ಗೃಹಲಕ್ಷ್ಮಿ ಯೋಜನೆಯ ಅರ್ಜಿ ರಿಜೆಕ್ಟ್ ಆಗಿರುವವರಿಗೆ ಸರ್ಕಾರದಿಂದ ಮತ್ತೊಂದು ಸೂಚನೆ

ನಮ್ಮ ದೇಶದಲ್ಲಿ ಈಗ ಮಹಿಳೆಯರ ಅಭಿವೃದ್ಧಿ ಆಗುವುದು ಬಹಳ ಮುಖ್ಯವಾಗಿ ನಡೆಯಬೇಕಿರುವ ವಿಚಾರ ಆಗಿದೆ. ಏಕೆಂದರೆ ಒಂದು ಹೆಣ್ಣು ಓದಿದರೆ, ಬುದ್ಧಿವಂತೆಯಾದರೆ ಆಕೆಯ ಇಡೀ ಕುಟುಂಬಕ್ಕೆ ಒಳ್ಳೆಯದು.

ಇದರಿಂದಾಗಿ ಮಹಿಳೆಯ ಅಭಿವೃದ್ಧಿ ಆಗಬೇಕು ಎಂದು ಸರ್ಕಾರ ಕೂಡ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಮಹಿಳೆ ಸ್ವಾವಲಂಬಿಯಾದರೆ ಆಕೆಯ ಬದುಕು ಚೆನ್ನಾಗಿರುತ್ತದೆ ಎಂದು ಸರ್ಕಾರ ಹೀಗೆ ಸಹಾಯ ಮಾಡಲು ಮುಂದಾಗುತ್ತದೆ.

ಈ ವರ್ಷ ನಮ್ಮ ರಾಜ್ಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಹೆಣ್ಣುಮಕ್ಕಳಿಗೆಗಾಗಿಯೇ ಎರಡು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಒಂದು ಎಲ್ಲಾ ಹೆಣ್ಣುಮಕ್ಕಳು ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ಓಡಾಡಬಹುದಾದ ಶಕ್ತಿ ಯೋಜನೆ, ಈ ಯೋಜನೆಯ ಸೌಕರ್ಯವನ್ನು ಎಲ್ಲಾ ಹಣ್ಣುಮಕ್ಕಳು ಪಡೆಯುತ್ತಿದ್ದಾರೆ. ಮತ್ತೊಂದು ಗೃಹಲಕ್ಷ್ಮಿ ಯೋಜನೆ (Gruha Lakshmi Yojana). ಮನೆಯನ್ನು ನಡೆಸುವ ಗೃಹಿಣಿಯರಿಗೆ ಆರ್ಥಿಕವಾಗಿ ಸಹಾಯ ಮಾಡುವ ಯೋಜನೆ ಇದಾಗಿದೆ.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್! ಇಂಥವರಿಗೆ ಇನ್ಮುಂದೆ 5 ಕೆ.ಜಿ ಅಕ್ಕಿ ಹಣ ಕೂಡ ಸಿಗೋದಿಲ್ಲ

ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ವಿಚಾರದಲ್ಲಿ ಈಗಾಗಲೇ ರಾಜ್ಯದ 1.10 ಕೋಟಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇನ್ನು ನಿಗದಿಯಾಗಿಲ್ಲ. ಮಹಿಳೆಯರು ಈಗಲೂ ಅರ್ಜಿ ಸಲ್ಲಿಸಬಹುದು.

