ತೋಟಗಾರಿಕೆ ಇಲಾಖೆಯಿಂದ ರಾಜ್ಯದ ರೈತರಿಗೆ ಸಿಗಲಿದೆ ಸಬ್ಸಿಡಿ ಹಣ! ಇಂದೇ ಅರ್ಜಿ ಸಲ್ಲಿಸಿ

ರಾಮನಗರ, ಬೆಂಗಳೂರು ರೂರಲ್, ಬಳ್ಳಾರಿ, ದೊಡ್ಡಬಳ್ಳಾಪುರ ಮತ್ತು ಇನ್ನಿತರ ಜಿಲ್ಲೆಗಳಲ್ಲಿ ತೋಟಗಾರಿಕೆ ಇಲಾಖೆಯು (Department of Horticulture) ರೈತರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ..

ಈ ವರ್ಷದಲ್ಲಿ ರಾಮನಗರದ ಮಾಗಡಿ ತಾಲೂಕು ತೋಟಗಾರಿಕೆ ಮಿಷನ್ ಯೋಜನೆಯ ಅಡಿಯಲ್ಲಿ ಪಾಲಿ ಹೌಸ್, ಜಾಗ ವಿಸ್ತರಣೆ, ಪ್ಯಾಕ್ ಹೌಸ್, ಸಮುದಾಯ ಕೃಷಿ ಹೊಂಡ ಮತ್ತು ಇನ್ನು ಕೆಲವು ಕಾರ್ಯಕ್ರಮಗಳನ್ನು ಮಾಡಿತ್ತು. ಈ ವೇಳೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರುವ ರೈತರಿಗೆ (Farmers) ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ..

ಈ ಸೌಲಭ್ಯ ಪಡೆಯಲು ಸೆಪ್ಟೆಂಬರ್ 11ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಹೋಬಳಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು. ಅರ್ಜಿ ಹಾಕಲು ಕೆಲವು ಪ್ರಮುಖ ದಾಖಲೆಗಳು ಬೇಕಾಗುತ್ತದೆ.

ಗೃಹಲಕ್ಷ್ಮಿ ಯೋಜನೆ ನೋಂದಣಿ ಸ್ಥಗಿತ, ಇನ್ನೂ ಅರ್ಜಿ ಹಾಕದವರಿಗೆ ನಿರಾಸೆ! ಸದ್ಯಕ್ಕಂತೂ ಅಪ್ಲೈ ಮಾಡಲು ಸಾಧ್ಯವಿಲ್ಲ

ರೈತರ ಪಹಣಿ, ಆಧಾರ್ ಕಾರ್ಡ್ ಕಾಪಿ, ಬ್ಯಾಂಕ್ ಪಾಸ್ ಬುಕ್ ಕಾಪಿ, SC/ST ಕ್ಯಾಸ್ಟ್ ಸರ್ಟಿಫಿಕೇಟ್, ಮತ್ತು ಫೋನ್ ನಂಬರ್ ಇದಿಷ್ಟು ಅರ್ಜಿ ಹಾಕಲು ಬೇಕೇ ಬೇಕು. ಇನ್ನು 2023-24ನೇ ವರ್ಷದಲ್ಲಿ ರಾಷ್ಟೀಯ ತೋಟಗಾರಿಕೆ ಮಿಷನ್ ಯೋಜನೆ ಮತ್ತು ಕೇಂದ್ರೀಯ ಪುರಸ್ಕೃತ ಕೃಷಿ ತರಬೇತಿ ಮತ್ತು ಯೋಜನೆಯಿಂದ ಬೆಂಗಳೂರಿನ ಸೂಲಿಬೆಲೆಯಲ್ಲಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಇದಕ್ಕಾಗಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 7 ಕೊನೆಯ ದಿನಾಂಕ ಆಗಿದೆ ಎಂದು ಅಲ್ಲಿನ ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ರೈತರು ಪಹಣಿ, ಆಧಾರ್ ಕಾರ್ಡ್ ಕಾಪಿ, ಬ್ಯಾಂಕ್ ಪಾಸ್ ಬುಕ್ ಕಾಪಿ, SC/ST ಕ್ಯಾಸ್ಟ್ ಸರ್ಟಿಫಿಕೇಟ್ ಇದಿಷ್ಟು ದಾಖಲೆಗಳನ್ನು ಒದಗಿಸಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆಯನ್ನು ಸಂಪರ್ಕಿಸಬಹುದು. 9483478162 ಅಥವಾ 8217210320 ತೋಟಗಾರಿಕೆಯ ಈ ನಂಬರ್ ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಯ ಅರ್ಜಿ ರಿಜೆಕ್ಟ್ ಆಗಿರುವವರಿಗೆ ಸರ್ಕಾರದಿಂದ ಮತ್ತೊಂದು ಸೂಚನೆ

Subsidies Under Horticulture Mission Schemeಇನ್ನು ಬಳ್ಳಾರಿಯ ತೋಟಗಾರಿಕೆ ಇಲಾಖೆ ಕೂಡ ರೈತರಿಗೆ ವಿವಿಧ ಯೋಜನೆಗಳ ಮೂಲಕ ಸಹಾಯಧನ ನೀಡಲು ಮುಂದಾಗಿದೆ. ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಆ ಕಡೆ ಇರುವ ಸಂಡೂರು, ಬಳ್ಳಾರಿ, ಸಿರಗುಪ್ಪ ಪ್ರದೇಶಗಳಲ್ಲಿ ಈರುಳ್ಳಿ ಶೇಖರಿಸಲು ಘಟಕ ಮತ್ತು ಫಾರ್ಮ್ ಶುರು ಮಾಡುವುದಕ್ಕೆ ಸಹಾಯ ಮಾಡಲಾಗುತ್ತದೆ.

ಇದಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೆಗಾ ಮೈಕ್ರಿ ಅಗ್ರಿ ಸಿಸ್ಟಮ್ ಕಾರ್ಯಕ್ರಮದಿಂದ ಮಾವು, ಸೀತಾಫಲ, ಸೀಬೆ, ತೆಂಗಿನಕಾಯಿ, ಹುಣಸೆ, ನೇರಳೆ ನೂತನ ಪ್ರದೇಶ ವಿಸ್ತರಣೆ ಮಾಡುವ ಕಾರ್ಯಕ್ರಮ ಮತ್ತು ಕಾಡಿನ ಬೆಳೆಗಳಾದ ಮಹೋಗನಿ, ಶ್ರೀಗಂಧ ಬೆಳೆಯುವುದಕ್ಕೆ ಆಸಕ್ತಿ ಇರುವ ರೈತರು ಅರ್ಜಿ ಹಾಕಬಹುದು.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್! ಇಂಥವರಿಗೆ ಇನ್ಮುಂದೆ 5 ಕೆ.ಜಿ ಅಕ್ಕಿ ಹಣ ಕೂಡ ಸಿಗೋದಿಲ್ಲ

ರೈತರು ಇದಕ್ಕೆ ಸಂಬಂಧಿಸಿದ ತೋಟಗಾರಿಕೆ ಇಲಾಖೆಯಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಈ ಸೌಲಭ್ಯಗಳ ಉಪಯೋಗವನ್ನು ಎಲ್ಲಾ ರೈತರು ಪಡೆದುಕೊಳ್ಳಬಹುದಾಗಿದೆ.

ಈ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು 08392278179 ಈ ನಂಬರ್ ಗೆ ಕರೆ ಮಾಡಿ. ಪಶು ಇಲಾಖೆಯಿಂದ ಕೂಡ ಸಹಾಯಧನ ಸಿಗುತ್ತಿದೆ. ದೊಡ್ಡಬಳ್ಳಾಪುರ ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯ ಸೇವೆಯ ಇಲಾಖೆ, ಪಶು ಆಸ್ಪತ್ರೆ ದೇವನಹಳ್ಳಿಯಿಂದ 2022-23ನೇ ವರ್ಷದ RKVY ಯೋಜನೆಯ ಮೂಲಕ 50% ಸಹಾಯಧನ ಮತ್ತು ಹಸುಗಳಿಗೆ ಸಂಬಂಧಿಸಿದ ಎರಡು ನೆಲಹಾಸುವನ್ನು ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿ ಇರುವವರು ಅರ್ಜಿಯನ್ನು ಪಶುವೈದ್ಯ ಸಂಸ್ಥೆಗಳಿಂದ ಪಡೆಯಬಹುದು. ಹಸುಗಳ 2 ನೆಲಹಾಸು ಬೆಲೆ 5600 ರೂಪಾಯಿ ಆಗಿರುತ್ತದೆ, ಎಲ್ಲಾ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ 2800 ರೂಪಾಯಿ ಸಹಾಯ ಧನ ನೀಡಲಾಗುತ್ತದೆ. ಈ ಎಲ್ಲಾ ಯೋಜನೆಗಳ ಫಲವನ್ನು ರೈತರು ಪಡೆಯಬೇಕು ಎಂದು ಇಲಾಖೆಗಳು ತಿಳಿಸಿದೆ.

Farmers get 50 Percentage Subsidies Under Horticulture Mission Scheme

TRENDING ARTICLES1 / 6
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories