ಗೃಹಲಕ್ಷ್ಮಿ ಯೋಜನೆ ಕುರಿತು ಬಿಗ್ ಅಪ್ಡೇಟ್; ಫಲಾನುಭವಿಗಳ ಹೊಸ ಲಿಸ್ಟ್ ಬಿಡುಗಡೆ!
ಡಾಕ್ಯುಮೆಂಟ್ಸ್ ಗಳು ಸರಿ ಇದ್ರೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಪ್ರತಿ ತಿಂಗಳು ನಿಮ್ಮ ಹಣ ನಿಮ್ಮ ಖಾತೆಗೆ (Bank Account) ಬಂದು ಸೇರುತ್ತದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಅಡಿಯಲ್ಲಿ ಮಹಿಳೆಯರಿಗೆ ಅದರಲ್ಲೂ ವಿಶೇಷವಾಗಿ ಮನೆಯ ಒಡತಿಗೆ ಪ್ರತಿ ತಿಂಗಳು 2000 ಹಣವನ್ನು ನೀಡುವ ಮೂಲಕ ಆಕೆಯ ಹಾರ್ದಿಕ ಸಹಾಯವನ್ನು ಮಾಡುವಂತಹ ಕೆಲಸಕ್ಕೆ ಚಾಲನೆ ನೀಡಿ ಈಗಾಗಲೇ ಸಾಕಷ್ಟು ಸಮಯ ಕಳೆದು ಹೋಗಿದೆ.
ಈಗಾಗಲೇ ಸಾಕಷ್ಟು ಜನರ ಅರ್ಜಿಯನ್ನು ಅಂದರೆ ಈಗಾಗಲೇ ಫಲಾನುಭವಿಗಳಾಗಿ ಸೇವೆಯನ್ನು ಅನುಭವಿಸುತ್ತಿರುವವರು ಕೂಡ ಲಿಸ್ಟಿಂದ ಹೊರಗೆ ಬಿದ್ದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಕೊನೆಗೂ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ! ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ
ಈಗಾಗಲೇ ರಾಜ್ಯದಲ್ಲಿ 80 ಸಾವಿರಕ್ಕೂ ಅಧಿಕ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಅವಕಾಶವನ್ನು ತೆಗೆದುಹಾಕಲಾಗಿದ್ದು ಅವರಿಗೆ ಇನ್ಮುಂದೆ ಎರಡು ಸಾವಿರ ರೂಪಾಯಿ ಹಣ ಸಿಗೋದಿಲ್ಲ.
ಅವರಲ್ಲಿ ಆದಾಯ ತೆರಿಗೆಯನ್ನು ಕಟ್ಟುವಂತಹ ಮಹಿಳೆಯರು ಕೂಡ ಸೇರಿಕೊಂಡಿದ್ದಾರೆ. ಅಂತಹ ಶ್ರೀಮಂತಿಕೆ ಹೊಂದಿದ್ರು ಕೂಡ ಗೃಹಲಕ್ಷ್ಮಿ ಯೋಜನೆಯನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಲಿಸ್ಟಿಂದ ತೆಗೆದುಹಾಕಲಾಗಿದೆ ಎಂಬುದಾಗಿ ಸರ್ಕಾರದಿಂದ ತಿಳಿದುಬಂದಿದೆ.
ದಾಖಲೆಗಳು ಸರಿಯಾಗಿದ್ದರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಬಹುದು!
ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅಂತಹ ಮಹಿಳೆಯರ ಪ್ರತಿಯೊಂದು ಡಾಕ್ಯುಮೆಂಟ್ಸ್ ಗಳನ್ನು ಕೂಡ ಗಮನವಹಿಸಿ ಚೆಕ್ ಮಾಡಲಾಗುತ್ತಿದೆ. ಈಗಾಗಲೇ 80000ಕ್ಕೂ ಹೆಚ್ಚಿನ ಮಹಿಳೆಯರು ಆದಾಯ ತೆರಿಗೆಯನ್ನು ಕಟ್ಟುತ್ತಿದ್ದರು ಕೂಡ ಈ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿದ್ದರು ಎನ್ನುವ ಕಾರಣಕ್ಕಾಗಿ ಅವರನ್ನು ಲಿಸ್ಟಿನಿಂದ ಹೊರ ಹಾಕಿದ್ದಾರೆ.