ಈಗಾಗಲೇ ಹಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಅಕೌಂಟ್ ಗೆ (Bank Account) ಬಂದಿದೆ. ಇನ್ನು ಕೆಲವು ಮಹಿಳೆಯರಿಗೆ ಯೋಜನೆಯ ಹಣ ಇನ್ನು ಬಂದಿಲ್ಲ. ಇನ್ನು ಹಣ ಬಂದಿಲ್ಲದೆ ಇರಲು ಮುಖ್ಯ ಕಾರಣ ರೇಷನ್ ಕಾರ್ಡ್ ನಲ್ಲಿ ಮಹಿಳೆಯ ಹೆಸರು ಮುಖ್ಯಸ್ಥೆ ಎಂದು ಇಲ್ಲದೆ ಇರುವುದಾಗಿದೆ. ಹಾಗಾಗಿ ಸರ್ಕಾರವು ರೇಷನ್ ಕಾರ್ಡ್ ಅಪ್ಡೇಟ್ ಮಾಡಲು ಸೂಚನೆ ನೀಡಿದ್ದು, ಸೆಪ್ಟೆಂಬರ್ 14ರ ಒಳಗೆ ರೇಷನ್ ಕಾರ್ಡ್ ಅಪ್ಡೇಟ್ ಮಾಡಬಹುದು..

Gruha Lakshmi Yojaneಒಂದು ವೇಳೆ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು ಎಂದರೆ ಕರ್ನಾಟಕ ಒನ್, ಗ್ರಾಮ ಒನ್, ಅಟಲ್ ಜನಸ್ನೇಹಿ, ಈ ಕೇಂದ್ರಗಳಲ್ಲಿ ಮಾಡಿಸಬಹುದು.. ರೇಷನ್ ತಿದ್ದುಪಡಿ ಸರಿಯಾಗಿ ಮಾಡಿಸಿದರೆ, ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದೆ ಇರುವವರಿಗೆ ಹಣ ಬರುತ್ತದೆ.

ಈ ಯೋಜನೆಗೆ ಅಪ್ಲಿಕೇಶನ್ ಹಾಕಲು ಇನ್ನು ಕೊನೆಯ ದಿನಾಂಕ ನಿಗದಿ ಆಗದ ಕಾರಣ ನೀವು ಈಗಲೂ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಸಹಾಯ ಬೇಕಾದರೆ 1902 ಟೋಲ್ ಫ್ರೀ ನಂಬರ್ ಗೆ ಕರೆಮಾಡಿ, ಸಹಾಯ ಪಡೆಯಬಹುದು.

ವಾರ ಕಳೆದ್ರೂ ಗೃಹಲಕ್ಷ್ಮಿ ಹಣ ಬಂದಿಲ್ವಾ? ಹಾಗಾದ್ರೆ ಸರ್ಕಾರದ ಈ ನಂಬರ್ ಗೆ SMS ಮಾಡಿ, ಹಣಬರುತ್ತೆ!

ಆಗಸ್ಟ್ 30ರಂದು ಸರ್ಕಾರವು ಮೈಸೂರಿನಲ್ಲಿ ದೊಡ್ಡ ಕಾರ್ಯಕ್ರಮ ಒಂದನ್ನು ನಡೆಸುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿತು. ಆದರೆ ಇನ್ನೂ ಹಲವು ಮಹಿಳೆಯರ ಖಾತೆಗೆ ಹಣ ಬಂದಿಲ್ಲದೆ ಇರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ..

ಈ ಬಗ್ಗೆ ಸರ್ಕಾರ ಕೂಡ ಸರಿಯಾದ ಮಾಹಿತಿ ನೀಡಿಲ್ಲದೆ ಇರುವುದು ಮಹಿಳೆಯರಲ್ಲಿ ಗೊಂದಲ ಸೃಷ್ಟಿಸಿದ್ದು, ಸರ್ಕಾರ ಈ ಬಗ್ಗೆ ಸ್ಪಷ್ಟನೆ ಕೊಡಬೇಕಿದೆ. ಹಾಗೆಯೇ ಮಹಿಳೆಯರ ಖಾತೆಗೆ ಹಣ ಕೂಡ ಬರಬೇಕಿದೆ.

Update for those whose application for Gruha Lakshmi Yojana has been rejected

TRENDING ARTICLES1 / 6
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories