ಹಸು ಖರೀದಿಗೆ 50 ರಿಂದ 75% ಸಬ್ಸಿಡಿ ಕೊಡುತ್ತಿದೆ ರಾಜ್ಯ ಸರ್ಕಾರ! ಈ ರೀತಿ ಇಂದೇ ಅಪ್ಲೈ ಮಾಡಿ
ನಮ್ಮ ರಾಜ್ಯದಲ್ಲಿ ಈಗ ಸರ್ಕಾರವು ಅನೇಕ ಹೊಸ ಯೋಜನೆಯನ್ನು (New Scheme) ಜಾರಿಗೆ ತರುತ್ತಿದೆ. ರಾಜ್ಯದಲ್ಲಿ ಹಾಲಿನ ಉತ್ಪಾದನೆ (Milk Production) ಜಾಸ್ತಿ ಆಗಬೇಕು ಎನ್ನುವ ಕಾರಣಕ್ಕೆ ಹಸುಗಳ ಖರೀದಿ (purchase of cow) ಮೇಲೆ ರಾಜ್ಯ ಸರ್ಕಾರವು ಭರ್ಜರಿ ಸಬ್ಸಿಡಿ ಕೊಡುತ್ತಿದೆ.
ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಹಸು ಖರೀದಿಗೆ (Cow Purchase) ಸುಮಾರು 50 ಇಂದ 75% ವರೆಗು ಸಬ್ಸಿಡಿ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಿವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್ ತಂದ ಸರ್ಕಾರ, ಅರ್ಜಿ ಹಾಕಿದ್ರೂ ಹಣ ಬಂದಿಲ್ಲ ಅಂತ ಗೃಹಿಣಿಯರ ದೂರು
ನಮ್ಮ ರಾಜ್ಯದ ಪಶು ಮತ್ತು ಮೀನು ಸಂಗೋಪನೆ ಇಲಾಖೆ ಈ ಹೊಸ ನಿರ್ಧಾರವನ್ನು ರಾಜ್ಯದ ಜನರಿಗಾಗಿ ಜಾರಿಗೆ ತಂದಿದೆ. ಈ ಯೋಜನೆಯ ಮುಖ್ಯ ಉದ್ದೇಶ ಏನು ಎಂದರೆ, ರಾಜ್ಯದಲ್ಲಿ ಹಾಲಿನ ಉತ್ಪಾದನೆ ಜಾಸ್ತಿ ಮಾಡುವುದು ಮುಖ್ಯ ಉದ್ದೇಶ ಆಗಿದ್ದು, ಹಾಗಾಗಿ ಸರ್ಕಾರವು ರೈತರಿಗೆ, ಪಶು ಸಂಗೋಪನೆ ಮಾಡುವವರಿಗೆ ಈ ಒಂದು ದೊಡ್ಡ ಆಫರ್ ಅನ್ನು ನೀಡುತ್ತಿದೆ. ಹಸುಗಳನ್ನು ಹೆಚ್ಚಾಗಿ ಖರೀದಿ (Cattle Buying) ಮಾಡಿದಷ್ಟು ಹಾಲಿನ ಉತ್ಪಾದನೆ ಕೂಡ ಜಾಸ್ತಿಯಾಗುತ್ತದೆ (Increasing Milk Production).
ಇಷ್ಟು ದಿವಸ ಹಳ್ಳಿಗಳಲ್ಲಿ ತಮ್ಮ ಹತ್ತಿರದ ಊರಿನ ಅಥವಾ ತಮ್ಮ ಹತ್ತಿರದ ಜಿಲ್ಲೆಯಿಂದ ಹಸುಗಳನ್ನು ಖರೀದಿ ಮಾಡುತ್ತಿದ್ದರು. ಇದರಿಂದ ಹಾಲಿನ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಾಸ ಅಥವಾ ಹೆಚ್ಚಳ ಕಂಡುಬಂದಿರಲಿಲ್ಲ.
