ಕನ್ನಡ ಮಾತನಾಡೋಕೆ ಬಂದರೆ ಸಾಕು, ಸಿಗಲಿದೆ ಬಿಬಿಎಂಪಿ ಕೆಲಸ; ಭರ್ಜರಿ ಸಂಬಳ
ಕನ್ನಡ ಮಾತನಾಡೋಕೆ ಬರುತ್ತಾ? ಹಾಗಿದ್ರೆ ಬಿಬಿಎಂಪಿಯಿಂದ ಸಿಗುತ್ತೆ ನೋಡಿ ಭರ್ಜರಿ ಕೆಲಸ.
ನಮ್ಮ ದೇಶದಲ್ಲಿ ಇರುವಂತ ಜನಸಂಖ್ಯೆಗೆ ಉದ್ಯೋಗವನ್ನು ಹುಟ್ಟುಹಾಕುವುದು ಸ್ವಲ್ಪ ಮಟ್ಟಿಗೆ ಕಷ್ಟಕರ ಕೆಲಸವಾಗಿದೆ. ಹೇಗಿದ್ರು ಕೂಡ ಆಗಾಗ ನಮ್ಮ ಸಂಸ್ಥೆಗಳು ನಮ್ಮ ದೇಶದ ಯುವ ಜನರಿಗೆ ಉದ್ಯೋಗವನ್ನು ಹುಟ್ಟುಹಾಕುವಂತಹ ಕೆಲಸವನ್ನು ಮಾಡುತ್ತಿದ್ದು ಈಗ ಈ ಸರದಿ ಬಿಬಿಎಂಪಿಯದ್ದು.
ಕನ್ನಡ ಮಾತಾಡೋಕೆ ಬಂದ್ರೆ ಬಿಬಿಎಂಪಿಯಲ್ಲಿ ಸಿಗುತ್ತೆ ಕೆಲಸ!
11,307 ಹುದ್ದೆಗಳಿಗೆ ಬೃಹತ್ ಬೆಂಗಳೂರು (Bengaluru) ನಗರ ಪಾಲಿಕೆ ಬಿಬಿಎಂಪಿ ಆಹ್ವಾನ ನೀಡಿದೆ. ಇಲ್ಲಿ ಸ್ಥಳೀಯ ಕೆಡರ್ ಪೋಸ್ಟ್ಗಳು, ಕಲ್ಯಾಣ ಕರ್ನಾಟಕ ಹಾಗೂ ಆಧಾರಿತ ಕೇಡರ್ ಪೋಸ್ಟ್ಗಳು ಖಾಲಿ ಇವೆ. ಇಲ್ಲಿ ಅರ್ಹತೆ ಇಂಥದ್ದೇ ಇರಬೇಕು ಎನ್ನುವುದಾಗಿ ಯಾವುದೇ ರೀತಿಯ ನಿಯಮವಿಲ್ಲ ಹಾಗೂ ಪ್ರಮುಖವಾಗಿ ಕನ್ನಡ ಮಾತನಾಡಲು ಬರುವವರಿಗೆ ಇಲ್ಲಿ ಕೆಲಸವನ್ನು ನೀಡಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಕನ್ನಡ ಮಾತನಾಡಲು ಬಂದ್ರೆ ಸಾಕು, ಈ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಪಟ್ಟಿಯಲ್ಲಿ ಹೆಸರಿರುವ ಮಹಿಳೆಯರಿಗೆ ಮಾತ್ರ ಸಿಗುತ್ತೆ ಗೃಹಲಕ್ಷ್ಮಿ ಯೋಜನೆ ಹಣ!
ಇಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಭಾರತೀಯ ಖಾಯಂ ನಿವಾಸಿ ಆಗಿರಬೇಕು. ಅಭ್ಯರ್ಥಿಗಳ ವಯಸ್ಸು 55 ವರ್ಷವನ್ನು ಮೀರಿರಬಾರದು. ಬಿಬಿಎಂಪಿಯಲ್ಲಿ ದಿನಗೂಲಿ ಕೆಲಸಕ್ಕೆ ಎರಡು ವರ್ಷಗಳಿಂದ ಹೆಚ್ಚು ಕೆಲಸ ಮಾಡಿರುವಂತಹ ಅನುಭವ ಹೊಂದಿರುವವರಿಗೆ ಈ ಕೆಲಸದ ಆದ್ಯತೆ ನೀಡಲಾಗಿದೆ.
ಸಿಗೋ ಸಂಬಳ ಹಾಗೂ ಅರ್ಜಿ ಸಲ್ಲಿಸುವ ವಿಧಾನ!
ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ತಿಂಗಳಿಗೆ 17,000 ದಿಂದ 28,950 ರೂಪಾಯಿಗಳ ವರೆಗೆ ಸಂಬಳವನ್ನು (Salary) ನೀಡಲಾಗುತ್ತದೆ.
ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಮೇ ತಿಂಗಳ ಹೊಸ ಲಿಸ್ಟ್ ಬಿಡುಗಡೆ
ಇನ್ನು ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡೋದಾದರೆ,
* bbmp.gov.in ಇದು ಬಿಬಿಎಂಪಿಯ ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ನೀವು ಭೇಟಿ ನೀಡಬೇಕಾಗಿರುತ್ತದೆ.
* ಇಲ್ಲಿ ಫ್ರಂಟ್ ಪೇಜ್ ಅಲ್ಲಿ ನಿಮಗೆ ನಾಗರಿಕರ ಸೇವೆ ಅರ್ಜಿ ಆಯ್ಕೆ ಸಿಗುತ್ತದೆ. ಇಲ್ಲಿ ಇದನ್ನು ಪ್ರಿಂಟೌಟ್ ತೆಗೆದುಕೊಂಡು ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಡಾಕ್ಯೂಮೆಂಟ್ ಗಳನ್ನು ಅಟ್ಯಾಚ್ ಮಾಡಿದ ನಂತರ ಎನ್.ಆರ್. ಸ್ಕ್ವೇರ್, ಬೆಂಗಳೂರು -560002, ಕರ್ನಾಟಕ ಈ ಅಡ್ರೆಸ್‌ಗೆ ಕಳುಹಿಸಿ.
ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್! ಇಂತವರಿಗೆ ಇನ್ಮುಂದೆ ಹಣ ಬರೋಲ್ಲ
ಈ ಕೆಲಸಕ್ಕಾಗಿ ಹೆಚ್ಚಿನ ವಿದ್ಯಾರ್ಹತೆ (Education) ಬೇಕಾಗಿಲ್ಲ, ಕೇವಲ ಕನ್ನಡ (Kannada) ಮಾತನಾಡಲು ಬಂದ್ರೆ ಸಾಕು. ನಮ್ಮಲ್ಲಿ ಸಾಕಷ್ಟು ಜನರು ವಿದ್ಯಾಭ್ಯಾಸ ಇದ್ರೂ ಕೂಡ ಕೆಲಸ ಸಿಗದೇ ಮನೆಯಲ್ಲಿ ಕುಳಿತುಕೊಂಡಿರುತ್ತಾರೆ. ಅಂತಹ ನಿರುದ್ಯೋಗಿ ಸ್ನೇಹಿತರ ಜೊತೆಗೆ ಈ ವಿಚಾರವನ್ನು ಶೇರ್ ಮಾಡಿಕೊಂಡು ಅವರಿಗೆ ಈ ಕೆಲಸ ಸಿಗುವ ರೀತಿಯಲ್ಲಿ ಸಹಾಯ ಮಾಡಬಹುದಾಗಿದೆ.
ಹೆಚ್ಚುತ್ತಿರುವಂತಹ ನಿರುದ್ಯೋಗ ದೇಶಕ್ಕೆ ಒಳ್ಳೆಯದಲ್ಲ. ಈ ರೀತಿ ಉದ್ಯೋಗ ಅವಕಾಶಗಳು ಸೃಷ್ಟಿಯಾದಾಗ ಅಂತಹ ನಿರುದ್ಯೋಗಿಗಳಿಗೆ ಮಾಹಿತಿಯನ್ನು ತಲುಪಿಸುವ ಮೂಲಕ ಅವರಿಗೂ ಕೂಡ ಕೆಲಸ ಸಿಗುವಂತೆ ಮಾಡುವುದು ಇನ್ನಷ್ಟು ಉತ್ತಮ ಎಂದು ಹೇಳಬಹುದು. ಅದರಲ್ಲಿಯೂ ಈ ಕೆಲಸ ಸಿಕ್ಕಿರೋದು ಬಿಬಿಎಂಪಿಯಲ್ಲಿ ಹೀಗಾಗಿ ಇದು ಮತ್ತೊಂದು ಖುಷಿಪಡುವ ವಿಚಾರವಾಗಿದೆ.
ಹೊಸ ರೇಷನ್ ಕಾರ್ಡ್ ಬಗ್ಗೆ ಅಪ್ಡೇಟ್; ಮೇ ತಿಂಗಳಿನ ಹೊಸ ಲಿಸ್ಟ್ ಬಿಡುಗಡೆ ಆಗಿದೆ
If you can speak Kannada, you will get BBMP job with Good Salary