರತುಪಡಿಸಿ ಉಳಿದ ಯೋಜನೆಗಳಿಗೆ ರೇಷನ್ ಕಾರ್ಡ್ (ration card) ಮೊದಲಾದ ದಾಖಲೆಗಳು ಕಡ್ಡಾಯವಾಗಿದೆ.
ಗೃಹಜ್ಯೋತಿ ಯೋಜನೆಯಲ್ಲಿ ಮಾತ್ರ ರಾಜ್ಯದ ಬಹುತೇಕ ಎಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಿದೆ. 200 ಯೂನಿಟ್ (less than 200 unit) ಗಿಂತಲೂ ಕಡಿಮೆ ವಿದ್ಯುತ್ (electricity) ಬಳಸುವ ರಾಜ್ಯದ ಪ್ರತಿಯೊಬ್ಬ ಪ್ರಜೆ ಉಚಿತ ವಿದ್ಯುತ್ (Free Electricity) ಅನ್ನು ಪಡೆಯಬಹುದು. ಈಗ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನಗಳಿಗೂ (Temples) ಉಚಿತ ವಿದ್ಯುತ್ ನೀಡಲು ಮುಂದಾಗಿದೆ.
SSLC ಪಾಸ್ ಆಗಿದ್ರೆ ಸಾಕು ಅರಣ್ಯ ಇಲಾಖೆಯಲ್ಲಿ ಸಿಗುತ್ತೆ ಸರ್ಕಾರಿ ಕೆಲಸ; ಇಂದೇ ಅರ್ಜಿ ಸಲ್ಲಿಸಿ
ಮುಜರಾಯಿ ದೇವಾಲಯಗಳಿಗೆ ವಿಸ್ತರಿಸಿದ ಗೃಹಜ್ಯೋತಿ
ಹೌದು, ಈಗ ರಾಜ್ಯದ ಮನೆಗಳಿಗೆ ಮಾತ್ರವಲ್ಲ ಮುಜರಾಯಿ ಇಲಾಖೆಯ ಅಡಿನಲ್ಲಿ ಬರುವ ದೇವಾಲಯಗಳಿಗೂ ಕೂಡ ಉಚಿತ ವಿದ್ಯುತ್ ನೀಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರದ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಬೊಕ್ಕಸ ಬರಿದಾಗುತ್ತಿದೆ ಎಂದು ವಿಪಕ್ಷ ನಾಯಕರು ದೂರುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತನ್ನ ಉಚಿತ ಯೋಜನೆಯನ್ನು ದೇವಸ್ಥಾನಗಳಿಗೂ ವಿಸ್ತರಿಸಲು ಮುಂದಾಗಿದೆ.
ಸಚಿವರು ಹೇಳಿದ್ದೇನು?
ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಸಿ ದರ್ಜೆಯ ದೇವಸ್ಥಾನಗಳನ್ನು ಕೂಡ ಗೃಹಜ್ಯೋತಿ ಯೋಜನೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ರಾಜ್ಯಾದ್ಯಂತ ಒಂದುವರೆ ಕೋಟಿ ಕುಟುಂಬದ ಸದಸ್ಯರು ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಈಗ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಮುಜರಾಯಿ ಇಲಾಖೆಯ ಸಿ ದರ್ಜೆಯ ದೇವಾಲಯಗಳಿಗೂ (Gruha Jyothi scheme for temples) ಕೂಡ ಈ ಯೋಜನೆಯನ್ನು ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಎಲ್ಲವೂ ಸರಿ ಇದ್ರೂ ಗೃಹಲಕ್ಷ್ಮಿ ಯೋಜನೆ ಹಣ ಯಾಕೆ ಬಂದಿಲ್ಲ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಪಕ್ಕ ಉತ್ತರ
ಸಿಎಂ ಅವರಿಗೆ ಮನವಿ ಪತ್ರ ಬರೆದ ಸಚಿವರು!

ರಾಜ್ಯದಲ್ಲಿ 34,160 ದೇವಾಲಯಗಳು ಸಿ ದರ್ಜೆಗೆ ಸೇರುತ್ತವೆ ಅಂದರೆ ಈ ದೇವಾಲಯಗಳ ಆದಾಯ 5 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಇರುತ್ತದೆ ಇನ್ನು ಸಿ ದರ್ಜೆಯ ದೇವಾಲಯಗಳು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿಯೇ ಇರುವುದರಿಂದ ಇಲ್ಲಿ ಮನೆಗಳಿಗೆ ಖರ್ಚಾಗುವ ವಿದ್ಯುತ್ ಅಷ್ಟೇ ವಿದ್ಯುತ್ ಬಳಕೆ ಆಗುತ್ತದೆಯೇ ಹೊರತು ಹೆಚ್ಚಿನ ವಿದ್ಯುತ್ ಬಳಕೆ ಆಗುವುದಿಲ್ಲ, ಹಾಗಾಗಿ ಇಂತಹ ದೇವಾಲಯಗಳಿಗೂ ಕೂಡ ಉಚಿತ ವಿದ್ಯುತ್ ಬಿಲ್ (Free Electricity Bill) ಬರುವಂತೆ ಮಾಡಬೇಕು ಎನ್ನುವುದು ಸಚಿವರ ಆಗ್ರಹ.
3 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರಾತ್ರೋ ರಾತ್ರಿ ರದ್ದು; ಆಹಾರ ಇಲಾಖೆಯ ಮಹತ್ವದ ಅಪ್ಡೇಟ್!
ಈಗಾಗಲೇ ರಾಜ್ಯದಲ್ಲಿ ಉಚಿತ ವಿದ್ಯುತ್ ನೀಡುತ್ತಿರುವ ಸಲುವಾಗಿ ಸಾಕಷ್ಟು ವಾದ ವಿವಾದಗಳು ನಡೆಯುತ್ತಿವೆ. ಉಚಿತ ವಿದ್ಯುತ್ ದುರ್ಬಳಕೆ ಆಗುತ್ತಿದೆ ಎನ್ನುವ ಮಾಹಿತಿಯು ಇದೆ. ಇನ್ನು ಗೃಹಜ್ಯೋತಿ ಯೋಜನೆಯನ್ನು ಬಡವರಿಗಾಗಿ ಆರಂಭಿಸಿದ್ದು. ಅದು ಒಳ್ಳೆಯದೇ ಆದರೆ ಸರ್ಕಾರಿ ಅಧೀನದಲ್ಲಿ ಇರುವ ಸಂಘ-ಸಂಸ್ಥೆಗಳು ದೇವಾಲಯಗಳು ಮೊದಲಾದವುಗಳಿಗೆ ಉಚಿತ ವಿದ್ಯುತ್ ಕೊಡುವ ಅಗತ್ಯ ಏನಿದೆ ಎಂದು ವಿಪಕ್ಷಗಳು ಪ್ರಶ್ನೆ ಮಾಡುತ್ತಿವೆ.
ಈಗಾಗಲೇ ರಾಜ್ಯದಲ್ಲಿ ವಿದ್ಯುತ್ ಅಭಾವದಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಲೋಡ್ ಶೆಡ್ಡಿಂಗ್ (load shedding) ಪರಿಣಾಮವಾಗಿ ರೈತರು ತಮ್ಮ ಜಮೀನುಗಳಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ನಿಂದ ನೀರು ಹಾಯಿಸಲು ಕೂಡ ಕಷ್ಟ ಪಡುವಂತಾಗಿದೆ.
ಇದೆಲ್ಲದರ ನಡುವೆ ದೇವಾಲಯಗಳಿಗೂ ಕೂಡ ಉಚಿತ ವಿದ್ಯುತ್ ವಿಸ್ತರಿಸುವ ಅಗತ್ಯ ಇಲ್ಲ ಎಂಬುದು ಹಲವರ ವಾದ. ಇದರಿಂದ ರಾಜ್ಯದ ಬೊಕ್ಕಸ ಬರೆದಾಗುವುದು ಮಾತ್ರವಲ್ಲದೆ ರಾಜ್ಯಾದ್ಯಂತ ವಿದ್ಯುತ್ ಸಮಸ್ಯೆ ಇನ್ನಷ್ಟು ಜಾಸ್ತಿ ಆಗೋದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಪಕ್ಷಗಳು ಸರ್ಕಾರದ ಈ ಚಿಂತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Gruha Jyothi Yojana Free Electricity Scheme Extension for Temples