ಈ ಕಾರಣಕ್ಕೆ ರೈತರಿಗೆ ಒಂದು ಕಂಡೀಷನ್ ಹಾಕಲಾಗಿದೆ. ಈ ಬಗ್ಗೆ ಹಸು ಅಭಿವೃದ್ಧಿ ಇಲಾಖೆಯ ನಿರ್ದೇಶಕ ಆಗಿರುವ ಸಂಜಯ್ ಕುಮಾರ್ ಅವರು ಮಾತನಾಡಿ, ಈ ಯೋಜನೆಯಲ್ಲಿ ಹಸು ಖರೀದಿಗೆ ಸಾಕಷ್ಟು ಆಯ್ಕೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ರಾಜ್ಯದ ರೈತರಿಗೆ ಸಿಗಲಿದೆ ಸಬ್ಸಿಡಿ ಹಣ! ಇಂದೇ ಅರ್ಜಿ ಸಲ್ಲಿಸಿ
ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ, ಡೈರಿ ಸೇವೆ (Dairy Service) ಇವುಗಳಿಂದ ಹಸುಗಳನ್ನು ಖರೀದಿ ಮಾಡಬಹುದು ಎಂದು ಸಂಜಯ್ ಅವರು ಮಾಹಿತಿ ನೀಡಿದ್ದಾರೆ. ಈ ಯೋಜನೆಯು ಸೆಪ್ಟೆಂಬರ್ 15 ರಿಂದ ಶುರುವಾಗುತ್ತಿದ್ದು, ರೈತರು ಬೇಕಿದ್ದರೆ ತಾವೇ ಹೊರಗಡೆ ಇಂದ ಹಸುವನ್ನು ಖರೀದಿ ಮಾಡಬಹುದು ಎಂದು ಕೂಡ ಮಾಹಿತಿಯಲ್ಲಿ ತಿಳಿಸಲಾಗಿದೆ. ಈ ಯೋಜನೆಯ ಸೌಲಭ್ಯ ಪಡೆಯಲು 2023ರ ಆಕ್ಟೊಬರ್ 15ಕೊನೆಯ ದಿನಾಂಕ ಆಗಿದೆ.
ಈ ವೇಳೆ ನೀವು ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರದ ಸಹಾಯ ಪಡೆದು, ಹಾಲು ಉತ್ಪಾದನೆ (Milk Production) ಹೆಚ್ಚಿಸಲು ಸರ್ಕಾರದ ಜೊತೆಗೆ ಕೈಜೋಡಿಸಿ ಹಸುಗಳನ್ನು ಖರೀದಿ ಮಾಡಬಹುದು.
ಗೃಹಲಕ್ಷ್ಮಿ ಯೋಜನೆ ನೋಂದಣಿ ಸ್ಥಗಿತ, ಇನ್ನೂ ಅರ್ಜಿ ಹಾಕದವರಿಗೆ ನಿರಾಸೆ! ಸದ್ಯಕ್ಕಂತೂ ಅಪ್ಲೈ ಮಾಡಲು ಸಾಧ್ಯವಿಲ್ಲ
ಇದರಲ್ಲಿ 40% ಇಂದ 75% ವರೆಗು ಸರ್ಕಾರದ ಅನುಮೋದನೆ ಸಿಗುತ್ತದೆ. 2, 4, 15 ಹಾಗೂ 20 ಹಸುಗಳ ಖರೀದಿಗೆ 40 ಇಂದ 75% ವರೆಗು ಸಬ್ಸಿಡಿ ಸಿಗುತ್ತದೆ. ಸಾಮಾನ್ಯ ವರ್ಗದವರಿಗೆ 50% ಅಷ್ಟು ಸಬ್ಸಿಡಿ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ 75% ವರೆಗು ಸಬ್ಸಿಡಿ ಸಿಗುತ್ತದೆ.
government is giving 50 to 75% subsidy for the purchase of cow