ನೀವು ಕರ್ನಾಟಕ ಅರಣ್ಯ ಇಲಾಖೆಯಲ್ಲಿ (Karnataka forest department) ಕೆಲಸ ಮಾಡಲು ಬಯಸುತ್ತೀರಾ? ನೀವು ಕಡಿಮೆ ಶಿಕ್ಷಣ (ಎಜುಕೇಶನ್ಪ) ಡೆದುಕೊಂಡಿದ್ದೀರಾ ಹಾಗಾದ್ರೆ ಚಿಂತೆ ಬೇಡ, ಸುಮಾರು 300ಕ್ಕೂ ಹೆಚ್ಚಿನ ಫಾರೆಸ್ಟ್ ಹುದ್ದೆಗಳು (forest placement) ಖಾಲಿ ಇದ್ದು, ಇವುಗಳನ್ನ ಭರ್ತಿ ಮಾಡಿಕೊಳ್ಳಲು ಕರ್ನಾಟಕ ಅರಣ್ಯ ಇಲಾಖೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಇವತ್ತು ಅಂದರೆ ಅಕ್ಟೋಬರ್ 26 2023 ಕೊನೆಯ ದಿನಾಂಕವಾಗಿದ್ದು ನೀವು ಆಸಕ್ತಿ ಹೊಂದಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ (apply today). ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಎಲ್ಲವೂ ಸರಿ ಇದ್ರೂ ಗೃಹಲಕ್ಷ್ಮಿ ಯೋಜನೆ ಹಣ ಯಾಕೆ ಬಂದಿಲ್ಲ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಪಕ್ಕ ಉತ್ತರ
ಎಲ್ಲಿದೆ ಖಾಲಿ ಹುದ್ದೆಗಳು?
ಕರ್ನಾಟಕ ಅರಣ್ಯ ಇಲಾಖೆಯ ಅಧಿಸೂಚನೆಯ ಪ್ರಕಾರ ಕೊಟ್ಟು 310 ಫಾರೆಸ್ಟ್ ವಾಚರ್ ಹುದ್ದೆಗಳು (forest watcher job) ಖಾಲಿ ಇವೆ. ನೀವು ಆಸಕ್ತರಾಗಿದ್ದರೆ ಈ ಹುದ್ದೆಗಳಿಗೆ ಕೂಡಲೇ ಅಪ್ಲೈ ಮಾಡಿ.
ಹುದ್ದೆಗಳ ವಿವರ:
ಬೆಂಗಳೂರು- 33 ಹುದ್ದೆಗಳು
ಬೆಳಗಾವಿ- 20 ಹುದ್ದೆಗಳು
ಬಳ್ಳಾರಿ- 20 ಹುದ್ದೆಗಳು
ಚಾಮರಾಜನಗರ- 32 ಹುದ್ದೆಗಳು
ಚಿಕ್ಕಮಗಳೂರು- 25 ಹುದ್ದೆಗಳು
ಧಾರವಾಡ-7 ಹುದ್ದೆಗಳು
ಹಾಸನ-20 ಹುದ್ದೆಗಳು
ಉತ್ತರ ಕನ್ನಡ- 32 ಹುದ್ದೆಗಳು
ಕೊಡಗು-16 ಹುದ್ದೆಗಳು
ಕಲಬುರಗಿ-23 ಹುದ್ದೆಗಳು
ಮಂಗಳೂರು-20 ಹುದ್ದೆಗಳು
ಮೈಸೂರು-32 ಹುದ್ದೆಗಳು
ಶಿವಮೊಗ್ಗ-30 ಹುದ್ದೆಗಳು ಭರ್ತಿ ಆಗಬೇಕಿದೆ.
3 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರಾತ್ರೋ ರಾತ್ರಿ ರದ್ದು; ಆಹಾರ ಇಲಾಖೆಯ ಮಹತ್ವದ ಅಪ್ಡೇಟ್!
ವಿದ್ಯಾರ್ಹತೆ (Education)
ಈ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10ನೇ ತರಗತಿ ತೇರ್ಗಡೆ (SSLC pass) ಹೊಂದಿರುವುದಕ್ಕೆ ದಾಖಲೆ ಹೊಂದಿರಬೇಕು.
ವಯೋಮಿತಿ (Age of applicant)
ಕರ್ನಾಟಕ ಅರಣ್ಯ ಇಲಾಖೆಯ ಅವಧಿ ಸೂಚನೆಯ ಪ್ರಕಾರ ನವೆಂಬರ್ 31 2023ರ ಅವಧಿಗೆ 18 ವರ್ಷ ಆಗಿದ್ದು, 30 ವರ್ಷ ಮೀರಿರಬಾರದು. ಆದರೆ ಕೆಲವರಿಗೆ ವಯೋಮಿತಿ ಸಡಿಲಿಕೆ ಕೂಡ ನೀಡಲಾಗುವುದು. SC/ST/ಪ್ರವರ್ಗ-1 ಅಭ್ಯರ್ಥಿಗಳು- 3 ವರ್ಷ ಬಯೋಮಿತಿ ಸಡಿಲಿಕೆ ಇದ್ದರೆ, 2ಎ, 2ಬಿ, 3ಎ, 3ಬಿ, ಒಬಿಸಿ ಅಭ್ಯರ್ಥಿಗಳು- 2 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುವುದು.
ಸಂಬಳ (Salary)
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹ 18,600-32,600 ಗಳನ್ನು ಗಳಿಸುವ ಅವಕಾಶವಿದೆ. ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು.
ಈ ಜಿಲ್ಲೆಯ ಜನರಿಗೆ ಇನ್ಮುಂದೆ ಸಿಗುವುದಿಲ್ಲ ಉಚಿತ ವಿದ್ಯುತ್; ಸರ್ಕಾರದ ಮಹತ್ವದ ಸೂಚನೆ
ಅರ್ಜಿ ಶುಲ್ಕ (Application fee)
SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕವಾದರೆ ಸಾಮಾನ್ಯರಿಗೆ 300 ರೂಪಾಯಿ ಅರ್ಜಿ ಶುಲ್ಕವಿರುತ್ತದೆ.
ಆಯ್ಕೆ ಪ್ರಕ್ರಿಯೆ (Selection process)
ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ಇರುತ್ತದೆ ಅದರಲ್ಲಿ ತೇರ್ಗಡೆ ಹೊಂದಿದ್ದರೆ ನೇರ ಸಂದರ್ಶನ ಮಾಡಲಾಗುವುದು ಜೊತೆಗೆ ಮೆಡಿಕಲ್ ಫಿಟ್ನೆಸ್ ಟೆಸ್ಟ್ ಕೂಡ ನಡೆಸಲಾಗುತ್ತದೆ.
ಅಭ್ಯರ್ಥಿಗಳು ಆನ್ಲೈನ್ (apply online) ಮೂಲಕ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಇಂದು (26 October 2023) ಕೊನೆಯ ದಿನಾಂಕವಾಗಿದೆ ಅರ್ಜಿ ಶುಲ್ಕ ಪಾವತಿ ಮಾಡಲು ಅಕ್ಟೋಬರ್ 31 2023 ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: https://www.recruitapp.in/fw2023/instruction
If you pass SSLC, you can get a government job in forest department
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.