ನಮ್ಮ ಸರ್ಕಾರವು ಹೆಣ್ಣುಮಕ್ಕಳಿಗಾಗಿ (Girl Child Scheme) ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಅಭಿವೃದ್ಧಿ ಆಗಬೇಕು ಎನ್ನುವ ಕಾರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಅಂಥ ಯೋಜನೆಗಳಲ್ಲಿ ಒಂದು ಭಾಗ್ಯಲಕ್ಷ್ಮಿ ಯೋಜನೆ (Bhagyalakshmi Scheme) ಆಗಿದೆ. ಈ ಯೋಜನೆಯನ್ನು ನಿಮಗೆ ಹೆಣ್ಣುಮಗು ಹುಟ್ಟಿದ ತಕ್ಷಣವೇ ಮಾಡಿಸಬಹುದು. ಮಗು ಹುಟ್ಟಿದಾಗಲೇ 50 ಸಾವಿರ ರೂಪಾಯಿಯ ಬಾಂಡ್ ಅನ್ನು ನಿಮಗೆ ಕೊಡಲಾಗುತ್ತದೆ. ಹಾಗೆಯೇ ವಿವಿಧ ಹಂತಗಳಲ್ಲಿ ಹೆಣ್ಣುಮಗುವನ್ನು ಬೆಳೆಸಲು ಸಹಾಯ ಕೂಡ ಸರ್ಕಾರದಿಂದಲೇ ಸಿಗುತ್ತದೆ..
ಜನರಲ್ಲಿ ನಡೆಯುವ ಭ್ರೂಣ ಹತ್ಯೆ ತಡೆಯುವುದು ಮತ್ತು ಹೆಣ್ಣುಮಗು ಉತ್ತಮವಾಗಿ ಬೆಳೆಯಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರವು (State Government) ಈ ಯೋಜನೆಯನ್ನು ಜಾರಿಗೆ ತಂದಿದೆ.
ಮಗು ಹುಟ್ಟಿದ ಬಳಿಕ ಮಗುವಿಗೆ 50 ಸಾವಿರ ರೂಪಾಯಿಯ ಬಾಂಡ್ ಕೊಡಲಾಗುತ್ತದೆ. ಹಾಗೆಯೇ ಹೆಣ್ಣುಮಗುವಿಗೆ 21 ವರ್ಷ ತುಂಬಿದ ನಂತರ 2 ಲಕ್ಷ ರೂಪಾಯಿಯವರೆಗು ಸಹಾಯ ಸಿಗುತ್ತದೆ. ಇದರಿಂದ ವಿವಿಧ ಹಂತಗಳಲ್ಲಿ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯ (Bhagya Lakshmi Scheme) ಸೌಲಭ್ಯ ಪಡೆಯಬಹುದು. ಮಗುವಿನ ಶಿಕ್ಷಣಕ್ಕೆ ಹಣ ಕೊಡಲಾಗುತ್ತದೆ.
6ನೇ ತರಗತಿ ಓದುತ್ತಿರುವ ಮಗುವಿಗೆ ಶಾಲೆಗೆ ಸೇರಿಸಲು 3000 8ನೇ ತರಗತಿ ಮಗುವಿಗೆ 5000, 10ನೇ ತರಗತಿ ಮಗುವಿಗೆ 7000, 12ನೇ ತರಗತಿ ವಿದ್ಯಾರ್ಥಿನಿಗೆ 8 ಸಾವಿರ. ಒಟ್ಟಾರೆಯಾಗಿ ಶಿಕ್ಷಣಕ್ಕೆ 23,000 ಸಿಗುತ್ತದೆ.
ಹೆಣ್ಣುಮಕ್ಕಳು ಚೆನ್ನಾಗಿ ಓದಿ ಅಭಿವೃದ್ಧಿಯಾಗಬೇಕು, ಹೆಣ್ಣುಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ (Education) ಸಿಗಬೇಕು. ಹೆಣ್ಣುಮಗು ತಂದೆ ತಾಯಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೆ ಈ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ.. ಹೆಣ್ಣು ಮಗು ಹುಟ್ಟಿದ ಬಳಿಕ ಆಕೆಗೆ 21 ವರ್ಷ ಆದಾಗ ಈ ಬಾಂಡ್ ಮೆಚ್ಯುರ್ ಆಗುತ್ತದೆ.
*ಅರ್ಜಿ ಹಾಕುವವರು ಭಾರತದ ನಾಗರೀಕರೆ ಆಗಿರಬೇಕು.
*ನಿಮ್ಮ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಆಗಿರಬೇಕು.
*ನಿಮ್ಮ ಹೆಣ್ಣುಮಗುವಿಗೆ 18 ವರ್ಷ ಆಗುವುದಕ್ಕಿಂತ ಮೊದಲು ಮದುವೆ ಆಗಬಾರದು.
*ಹೆಣ್ಣುಮಗು ಹುಟ್ಟಿದಾಗ ಅಂಗನವಾಡಿ ಕೇಂದ್ರಕ್ಕೆ ಬಂದು ರಿಜಿಸ್ಟರ್ ಮಾಡಿಸಬೇಕು.
*2006 ಮಾರ್ಚ್ 31ರ ಬಳಿಕ ಹುಟ್ಟಿರುವ ರಾಜ್ಯಾದ ಎಲ್ಲಾ ಹೆಣ್ಣುಮಕ್ಕಳು ಈ ಯೋಜನೆಯ ಸೌಲಭ್ಯ ಪಡೆಯಬಹುದು.
*ಒಂದು ಫ್ಯಾಮಿಲಿಯಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಈ ಸೌಲಭ್ಯ ಸಿಗುತ್ತದೆ.
ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
*ಮಗುವಿನ ತಂದೆ ತಾಯಿಯ ಆಧಾರ್ ಕಾರ್ಡ್.
*ಅಡ್ರೆಸ್ ಪ್ರೂಫ್
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್
*ತಂದೆ ತಾಯಿಯ ಪಾಸ್ ಪೋರ್ಟ್ ಸೈಜ್ ಫೋಟೋ.
*ಹೆಣ್ಣುಮಗುವಿನ ಬರ್ತ್ ಸರ್ಟಿಫಿಕೇಟ್
*ಫೋನ್ ನಂಬರ್
*ಬ್ಯಾಂಕ್ ಪಾಸ್ ಬುಕ್ ಕಾಪಿ.
ಒಂದು ವೇಳೆ ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ, wcd.nic.in ಈ ಲಿಂಕ್ ಗೆ ಭೇಟಿ ನೀಡಿ, ಭಾಗ್ಯಲಕ್ಷ್ಮಿ ಯೋಜನೆಯ ಅರ್ಜಿಯನ್ನು ಡೌನ್ಲೋಡ್ ಮಾಡಿ, ಅಗತ್ಯ ದಾಖಲೆಗಳ ಜೊತೆಗೆ ಭರ್ತಿ ಮಾಡಿ, ಅರ್ಜಿ ಸಲ್ಲಿಸಬಹುದು.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019