ಬಂಪರ್ ಲಾಟರಿ! ಮಹಿಳೆಯರಿಗಾಗಿ ಮತ್ತೊಂದು ಉಚಿತ ಯೋಜನೆ, ಸರ್ಕಾರದಿಂದ ಗುಡ್ ನ್ಯೂಸ್.. ಅಷ್ಟಕ್ಕೂ ಏನಿದೆ ಯೋಜನೆ

ರಾಜ್ಯ ಸರ್ಕಾರದ ಮತ್ತೊಂದು ಮಹಿಳೆಯರ ಯೋಜನೆ ಬಗ್ಗೆ ಜನರು ಆಕರ್ಷಿತರಾಗಿದ್ದು, ಆ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಕ್ಯೂ ನಿಂತಿದ್ದಾರೆ..

ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಹೆಣ್ಣಿಗೆ ಅರ್ಥಿಕವಾಗಿ  ಸ್ವಾತಂತ್ರ್ಯ ಸಿಗಬೇಕು, ಹೆಣ್ಣು ಆರ್ಥಿಕವಾಗಿ ತೊಂದರೆ ಅನುಭವಿಸಬಾರದು, ಹೆಣ್ಣಿಗೆ ಸಹಾಯ ಆಗಬೇಕು ಎಂದು ರಾಜ್ಯದಲ್ಲಿ ಸಾಕಷ್ಟು ಯೋಜನೆಗಳಿಗೆ. ಇತ್ತೀಚೆಗೆ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿಯೇ ಗೃಹಲಕ್ಷ್ಮಿ ಯೋಜನೆ (Gruhalakshmi yojane) ಮತ್ತು ಶಕ್ತಿ ಯೋಜನೆಯನ್ನು (Shakti Yojane) ಜಾರಿಗೆ ತಂದಿದೆ.

ಈ ಯೋಜನೆಗಳು ಇರುವಾಗ ರಾಜ್ಯ ಸರ್ಕಾರದ ಮತ್ತೊಂದು ಮಹಿಳೆಯರ ಯೋಜನೆ ಬಗ್ಗೆ ಜನರು ಆಕರ್ಷಿತರಾಗಿದ್ದು, ಆ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಕ್ಯೂ ನಿಂತಿದ್ದಾರೆ.. ಹೆಣ್ಣುಮಕ್ಕಳಿಗಾಗಿ ಇರುವ ಈ ಮತ್ತೊಂದು ಯೋಜನೆಯ ಹೆಸರು ಮಡಿಲು ಕಿಟ್ (Madilu Kit Yojane) ಯೋಜನೆ ಆಗಿದೆ.

ಈ ಯೋಜನೆಯ ಅಡಿಯಲ್ಲಿ ಗರ್ಭಿಣಿ ಹೆಣ್ಣುಮಕ್ಕಳಿಗಾಗಿ (Pregnant Ladies) ವಿಶೇಷವಾಗಿ ಜಾರಿಗೆ ತರಲಾಗಿದೆ.

ಬಂಪರ್ ಲಾಟರಿ! ಮಹಿಳೆಯರಿಗಾಗಿ ಮತ್ತೊಂದು ಉಚಿತ ಯೋಜನೆ, ಸರ್ಕಾರದಿಂದ ಗುಡ್ ನ್ಯೂಸ್.. ಅಷ್ಟಕ್ಕೂ ಏನಿದೆ ಯೋಜನೆ - Kannada News

ಮಡಿಲು ಕಿಟ್ ಯೋಜನೆ 2007ರಲ್ಲಿ ಶುರುವಾಗಿದೆ. ಈ ಯೋಜನೆಯ ಅಡಿಯಲ್ಲಿ ಸರ್ಕಾರವು ಮಗು ಹುಟ್ಟಿದ ನಂತರ ತಾಯಿಗೆ ಒಂದು ವೆಲ್ ನೆಸ್ ಕಿಟ್ (Wellness Kit) ನೀಡುತ್ತದೆ. ಇದು ತಾಯಿ ಮತ್ತು ಮಗು ಪ್ರತಿದಿನ ಉಪಯೋಗಕ್ಕೆ ಬರುವ 19 ದಿನಬಳಕೆ ವಸ್ತುಗಳನ್ನು ಒಳಗೊಂಡಿರುತ್ತದೆ. ಈ ಮಡಿಲು ಕಿಟ್ ಬೆಲೆ ಸುಮಾರು ₹1500 ರೂಪಾಯಿ ಆಗಿದೆ.

ಎಲ್ಲರಿಗಿಂತ ಮೊದಲು ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪತ್ರ ಪಡೆಯಲು ಇದೊಂದು ಕೆಲಸ ಮಾಡಿ ಸಾಕು

ಈ ಕಿಟ್ ನ ವಸ್ತುಗಳು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೆ ಅಗತ್ಯವಾದ ವಸ್ತುಗಳಾಗಿರುತ್ತದೆ. ಈ ಯೋಜನೆಗೆ ಕೆಲವು ನಿಯಮಗಳಿವೆ, ಮಡಿಲು ಕಿಟ್ ಯೋಜನೆಯ ಫಲ ಪಡೆಯುವವರು ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಮಹಿಳೆಯರು, ಹಾಗೂ SC/ST ಕ್ಯಾಟಗರಿಗೆ ಬರುವ ಮಹಿಳೆಯರು ಮಾತ್ರ ಈ ಯೋಜನೆಯ ಅನುಕೂಲ ಪಡೆಯಬಹುದು.

Another yojane for women madilu scheme

ಹಾಗೆಯೇ ಸಿ.ಹೆಚ್.ಸಿ, ಪಿ.ಹೆಚ್.ಸಿ, ತಾಲ್ಲೂಕು ಆಸ್ಪತ್ರೆ (Taluk  hospital) ಮತ್ತು ಸರ್ಕಾರಿ ಮೆಡಿಕಲ್ ಕಾಲೇಜಿನ (Government Medical College) ಆಸ್ಪತ್ರೆಯಲ್ಲಿ ಡೆಲಿವರಿ ಆಗುವ ಹೆಣ್ಣುಮಕ್ಕಳು ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಒಂದು ವೇಳೆ ಪ್ರೈವೇಟ್ ಆಸ್ಪತ್ರೆಯಲ್ಲಿ ಮಗು ಹುಟ್ಟಿದರೆ, ಮಡಿಲು ಕಿಟ್ ಕೊಡುವುದಿಲ್ಲ, ಬದಲಾಗಿ 1000 ರೂಪಾಯಿ ಹಣಕೊಡಲಾಗುತ್ತದೆ.

ಈ ಯೋಜನೆಯು ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ  ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ, ತಾಯಂದಿರು ಯಾವುದೇ ಅರ್ಜಿ ಸಲ್ಲಿಸಿದೆಯೇ ಈ ಯೋಜನೆಯ ಅನುಕೂಲವನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಈ ಯೋಜನೆಯ ಅನುಕೂಲ ಪಡೆಯಲು ಕೆಲವು ಅಗತ್ಯ ದಾಖಲೆಗಳು ಬೇಕಾಗುತ್ತದೆ.

ಯುವಕರೆಲ್ಲ ಕಾಯುತ್ತಿದ್ದ ಯುವನಿಧಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್! ಯುವಪೀಳಿಗೆಗೆ ಭರವಸೆ ಕೊಟ್ಟ ಸರ್ಕಾರ

*ತಾಯಿ ಕರ್ನಾಟಕದವರೇ ಆಗಿರಬೇಕು, ಅದಕ್ಕಾಗಿ ಆಧಾರ್ ಕಾರ್ಡ್ ಅಥವಾ ಅಡ್ರೆಸ್ ಪ್ರೂಫ್ ಬೇಕಾಗುತ್ತದೆ. *ಬಿಪಿಎಲ್ ರೇಶನ್ ಕಾರ್ಡ್, ಬರ್ತ್ ಸರ್ಟಿಫಿಕೇಟ್, ಮಡಿಲು ಕಿಟ್ ಗಾಗಿ  ಆಶಾ ಕಾರ್ಯಕರ್ತೆಯರು ಕೊಡುವ ANC ರಿಜಿಸ್ಟ್ರೇಶನ್ ನಂಬರ್ ಮತ್ತು ಮೊಬೈಲ್ ನಂಬರ್ ಬೇಕಾಗುತ್ತದೆ.. ಮಡಿಲು ಯೋಜನೆಯ ನೆರವು ಪಡೆಯಲು ಅರ್ಜಿ ಸಲ್ಲಿಕೆ ಅಥವಾ, ಇನ್ನೇನನ್ನು ಮಾಡಬೇಕಿಲ್ಲ.. ನಿಮ್ಮ ಹತ್ತಿರದ ಆಶಾ ಕಾರ್ಯಕರ್ತೆಯರಿಗೆ ಈ ವಿಚಾರ ತಿಳಿಸಿದರೆ ಸಾಕು, ಅವರಿಂದ ಈ ಯೋಜೆನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತೀರಿ.

Another yojane for women madilu scheme

Follow us On

FaceBook Google News

Another yojane for women madilu scheme