ಇನ್ಮುಂದೆ ಯಾವುದೇ ರೀತಿಯ ಸಡಿಲಿಕೆಯನ್ನು ನೀಡದೆ ಪ್ರತಿಯೊಂದು ವಿಚಾರಗಳನ್ನು ಕೂಲಂಕುಶವಾಗಿ ಗಮನಿಸಲಾಗುತ್ತದೆ. ಮಹಿಳೆಯ ಡಾಕ್ಯುಮೆಂಟ್ಸ್ಗಳು ಸರಿ ಇದ್ರೆ ಮಾತ್ರ ಅವರಿಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹಣವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ. ಡಾಕ್ಯುಮೆಂಟ್ಸ್ ಗಳು ಸರಿ ಇದ್ರೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಪ್ರತಿ ತಿಂಗಳು ನಿಮ್ಮ ಹಣ ನಿಮ್ಮ ಖಾತೆಗೆ (Bank Account) ಬಂದು ಸೇರುತ್ತದೆ.
ಕನ್ನಡ ಮಾತನಾಡೋಕೆ ಬಂದರೆ ಸಾಕು, ಸಿಗಲಿದೆ ಬಿಬಿಎಂಪಿ ಕೆಲಸ; ಭರ್ಜರಿ ಸಂಬಳ
ಒಂದು ತಿಂಗಳು ಹಣ ಬರ್ದಿದ್ರೆ ಹೀಗೆ ಮಾಡಿ!
ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಿ ಈಗಾಗಲೇ ಸಾಕಷ್ಟು ಸಮಯಗಳು ಕಳೆದಿದ್ದು ಒಂದು ವೇಳೆ ಹಣ ನಿಮ್ಮ ಖಾತೆಗೆ ಯಾವುದಾದರೂ ತಿಂಗಳು ಬರೆದೆ ಹೋದಲ್ಲಿ ಆ ಸಂದರ್ಭದಲ್ಲಿ ನೀವು ನಿಮ್ಮ ಹತ್ತಿರದ ಬ್ಯಾಂಕ್ ಕಚೇರಿಗೆ ಹೋಗಿ ನಿಮ್ಮ ಖಾತೆಗೆ ಹಣ ಬಾರದೆ ಇರುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ.
ಅಂಗನವಾಡಿ ಸಹಾಯಕರು ಹಾಗು ಆಶಾ ಕಾರ್ಯಕರ್ತೆಯರ ಸಂಪರ್ಕ ಮಾಡಿ ಈ ವಿಚಾರದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂಬುದಾಗಿ ಸರ್ಕಾರದಿಂದ ತಿಳಿದುಬಂದಿದೆ.
ಈ ಪಟ್ಟಿಯಲ್ಲಿ ಹೆಸರಿರುವ ಮಹಿಳೆಯರಿಗೆ ಮಾತ್ರ ಸಿಗುತ್ತೆ ಗೃಹಲಕ್ಷ್ಮಿ ಯೋಜನೆ ಹಣ!
ಈ ಮೂಲಕ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದರೂ ಕೂಡ ನೀವು ಸಂಬಂಧಪಟ್ಟಂತಹ ಇಲಾಖೆಯ ಕಚೇರಿಗೆ ಹೋಗಿ ಉದಾಹರಣೆಗೆ ಸೇವಾ ಕೇಂದ್ರಗಳು ಅಥವಾ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಹೋಗಿ ಅಲ್ಲಿನ ಸಿಬ್ಬಂದಿ ವರ್ಗಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ನೀವು ಹೊಂದಿದ್ದೀರಿ.
Big Update on Gruha Lakshmi Yojana, New list of beneficiaries released